Site icon Vistara News

UP By-election | ಉ. ಪ್ರದೇಶದ ರಾಮ್‌ಪುರದಲ್ಲಿ ಇದೇ ಮೊದಲ ಬಾರಿ ಮುಸ್ಲಿಂ ಶಾಸಕರಿಲ್ಲ! ಬಿಜೆಪಿಗೆ ಅಚ್ಚರಿಯ ಜಯ

akash

ಲಖನೌ: ಉತ್ತರಪ್ರದೇಶದ ರಾಮ್‌ಪುರ ವಿಧಾನಸಭೆ ಕ್ಷೇತ್ರ ಎಂದರೆ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ ಅವರ ಭದ್ರಕೋಟೆ ಎಂದೇ ಪ್ರಸಿದ್ಧ. ಆದರೆ ಈ ಸಲ ಇಲ್ಲಿ ಬಿಜೆಪಿಗೆ ಉಪ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಲಭಿಸಿದೆ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಮ್‌ಪುರ ವಿಧಾನಸಭೆಯಲ್ಲಿ 50% ಕ್ಕೂ ಹೆಚ್ಚು ಮಂದಿ ಮುಸ್ಲಿಮರಿದ್ದಾರೆ.

ಸ್ವಾತಂತ್ರ್ಯಾನಂತರ ಇದುವರೆಗೂ ಇಲ್ಲಿ ಬಿಜೆಪಿ ಗೆದ್ದಿರಲಿಲ್ಲ. ಕಳೆದ ಎರಡು ದಶಕಗಳಿಂದ ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಜಮ್‌ ಖಾನ್‌ ಮತ್ತು ಅವರ ಕುಟುಂಬದ ಸದಸ್ಯರು ಗೆಲ್ಲುತ್ತಿದ್ದರು. ಆದರೆ ಈ ಸಲ ಬಿಜೆಪಿಯ ಅಕಾಶ್‌ ಸಕ್ಸೇನಾ ಅವರು 62%ಕ್ಕೂ ಹೆಚ್ಚು ಮತಗಳನ್ನು ಗಳಿಸಿ ಜಯ ಗಳಿಸಿದ್ದಾರೆ. ರಾಮ್‌ಪುರ ಕ್ಷೇತ್ರದಲ್ಲಿ ಮುಸ್ಲಿಮರು ಕೂಡ ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ.

ಸಮಾಜವಾದಿ ಪಕ್ಷದ ಅಜಂ ಖಾನ್‌ಗೆ ಹಿನ್ನಡೆ:

ಎಸ್ಪಿಯ ಅಜಂ ಖಾನ್‌ ಅವರು ರಾಮ್‌ಪುರದಲ್ಲಿ 1980ರಿಂದ 1995 ಮತ್ತು ೨೦೦೨ರಿಂದ 2022 ತನಕ ರಾಮ್‌ಪುರ ಕ್ಷೇತ್ರದ ಶಾಸಕರಾಗಿದ್ದರು. ಕಳೆದ ಸಲ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಆಕಾಶ್‌ ಸಕ್ಸೇನಾ ಅವರು ಅಜಂ ಖಾನ್‌ ಎದುರು ಪರಾಭವಗೊಂಡಿದ್ದರು. 60% ಮತಗಳಲ್ಲಿ ಅಜಂ ಖಾನ್‌ ಗಳಿಸಿದ್ದರು. ಈ ಸಲ ತದ್ವಿರುದ್ಧವಾಗಿದೆ. ಪ್ರಕರಣವೊಂದರಲ್ಲಿ ಅಜಂ ಖಾನ್‌ ದೋಷಿ ಎಂದು ಸಾಬೀತಾಗಿದ್ದರಿಂದ ಅಜಂ ಖಾನ್‌ ಶಾಸಕತ್ವದಿಂದ ಅನರ್ಹಗೊಂಡಿದ್ದರು. ಆದ್ದರಿಂದ ಮರು ಚುನಾವಣೆಯಲ್ಲಿ ಖಾನ್‌ ಅವರ ಆಪ್ತರೊಬ್ಬರು ಕಣಕ್ಕಿಳಿದಿದ್ದರು.

Exit mobile version