Site icon Vistara News

Independence Day | ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜಕ್ಕೆ ಸ್ವದೇಶಿ 21 ಗನ್‌ ಸೆಲ್ಯೂಟ್

atags

ನವ ದೆಹಲಿ: ಮೊಟ್ಟ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕೆಂಪು ಕೋಟೆಯಲ್ಲಿ ಸಾಂಪ್ರದಾಯಿಕ ೨೧ ಗನ್‌ ಸೆಲ್ಯೂಟ್ ಅನ್ನು ಸ್ವದೇಶಿ ನಿರ್ಮಿತ ಗನ್‌ಗಳನ್ನು (Independence Day ) ಬಳಸಿ ಸಲ್ಲಿಸಲಾಯಿತು.

ಡಿಆರ್‌ಡಿಒ (ಡಿಫೆನ್ಸ್‌ ಆರ್&ಡಿ ಆರ್ಗನೈಸೇಶನ್)‌ ನೆರವಿನೊಂದಿಗೆ ಅಭಿವೃದ್ಧಿಪಡಿಸಿರುವ ಸ್ವದೇಶಿ ಗನ್‌ಗಳ ಮೂಲಕ ಗುಂಡುಗಳನ್ನು ಹಾರಿಸುವ ಮೂಲಕ ಸಾಂಪ್ರದಾಯಿಕ ಗನ್‌ ಸಲ್ಯೂಟ್‌ ಕಾಯಕ್ರಮವನ್ನು ಆಚರಿಸಲಾಯಿತು. ಟಾಟಾ ಏರಪಸ್ಪೇಸ್‌ & ಡಿಫೆನ್ಸ್‌ ಮತ್ತು ಭಾರತ್‌ ಫೋರ್ಜ್‌ ಸಹಯೋಗದಲ್ಲಿ ಈ ಗನ್‌ಗಳನ್ನು ತಯಾರಿಸಲಾಗಿದೆ.

“ಇದೊಂದು ಐತಿಹಾಸಿಕ ಕ್ಷಣವಾಗಿದೆ. ೭೫ನೇ ಸ್ವಾತಂತ್ರ್ಯ ಮಹೋತ್ಸವದ ಸಂದರ್ಭಕ್ಕೆ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ಗನ್‌ಗಳನ್ನು ಗನ್‌ ಸಲ್ಯೂಟ್‌ನಲ್ಲಿ ಬಳಸಲಾಗಿದೆ. ಗನ್‌ಪೌಡರ್‌ ಮತ್ತು ಗನ್‌ಗಳ ಸಂಶೋಧನೆ ಆದಂದಿನಿಂದ ಗನ್‌ ಸಲ್ಯೂಟ್‌ ಕೂಡ ಆರಂಭವಾಗಿದೆ. ೧೯೪೭ರಲ್ಲಿ ಭಾರತ ಸ್ವಾತಂತ್ರ್ಯ ಗಳಿಸಿದ ಬಳಿಕ ಇತರ ದೇಶಗಳ ಮಾದರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನದಂದು ೨೧ ಗನ್‌ ಸಲ್ಯೂಟ್‌ ಆರಂಭವಾಯಿತು.

ಎಟಿಎಜಿಎಸ್‌ ಸ್ವದೇಶಿ ನಿರ್ಮಿತ ೧೫೫ಎಂಎಂx52 ಕ್ಯಾಲಿಬರ್‌ howitzer ಗನ್‌ ಆಗಿದೆ. ನ್ಯಾಟೊ ದರ್ಜೆಯನ್ನು ಒಳಗೊಂಡಿರುವ ಅತ್ಯಾಧುನಿಕ ಗನ್‌ ಇದಾಗಿದೆ. ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿಯವರು ತ್ರಿವರ್ಣ ಧ್ವಜಾರೋಹಣವನ್ನು ನೆರವೇರಿಸಿದ ಬಳಿಕ ಮಿಲಿಟರಿ ಬ್ಯಾಂಡ್‌ನಿಂದ ರಾಷ್ಟ್ರೀಯ ಗೀತೆಯನ್ನು ನುಡಿಸಲಾಗುತ್ತದೆ. ಈ ಸಂದರ್ಭ ೨೧ ಗನ್‌ ಸಲ್ಯೂಟ್‌ ಕಾಯಕ್ರಮ ನಡೆಯುತ್ತದೆ. ಅಡ್ವಾನ್ಸ್ಡ್‌ ಟೋವ್ಡ್‌ ಆರ್ಟಿಲರಿ ಗನ್‌ ಸಿಸ್ಟಮ್‌ (Advanced Towed Artillery Gun System) ಎಂಬ ವಿಶೇಷ ಗನ್‌ ವ್ಯವಸ್ಥೆಯನ್ನು ಇದೀಗ ಅಭಿವೃದ್ಧಿಪಡಿಸಲಾಗಿದೆ. ೨೦೧೩ರಲ್ಲಿ ಡಿಆರ್‌ಡಿಒ ಎಟಿಎಜಿಎಸ್‌ ಪ್ರಾಜೆಕ್ಟ್‌ ಅನ್ನು ಆರಂಭಿಸಿತ್ತು. ಇದರೊಂದಿಗೆ ಹಳೆಯ ಗನ್‌ಗಳ ಬದಲಿಗೆ ೧೫೫ ಎಂಎಂ ಆರ್ಟಿಲರಿ ಗನ್‌ ತಯಾರಿಕೆ ಆರಂಭವಾಗಿತ್ತು.

Exit mobile version