Site icon Vistara News

Forced Conversions | ದೇಶದ ಭದ್ರತೆಗೆ ಬಲವಂತದ ಮತಾಂತರ ಅಪಾಯ ಎಂದ ಅಮಿತ್‌ ಶಾ, ಶೀಘ್ರವೇ ಮತಾಂತರ ನಿಷೇಧ?

Amit Shah On Forced Conversion

ನವದೆಹಲಿ: ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರಲಾಗಿದೆ. ಬೇರೆ ರಾಜ್ಯಗಳಲ್ಲೂ ಇಂತಹ ನಿಯಮ ಇದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಜಾರಿಗೆ ಚಿಂತನೆ ನಡೆದಿದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ (Forced Conversions) ಜಾರಿಗೆ ತರುವ ಸುಳಿವು ನೀಡಿದ್ದಾರೆ.

ಸಂಸತ್ತಿನಲ್ಲಿ ಮಾತನಾಡಿದ ಅಮಿತ್‌ ಶಾ, “ದೇಶದ ಭದ್ರತೆಗೆ ಬಲವಂತದ ಮತಾಂತರವು ಅಪಾಯಕಾರಿಯಾಗಿದೆ. ಆದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇಂತಹ ಚಟುವಟಿಕೆಗಳಿಗೆ ಆಸ್ಪದ ಕೊಡುವುದಿಲ್ಲ. ಯಾರು ನಿಯಮ ಪಾಲಿಸುವುದಿಲ್ಲವೋ, ಯಾರು ಬಲವಂತದ ಮತಾಂತರದಲ್ಲಿ ತೊಡಗುತ್ತಾರೋ, ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದೆ ಬಿಡುವುದಿಲ್ಲ” ಎಂದು ಎಚ್ಚರಿಸಿದರು.

ಬಲವಂತದ ಮತಾಂತರದ ಕುರಿತು ಅಮಿತ್‌ ಶಾ ಮಾತನಾಡಿರುವ ಕಾರಣ ಮತಾಂತರ ನಿಷೇಧಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನು ಕಾಂಗ್ರೆಸ್‌ ವಿರುದ್ಧ ಮಾತನಾಡಿದ ಅವರು, “ಯುಪಿಎ ಆಡಳಿತದಲ್ಲಿ ಬಲವಂತದ ಮತಾಂತರ ತಡೆಯುವ ದಿಸೆಯಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗ ಮಾತ್ರ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ” ಎಂದು ಹೇಳಿದರು.

ಇದನ್ನೂ ಓದಿ | Conversion allegation | ಆಮಿಷ ಒಡ್ಡಿ ಮತಾಂತರ ಆರೋಪ: ಮೂವರು ಕ್ರೈಸ್ತ ಧರ್ಮದ ಪ್ರಚಾರಕರ ಬಂಧನ

Exit mobile version