Site icon Vistara News

CV Ananda Bose | ಮ್ಯಾನ್‌ ಆಫ್‌ ಐಡಿಯಾಸ್‌ ಖ್ಯಾತಿಯ ಸಿ.ವಿ ಆನಂದ ಬೋಸ್‌ ಈಗ ಪಶ್ಚಿಮ ಬಂಗಾಳ ಗವರ್ನರ್

C V Ananda Bose West Bengal Governor

ನವದೆಹಲಿ:‌ ನಿವೃತ್ತ ಐಎಎಸ್‌ ಅಧಿಕಾರಿ, ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಅಜೆಂಡಾ ತಂಡದಲ್ಲಿದ್ದ ಡಾ.ಸಿ.ವಿ. ಆನಂದ ಬೋಸ್‌ (CV Ananda Bose) ಅವರನ್ನು ಪಶ್ಚಿಮ ಬಂಗಾಳ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಇವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ.

“ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಾ.ಸಿ.ವಿ. ಆನಂದ ಬೋಸ್‌ ಅವರನ್ನು ಪಶ್ಚಿಮ ಬಂಗಾಳ ರಾಜ್ಯಪಾಲರನ್ನಾಗಿ ನೇಮಿಸಿದ್ದಾರೆ. ರಾಷ್ಟ್ರಪತಿ ಆದೇಶದ ಪ್ರಕಾರ ಕೂಡಲೇ ಆನಂದ ಬೋಸ್‌ ಅವರು ಅಧಿಕಾರ ಸ್ವೀಕರಿಸಲಿದ್ದಾರೆ” ಎಂದು ರಾಷ್ಟ್ರಪತಿಯವರ ಮಾಧ್ಯಮ ಕಾರ್ಯದರ್ಶಿ ಅಜಯ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.

ಜಗದೀಪ್‌ ಧನ್‌ಕರ್‌ ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. ಆದರೆ, ಅವರು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಕಾರಣ ಹುದ್ದೆ ತೆರವಾಗಿತ್ತು. ಇದುವರೆಗೆ ಮಣಿಪುರ ರಾಜ್ಯಪಾಲ ಲಾ ಗಣೇಶನ್‌ ಅವರಿಗೆ ಪಶ್ಚಿಮ ಬಂಗಾಳದ ಗವರ್ನರ್‌ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು.

ಮ್ಯಾನ್‌ ಆಫ್‌ ಐಡಿಯಾಸ್‌ ಎಂಬ ಖ್ಯಾತಿ
1977ರಲ್ಲಿ ನಾಗರಿಕ ಸೇವಾ ಕ್ಷೇತ್ರ ಪ್ರವೇಶಿಸಿದ (ಐಎಎಸ್) ಆನಂದ ಬೋಸ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮ್ಯಾನ್‌ ಆಫ್‌ ಐಡಿಯಾಸ್‌ ಎಂದೇ ಬಣ್ಣಿಸಿದ್ದಾರೆ. ಕೇರಳ ಮುಖ್ಯಮಂತ್ರಿಯವರ ಕಾರ್ಯದರ್ಶಿ, ಹತ್ತಾರು ಸಚಿವರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅನುಭವವಿರುವ ಇವರು, ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಅಜೆಂಡಾ ತಂಡದಲ್ಲಿದ್ದರು. ಕೇಂದ್ರ ಸರ್ಕಾರದ “ಎಲ್ಲರಿಗೂ ವಸತಿ” ಯೋಜನೆಯ ಐಡಿಯಾ ಕೊಟ್ಟಿದ್ದೇ ಇವರು. ಸಾಹಿತಿಯೂ ಆಗಿರುವ ಬೋಸ್‌, ಹಿಂದಿ, ಇಂಗ್ಲಿಷ್‌ ಹಾಗೂ ಮಲಯಾಳಂನಲ್ಲಿ 40 ಕೃತಿ ರಚಿಸಿದ್ದಾರೆ. ಹತ್ತಾರು ಕ್ಷೇತ್ರಗಳಲ್ಲಿ ಇವರು ಸಲ್ಲಿಸಿದ ಸೇವೆ ಪರಿಗಣಿಸಿ 29 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿವೆ.

ಇದನ್ನೂ ಓದಿ | Kerala Governor VS LDF | ಡೀಮ್ಡ್ ವಿವಿ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರನ್ನು ಕೆಳಗಿಳಿಸಿದ ಕೇರಳ ಸರ್ಕಾರ

Exit mobile version