Site icon Vistara News

ಬಿಜೆಪಿಯ ಮಾಜಿ ಸಿಎಂಗಳು, ಕೇಂದ್ರ ಸಚಿವರಿಗೆ ಹೊಸ ಹೊಣೆಗಾರಿಕೆ, ನಾನಾ ರಾಜ್ಯಗಳ ಉಸ್ತುವಾರಿ ಹಂಚಿಕೆ

bjp

ನವ ದೆಹಲಿ : ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಿಗೆ ಹೊಸ ಜವಾಬ್ದಾರಿಗಳನ್ನು ಹಂಚಲಾಗಿದ್ದು, ನಾನಾ ರಾಜ್ಯಗಳ ಪಕ್ಷದ ವ್ಯವಹಾರಗಳ ಉಸ್ತುವಾರಿ ವಹಿಸಲಾಗಿದೆ ಗುಜರಾತ್‌ನ ಮಾಜಿ ಸಿಎಂ ವಿಜಯ್‌ ರೂಪಾನಿ, ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್, ದೇಬ್‌ ಮಾಜಿ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಸೇರಿದಂತೆ ಹಲವರಿಗೆ ವಿವಿಧ ರಾಜ್ಯಗಳಲ್ಲಿ ಪಕ್ಷ ಕಟ್ಟುವ ಹೊಣೆಗಾರಿಕೆ ನೀಡಲಾಗಿದೆ ಎಂದು ಬಿಜೆಪಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರೂಪಾನಿ ಅವರಿಗೆ ಪಂಜಾಬ್‌ ಹಾಗೂ ಚಂಡೀಗಢದ ನೇತೃತ್ವ ವಹಿಸಿದ್ದರೆ, ಬಿಪ್ಲಬ್‌ ದೇಬ್‌ ಅವರಿಗೆ ಹರಿಯಾಣ, ಜಾವಡೇಕರ್‌ ಅವರಿಗೆ ಕೇರಳದ ಹೊಣೆಗಾರಿಕೆ ವಹಿಸಲಾಗಿದೆ. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ವಿನೋದ್‌ ತಾವ್ಡೆ ಅವರಿಗೆ ಬಿಹಾರದ ಉಸ್ತುವಾರಿ ವಹಿಸಲಾಗಿದ್ದು, ಬಿಹಾರದ ಸಚಿವರಿಗೆ ಪಶ್ಚಿಮ ಬಂಗಾಳದ ಉಸ್ತುವಾರಿ ನೀಡಲಾಗಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರಾ ಅವರನ್ನು ಈಶಾನ್ಯ ರಾಜ್ಯಗಳ ಸಂಯೋಜಕರಾಗಿ ನೇಮಿಸಲಾಗಿದ್ದರೆ, ರಾಷ್ಟ್ರೀಯ ಕಾರ್ಯದರ್ಶಿ ಋತುರಾಜ್ ಸಿನ್ಹಾ ಅವರಿಗೆ ಜಂಟಿ ಸಂಯೋಜಕ ಹುದ್ದೆಯನ್ನು ನೀಡಲಾಗಿದೆ. ಇದರೊಂದಿಗೆ ಪಕ್ಷದಲ್ಲಿ ಯಾವುದೇ ಸಾಂಸ್ಥಿಕ ಹುದ್ದೆಯನ್ನು ಹೊಂದಿರದ ಹಿರಿಯ ನಾಯಕರಿಗೆ ಹೊಸ ಜವಾಬ್ದಾರಿಯನ್ನು ವಹಿಸಲಾಗಿದೆ.

ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಚುನಾವಣಾ ಸಮಿತಿಯ ಸದಸ್ಯ ಓಂ ಮಾಥುರ್‌ ಅವರಿಗೆ ಚತ್ತೀಸ್‌ಗಢದ ಉಸ್ತುವಾರಿ ನೀಡಲಾಗಿದ್ದು, ಉತ್ತರ ಪ್ರದೇಶ ಘಟಕದ ಮಾಜಿ ಅಧ್ಯಕ್ಷ ಲಕ್ಷ್ಮೀಕಾಂತ್‌ ಬಾಜಪೇಯಿ ಅವರು ಜಾರ್ಖಂಡನ್ ಪಕ್ಷದ ಚಟುವಟಿಕೆಗಳನ್ನು ನೋಡಿಕೊಳ್ಳಲಿದ್ದಾರೆ.

೨೦೨೩ರಲ್ಲಿ ನಡೆಯುವ ನಾನಾ ರಾಜ್ಯಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಿರಿಯ ನಾಯಕರಿಗೆ ಹುದ್ದೆಗಳನ್ನು ನೀಡಲಾಗಿದೆ. ವರ್ಷಾರಂಭದಲ್ಲಿ ತ್ರಿಪುರಾ, ಮೇಘಾಲಯ ಹಾಗೂ ನಾಗಾಲ್ಯಾಂಡ್‌ಗೆ ಚುನಾವಣೆ ನಡೆದರೆ ಬಳಿಕ ಕರ್ನಾಟಕದಲ್ಲಿ ಚುನಾವಣೆ ಆಗಲಿದೆ.

ಇದನ್ನೂ ಓದಿ | Bharat Jodo Yatra | ರಾಹುಲ್ ಗಾಂಧಿ ಟಿ ಶರ್ಟ್​​ ಬೆಲೆ 41 ಸಾವಿರ! ಬಿಜೆಪಿ-ಕಾಂಗ್ರೆಸ್‌ ಜಟಾಪಟಿ

Exit mobile version