ಗಾಂಧಿನಗರ: ಗುಜರಾತ್ ಮಾಜಿ ಮುಖ್ಯಮಂತ್ರಿ, ರಾಜ್ಯದ “ಎವರ್‌ಗ್ರೀನ್ ರಾಜಕಾರಣಿ” ಎಂದೇ ಖ್ಯಾತಿಯಾಗಿರುವ ಶಂಕರ್‌ಸಿಂಗ್ ವಘೇಲಾ ಅವರು ನೂತನ ಪಕ್ಷ (Janshakti Democratic Party) ಘೋಷಿಸಿದ್ದಾರೆ. ಅಲ್ಲದೆ, ಗುಜರಾತ್‌ನಲ್ಲಿ ವರ್ಷಾಂತ್ಯದ ವೇಳೆಗೆ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ನೂತನ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.
ಜನಶಕ್ತಿ ಡೆಮಾಕ್ರಟಿಕ್ ಪಾರ್ಟಿ (ಜೆಡಿಪಿ) ಎಂಬುದು ಅವರ ನೂತನ ಪಕ್ಷ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಅವರು ರಾಜ್ಯದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಕುರಿತು ಕಾಂಗ್ರೆಸ್ ಕೂಡ ವಘೇಲಾ ಬಳಿ ಪ್ರಸ್ತಾಪ ಇರಿಸಿತ್ತು. ಆದರೆ, ಕಾಂಗ್ರೆಸ್ ಪ್ರಸ್ತಾಪವನ್ನು ತಿರಸ್ಕರಿಸಿದ ವಘೇಲಾ ನೂತನ ಪಕ್ಷ ಸ್ಥಾಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊದಲು ಜನಸಂಘ(ಈಗಿನ ಬಿಜೆಪಿ)ದಲ್ಲಿದ್ದ ಶಂಕರ್‌ಸಿಂಗ್, ಬಳಿಕ ಭಿನ್ನಾಭಿಪ್ರಾಯದಿಂದ ಬಿಜೆಪಿ ತೊರೆದು ರಾಷ್ಟ್ರೀಯ ಜನತಾ ಪಾರ್ಟಿ (ಆರ್‌ಜೆಪಿ) ಪಕ್ಷ ಸ್ಥಾಪಿಸಿದ್ದರು. ೧೯೯೬-೧೯೯೭ರ ಅವಧಿಯಲ್ಲಿ ಬಿಜೆಪಿಯಿಂದ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವರು, ಬಳಿಕ ತಾವು ಸ್ಥಾಪಿಸಿದ್ದ ಹೊಸ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಿದ್ದರು. ಕಾಂಗ್ರೆಸ್‌ನಿಂದಲೂ ಹೊರಬಂದ ಅವರು ೨೦೧೯-೨೦ರ ಅವಧಿಯಲ್ಲಿ ಎನ್‌ಸಿಪಿಯಲ್ಲಿದ್ದರು. ಈಗ ಹೊಸ ಪಕ್ಷ ಘೋಷಿಸಿದ್ದಾರೆ.
ಇದನ್ನೂ ಓದಿ | Gujarat Cabinet | ಗುಜರಾತ್‌ನಲ್ಲಿ ಇಬ್ಬರು ಸಚಿವರ ಖಾತೆ ವಾಪಸ್, ಚುನಾವಣೆಗೆ ಮುನ್ನ ಬಿಜೆಪಿಯಲ್ಲಿ ಬಿಕ್ಕಟ್ಟು?