ಮುಂಬೈ: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಾಯಕ ಅನಿಲ್ ದೇಶಮುಖ್ (Anil Deshmukh) ಅವರಿಗೆ ಸೋಮವಾರ ಬಾಂಬೆ ಹೈಕೋರ್ಟ್ (Bombay High Court) ಜಾಮೀನು ನೀಡಿದೆ.
ಸಿಬಿಐ, ದೇಶಮುಖ್ ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿತ್ತು. ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಮಕ್ರಂದ್ ಎಸ್ ಕಾರ್ಣಿಕ್ ಅವರು ಗುರುವಾರವೇ ವಿಚಾರಣೆಯನ್ನು ಪೂರ್ಣಗೊಳಿಸಿದ್ದರು. ಈಗ ಅವರು ತಮ್ಮ ತೀರ್ಪು ಪ್ರಕಟಿಸಿದ್ದಾರೆ. ಅನಿಲ್ ದೇಶಮುಖ್ ಅವರಿಗೆ ಜಾಮೀನು ನೀಡದಂತೆ ಸಿಬಿಐ ಮನವಿ ಮಾಡಿಕೊಂಡಿತ್ತು.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ನವೆಂಬರ್‌ನಲ್ಲಿ ದೇಶಮುಖ್ ಅವರನ್ನು ಬಂಧಿಸಲಾಗಿತ್ತು. ಈ ಮೊದಲು ದೇಶಮುಖ್ ಅವರ ವಿರುದ್ಧ ಜಾರಿ ನಿರ್ದೇಶಾನಲಯವು (ಇ ಡಿ) ಕೇಸ್ ದಾಖಲಿಸಿದರೆ, ಬಳಿಕ ಸಿಬಿಐ ಕೂಡ ಅವರು ವಿರುದ್ಧ ಪ್ರಕರಣವನ್ನು ದಾಖಲಿಸಿತ್ತು. ಇ.ಡಿ ಪ್ರಕರಣದಲ್ಲಿ ಹೈಕೋರ್ಟ್ ದೇಶಮುಖ್ ಅವರಿಗೆ ಕಳೆದ ಅಕ್ಟೋಬರ್ 4ರಂದು ಜಾಮೀನು ನೀಡಿತ್ತು. ಈಗ ಸಿಬಿಐ ದಾಖಲಿಸಿದ ಪ್ರಕರಣದಲ್ಲೂ ಈಗ ಜಾಮೀನು ದೊರೆತಿದೆ.
ಏನಿದು ಪ್ರಕರಣ?
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್‌ವೀರ್ ಸಿಂಗ್ ಅವರು ಅನಿಲ್ ದೇಶಮುಖ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಆ ಬಳಿಕ ಅನಿಲ್ ದೇಶ್‌ಮುಖ್ ಅವರನ್ನು ಗೃಹ ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಕಳೆದ ವರ್ಷದ ನವೆಂಬರ್ 1ರಂದು ಜಾರಿ ನಿರ್ದೇಶನಾಲಯ ದೇಶ್‌ಮುಖ್ ಅವರನ್ನು ಬಂಧಿಸಿತ್ತು
ಇದನ್ನೂ ಓದಿ | ಭ್ರಷ್ಟಾಚಾರ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್ ಬಂಧನ