Site icon Vistara News

Udhayanidhi Stalin: ತಮಿಳುನಾಡು ಸಿಎಂ ಪುತ್ರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸುಪ್ರೀಂಗೆ ಪತ್ರ ಬರೆದ ನಿವೃತ್ತ ಹೈಕೋರ್ಟ್ ಜಡ್ಜ್‌ಗಳು!

Udhayanidhi Stalin

Sanatana Dharma Row: Udhayanidhi Stalin Refuses To Apologise For His Remark

ನವದೆಹಲಿ: ಸನಾತನ ಧರ್ಮದ (Sanatana Dharma Row) ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (Tamil Nadu CM M K Stalin) ಅವರ ಪುತ್ರರೂ ಆಗಿರುವ ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳು(Former High Court Judges), ನಿವೃತ್ತ ಅಧಿಕಾರಿಗಳ 262 ಸದಸ್ಯರ ಗುಂಪು ಸುಪ್ರೀಂ ಕೋರ್ಟ್‌ನ (Supreme Court) ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ ಪತ್ರ ಬೆರದಿದೆ.

ಸನಾತನ ಧರ್ಮವನ್ನು ಅವಹೇಳನ ಮಾಡಿರುವ ಸ್ಟಾಲಿನ್ ಹೇಳಿಕೆಯು ಹೇಟ್ ಸ್ಪೀಚ್ ಆಗಿದ್ದು, ಜನರ ಮಧ್ಯೆ ಪಂಥ ಸಂಘರ್ಷ ಹಾಗೂ ಕೋಮು ಸಾಮರಸ್ಯವನ್ನು ಹಾಳು ಮಾಡುತ್ತದೆ. ಸನಾತನ ಧರ್ಮದಲ್ಲಿ ನಂಬಿಕೆ ಹೊಂದಿವರ ಹೃದಯದಲ್ಲಿ ಮತ್ತು ಮನಸ್ಸಿನಲ್ಲಿ ಉದಯನಿಧಿ ಹೇಳಿಕೆಯು ಆಕ್ರೋಶವನ್ನು ಉಂಟು ಮಾಡುತ್ತದೆ ಎಂದು ಗುಂಪು ಹೇಳಿದೆ.

ಸುಪ್ರೀಂ ಕೋರ್ಟ್‌ಗೆ ಬರೆದಿರುವ ಪತ್ರದ ಸಮನ್ವಯತೆಯನ್ನು ದಿಲ್ಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎಸ್ ಎನ್ ಧಿಂಗ್ರಾ, ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಗೋಪಾಲ್ ಕೃಷ್ಣ ಐಎಎಸ್ ಸೇರಿ 14 ನಿವೃತ್ತ ನ್ಯಾಯಮೂರ್ತಿಗಳು ಮತ್ತು 130 ಅಧಿಕಾರಿಗಳು , 118 ಸೇನಾ ನಿವೃತ್ತ ಅಧಿಕಾರಿಗಳು ಈ ಪತ್ರ ಬರೆದಿದ್ದಾರೆ. ಈ ಪೈಕಿ 20 ರಾಯಭಾರಿಗಳಿದ್ದಾರೆ.

ಈ ಸುದ್ದಿಯನ್ನೂ ಓದಿ: Udhayanidhi Stalin: ಉದಯನಿಧಿಯ ತಲೆ ಕಡಿದು ತಂದರೆ 10 ಕೋಟಿ ಬಹುಮಾನ! ಸ್ಟಾಲಿನ್‌ ಪ್ರತಿಕ್ರಿಯೆ ಏನು?

ಸ್ಟಾಲಿನ್ ಹೇಳಿಕೆ ಕುರಿತು ಆತಂಕ ವ್ಯಕ್ತಪಡಿಸಿರುವ ಈ ಗುಂಪು, ಸನಾತನದ ಧರ್ಮ ಕುರಿತಾದ ಮಾತುಗಳು ನಿರ್ವಿವಾದವಾಗಿ ಭಾರತದ ಒಂದು ದೊಡ್ಡ ಜನಸಂಖ್ಯೆಯ ವಿರುದ್ಧ ದ್ವೇಷದ ಭಾಷಣಕ್ಕೆ ಸಮನಾಗಿರುತ್ತದೆ ಮತ್ತು ಭಾರತವನ್ನು ಜಾತ್ಯತೀತ ರಾಷ್ಟ್ರವಾಗಿ ರೂಪಿಸುವ ಭಾರತದ ಸಂವಿಧಾನದ ತಿರುಳಿಗೆ ಹೊಡೆತ ನೀಡುತ್ತದೆ. ಇದಲ್ಲದೆ, ತಮಿಳುನಾಡು ರಾಜ್ಯ ಸರ್ಕಾರವು ಉದಯನಿಧಿ ಸ್ಟಾಲಿನ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ನಿರಾಕರಿಸಿದಾಗ ಮತ್ತು ಅವರ ಹೇಳಿಕೆಯನ್ನು ಸಮರ್ಥಿಸಲು ನಿರ್ಧರಿಸಿದಾಗ ಕಾನೂನಿನ ನಿಯಮವನ್ನು ಮತ್ತಷ್ಟು ದುರ್ಬಲಗೊಳಿಸಲಾಗಿದೆ ಎಂದು ಹೇಳಿದೆ.

ಶಹೀನ್ ಅಬ್ದುಲ್ಲಾ ವರ್ಸಸ್ ಭಾರತ ಸರ್ಕಾರ ಮತ್ತು ಇತರರು ಹಾಗೂ ಅಶ್ವಿನಿ ಕುಮಾರ್ ಉಪಾಧ್ಯಾಯ ವರ್ಸಸ್ ಭಾರತ್ ಸರ್ಕಾರ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಉಲ್ಲೇಖಿಸಿ, ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version