ಲಖನೌ/ನವದೆಹಲಿ: ಅಕ್ರಮವಾಗಿ ಮಾಂಸ ವ್ಯಾಪಾರದಲ್ಲಿ ತೊಡಗಿದ ಆರೋಪದಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವ, ಬಿಎಸ್‌ಪಿ ನಾಯಕ ಯಾಕೂಬ್ ಖುರೇಷಿ (Yakub Qureshi Arrested) ಹಾಗೂ ಅವರ ಪುತ್ರ ಇಮ್ರಾನ್ ಖುರೇಷಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಪೊಲೀಸರ ನೆರವಿನಿಂದ ಮೀರತ್ ಪೊಲೀಸರು ದೆಹಲಿಯ ಚಾಂದನಿ ಮಹಲ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಇಬ್ಬರೂ ಆರೋಪಿಗಳು ಚಾಂದನಿ ಮಹಲ್‌ನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಅಡಗಿದ್ದರು. ನಿಖರ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಯಾಕೂಬ್ ಖುರೇಷಿ ಅವರು ಪರವಾನಗಿ ಇಲ್ಲದೆಯೇ ಮಾಂಸ ಮಾರಾಟ ದಂಧೆಯಲ್ಲಿ ತೊಡಗಿದ್ದು, ಆಹಾರ ಸಂಸ್ಕರಣೆ ಹಾಗೂ ಪ್ಯಾಕೇಜಿಂಗ್ ಘಟಕಗಳನ್ನು ಹೊಂದಿದ್ದಾರೆ. 2022ರ ಮಾರ್ಚ್‌ನಲ್ಲಿಯೇ ಮೀರತ್ ಪೊಲೀಸರು ಯಾಕೂಬ್ ಖುರೇಷಿ ಒಡೆತನದ ಮಾಂಸದ ಕಾರ್ಖಾನೆಗೆ ದಾಳಿ ನಡೆಸಿ, ಖುರೇಷಿ, ಅವರ ಪತ್ನಿ ಸಂಜೀದಾ ಬೇಗಂ, ಪುತ್ರರಾದ ಇಮ್ರಾನ್ ಹಾಗೂ ಫಿರೋಜ್ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಒಂದು ದಿನದ ಹಿಂದೆಯಷ್ಟೇ ಖುರೇಷಿ ಪುತ್ರ ಫಿರೋಜ್ ಪೊಲೀಸರಿಗೆ ಶರಣಾಗಿದ್ದಾನೆ. ಮಾಯಾವತಿ ಸರ್ಕಾರದಲ್ಲಿ ಖುರೇಷಿ ಸಚಿವರಾಗಿದ್ದರು.
ಇದನ್ನೂ ಓದಿ | Knife Attack | ಸ್ನೇಹಿತರಿಬ್ಬರ ಹತ್ತು ವರ್ಷಗಳ ವೈಮನಸಿಗೆ ಮತ್ತೆ ಜೀವ: ಚಾಕುವಿನಿಂದ ಇರಿದವನ ಬಂಧನ