ನವದೆಹಲಿ: ಆಧುನಿಕ ಭಾರತದ ಇತಿಹಾಸಕ್ಕೆ ನಾಲ್ವರು ಗುಜರಾತಿಗಳ ಕಾಣಿಕೆ ದೊಡ್ಡದಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ (Mahatma Gandhi), ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ (sardar vallabhbhai patel), ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ) (morarji desai) ಮತ್ತು ಹಾಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಈ ನಾಲ್ವರು ಗುಜರಾತಿಗಳು ಆಧುನಿಕ ಭಾರತದ ಇತಿಹಾಸಕ್ಕೆ ಮಹತ್ವದ ಕಾಣಿಕೆ ನೀಡಿದ್ದಾರೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah ಅವರು ಗುರುವಾರ ಹೇಳಿದ್ದಾರೆ.
ಶ್ರೀ ದಿಲ್ಲಿ ಗುಜರಾತಿ ಸಮಾಜ್ ಸಂಘಟನೆಯು 125 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಅವರು, ಗಾಂಧೀಜಿಯವರ ಪ್ರಯತ್ನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು, ಸರ್ದಾರ್ ಪಟೇಲ್ ಅವರಿಂದಾಗಿ ದೇಶವು ಒಗ್ಗೂಡಿತು. ಮೊರಾರ್ಜಿ ದೇಸಾಯಿ ಅವರಿಂದ ದೇಶದ ಪ್ರಜಾಪ್ರಭುತ್ವ ಪುನರುಜ್ಜೀವನಗೊಂಡಿತು. ನರೇಂದ್ರ ಮೋದಿ ಅವರಿಂದಾಗಿ ಈಗ ಭಾರತವು ವಿಶ್ವದಾದ್ಯಂತ ಮನ್ನಣೆ ಪಡೆದುಕೊಳ್ಳುತ್ತಿದೆ ಎಂದು ಹೇಳಿದರು. ಈ ನಾಲ್ವರು ಅತ್ಯುನ್ನತವಾದದುನ್ನು ಸಾಧಿಸಿದ್ದಾರೆ. ಅವರು ದೇಶದ ಹೆಮ್ಮೆ ಎಂದು ಗೃಹ ಸಚಿವ ಶಾ ಅವರು ಹೇಳಿದರು.
ಗುಜರಾತಿ ಸಮುದಾಯವು ಇಡೀ ದೇಶಾದ್ಯಂತವಿದೆ. ಇಡೀ ಜಗತ್ತಿನಾದ್ಯಂತ ತಮ್ಮ ಅಸ್ತಿತ್ವವನ್ನು ಕಾಯ್ದುಕೊಂಡಿದ್ದಾರೆ. ಯಾವುದೇ ಸಮಾದಲ್ಲಿ ಅವರು ಸುಲಭವಾಗಿ ಮಿಳಿತವಾಗುತ್ತಾರೆ ಮತ್ತು ಸೇವೆ ಮಾಡುತ್ತಾರೆ ಎಂದು ಗೃಹ ಸಚಿವರು ಹೇಳಿದರು.
ನರೇಂದ್ರ ಮೋದಿ ಅವರು ಈ 9 ವರ್ಷಗಳ ಆಡಳಿತದಲ್ಲಿ ದೇಶವು ಸಾಕಷ್ಟು ಸಾಧನೆಗಳ್ನು ಮಾಡಿದೆ. 2014ರಲ್ಲಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿದ್ದಾಗ ದೇಶದ ಆರ್ಥಿಕತೆಯು 11ನೇ ಸ್ಥಾನದಲ್ಲಿತ್ತು. 9 ವರ್ಷಗಳ ಬಳಿಕ ಅದು ಈಗ 5ನೇ ಸ್ಥಾನದಲ್ಲಿದೆ. ಐಎಂಎಫ್ ಸೇರಿದಂತೆ ಅನೇಕ ಸಂಸ್ಥೆಗಳು ಭಾರತದ ಆರ್ಥಿಕತೆಗೆ ಭವಿಷ್ಯ ಇದೆ ಎಂದು ಹೇಳಿವೆ ಎಂಬ ವಿಷಯವನ್ನು ಗೃಹ ಸಚಿವ ಅಮಿತ್ ಶಾ ಹೇಳಿದರು.
ಮೋದಿ ಅವರ ನಿರ್ಣಾಯಕ ನಾಯಕತ್ವದಲ್ಲಿ ಭಾರತವು ಸರ್ಜಿಕಲ್ ಸ್ಟ್ರೈಕ್ಸ್ ಮತ್ತು ಏರ್ ಸ್ಟ್ರೈಕ್ಸ್‌ಗಳನ್ನು ಕೈಗೊಂಡಿತು. ಆ ಮೂಲಕ, ಯಾರೋಬ್ಬರು ಭಾರತದ ಗಡಿಗಳನ್ನು ನಾಶ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಸಾರಿತು ಎಂದು ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.
ಇದನ್ನೂ ಓದಿ: Muslim Quota: ನ್ಯಾಯಾಲಯದ ಪಾವಿತ್ರ್ಯತೆ ಕಾಪಾಡಬೇಕು; ಅಮಿತ್ ಶಾಗೆ ಸಿದ್ದರಾಮಯ್ಯ ಪಾಠ
130 ಕೋಟಿ ಜನಸಂಖ್ಯೆ ಹೊಂದಿರುವ ಅತಿ ದೊಡ್ಡ ರಾಷ್ಟ್ರ ಭಾರತದಲ್ಲಿ ಸರ್ಕಾರವು ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಅವರು ನಾಯಕತ್ವದಲ್ಲಿ ಭಾರತವು ಜಗತ್ತಿನ ಅತಿದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರವಾಗಿದೆ. ಸ್ಟಾರ್ಟ್‌ಅಪ್ಸ್ ವಿಷಯದಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಮರುಬಳಕೆಯ ಇಂಧನ ಉತ್ಪಾದನೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದೇವೆ ಎಂದು ಗೃಹ ಸಚಿವರು ಹೇಳಿದರು.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.