ನವದೆಹಲಿ: ತೆಂಗು ಬೆಳೆಗಾರರು ಹಾಗೂ ಬಡವರಿಗೆ ಕೇಂದ್ರ ಸರ್ಕಾರ ಹೊಸ ವರ್ಷದ ಭರ್ಜರಿ ಕೊಡುಗೆ ನೀಡಿದೆ. ಕೊಬ್ಬರಿಗೆ ಬೆಂಬಲ ಬೆಲೆ (MSP For Copra) ಘೋಷಿಸುವ ಜತೆಗೆ ಬಡವರಿಗೆ ಇನ್ನೂ ಒಂದು ವರ್ಷ ಉಚಿತವಾಗಿ ಆಹಾರ ಧಾನ್ಯ ವಿತರಿಸಲು ಕೇಂದ್ರ ಸಂಪುಟ ಸಭೆ ತೀರ್ಮಾನಿಸಿದೆ.
2023ರ ಸಾಲಿನಲ್ಲಿ ಒಂದು ಕ್ವಿಂಟಾಲ್ ಮಿಲ್ಲಿಂಗ್ ಕೊಬ್ಬರಿ (ಎರಡು ಭಾಗ ಮಾಡಿದ ಕೊಬ್ಬರಿ)ಗೆ 270 ರೂ. ಹಾಗೂ ದುಂಡು ಕೊಬ್ಬರಿಗೆ 750 ರೂ. ಬೆಂಬಲ ಬೆಲೆ ಘೋಷಿಸಿದೆ. ಇದರಿಂದ ಇನ್ನು ಮಿಲ್ಲಿಂಗ್ ಕೊಬ್ಬರಿಗೆ 10,860 ರೂ. ಹಾಗೂ ದುಂಡು ಕೊಬ್ಬರಿಗೆ 11,750 ರೂ. ಬೆಂಬಲ ಬೆಲೆ ಸಿಗಲಿದೆ.
81.35 ಕೋಟಿ ಬಡವರಿಗೆ ಉಚಿತ ಆಹಾರ ಧಾನ್ಯ
ದೇಶದ 81.35 ಕೋಟಿ ಬಡವರಿಗೆ ಈಗಾಗಲೇ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡುತ್ತಿರುವುದನ್ನು 2023 ಡಿಸೆಂಬರ್‌ಗೆ ವಿಸ್ತರಣೆ ಮಾಡಲಾಗಿದೆ. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿ 5 ಕೆಜಿವರೆಗೆ ಪಡಿತರ ನೀಡಲಾಗುತ್ತಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ 2 ಲಕ್ಷ ಕೋಟಿ ರೂ. ವೆಚ್ಚವಾಗುತ್ತದೆ.
ಇದನ್ನೂ ಓದಿ | Shimoga News | ಜ.1ರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಕಾರ್ಯಾರಂಭ: ಡಾ.ಆರ್. ಸೆಲ್ವಮಣಿ