ನವ ದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲೂ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಮಾಡಲು ಮುಂದಾಗಿವೆ. ನವೆಂಬರ್ 1ರಿಂದ ಪೆಟ್ರೋಲ್- ಡೀಸೆಲ್ ಬೆಲೆ ಲೀಟರ್ಗೆ 40 ಪೈಸೆ ಕಡಿತಗೊಳಿಸುವುದಾಗಿ ಅಕ್ಟೋಬರ್ 31ರಂದು ತೈಲ ಮಾರುಕಟ್ಟೆ ಕಂಪನಿಗಳು ಹೇಳಿದ್ದವು. ಆದರೆ ನಂತರ ಆ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಲಾಗಿತ್ತು.
ಆದರೆ ಈ ಮಧ್ಯೆ ಇನ್ನೊಂದು ಗುಡ್ನ್ಯೂಸ್ ಸಿಕ್ಕಿದೆ. ಶೀಘ್ರದಲ್ಲೇ ಭಾರತದ ತೈಲ ಕಂಪನಿಗಳು ಪೆಟ್ರೋಲ್-ಡೀಸೆಲ್ ಬೆಲೆಯನ್ನು ಲೀಟರ್ಗೆ 2 ರೂಪಾಯಿ ಕಡಿತಗೊಳಿಸಲಿವೆ ಎಂದು CNBC Awaaz ಮಾಧ್ಯಮ ವರದಿ ಮಾಡಿದೆ. ಒಂದೇ ಬಾರಿಗೆ ಇಂಧನ ಬೆಲೆ ಕಡಿತಗೊಳಿಸುವುದಿಲ್ಲ, ಬದಲಿಗೆ ಐದು ಕಂತುಗಳಲ್ಲಿ (ಐದು ದಿನಗಳು) ಪೆಟ್ರೋಲ್-ಡೀಸೆಲ್ ಬೆಲೆ ಲೀಟರ್ಗೆ 40 ಪೈಸೆ ಇಳಿಕೆ ಮಾಡಿ, ಒಟ್ಟು 2 ರೂಪಾಯಿ ಕಡಿಮೆಗೊಳಿಸಲಿವೆ ಎಂದು ಸಿಎನ್ಬಿಸಿ ಆವಾಜ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಮಹಾನಗರಗಳಲ್ಲಿ ಇಂದಿನ ದರ ಏನಿದೆ?
ಬೆಂಗಳೂರು: ಪೆಟ್ರೋಲ್ ಲೀಟರ್ಗೆ-101.94 ರೂ., ಡೀಸೆಲ್-87.89
ಲಖನೌ: ಪೆಟ್ರೋಲ್-96.57, ಡೀಸೆಲ್-89.76 ರೂ.
ಕೋಲ್ಕತ್ತ: ಪೆಟ್ರೋಲ್-106.03 ರೂ, ಡೀಸೆಲ್-92.76 ರೂ.
ದೆಹಲಿ: ಪೆಟ್ರೋಲ್-96.72 ರೂ., ಡೀಸೆಲ್-89.62 ರೂ.
ನೊಯ್ಡಾ: ಪೆಟ್ರೋಲ್ 96.20 ರೂ., ಡೀಸೆಲ್- 84.26 ರೂ.
ಮುಂಬೈ: ಪೆಟ್ರೋಲ್-106.31 ರೂ., ಡೀಸೆಲ್ 94.27 ರೂ.
ಚೆನ್ನೈ: ಪೆಟ್ರೋಲ್-102.63 ರೂ., ಡೀಸೆಲ್-94.24 ರೂ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಹಗಲು ದರೋಡೆ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ