ಕೇಪ್ಟೌನ್: ಭಾರತ ಮತ್ತು ದಕ್ಷಿಣ ಆಫ್ರಿಕಾ (Ind vs SA) ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಒಟ್ಟು 23 ವಿಕೆಟ್ ಗಳು ಪತನಗೊಂಡಿವೆ. ಇದು ಟೆಸ್ಟ್ ನ ಮೊದಲ ದಿನದಂದು ಬಿದ್ದ ಎರಡನೇ ಅತಿ ಹೆಚ್ಚು ವಿಕೆಟ್ಗಳ ಸಂಖ್ಯೆಯಾಗಿದೆ.. ಕೇಪ್ಟೌನ್ನಲ್ಲಿ ನಡೆದ ಮೊದಲ ದಿನದಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಹಾಗೂ ಒಂದೇ ಸೆಷನ್ನಲ್ಲಿ ಆಲ್ಔಟ್ ಆಯಿತು. ನಂತರ, ಭಾರತವು ಉತ್ತಮವಾಗಿ ಪ್ರಾರಂಭಿಸಿತು. ಆದರೆ ಅಂತಿಯಮವಾಗಿ ಏಕಾಏಕಿ ಬ್ಯಾಟಿಂಗ್ ಕುಸಿತ ಕಂಡಿತು. ನಂತರ ಮೂರನೇ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ 3 ವಿಕೆಟ್ ಕಳೆದುಕೊಂಡಿತು. 1902ರಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ಮೊದಲ ದಿನವೇ 25 ವಿಕೆಟ್ ಉರುಳಿ ಹೋಗಿತ್ತು.
— Cricket Videos (@cricketvid123) January 3, 2024
1888ರಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ಒಂದೇ ದಿನ ಅತಿ ಹೆಚ್ಚು ವಿಕೆಟ್ ಬಿದ್ದಿದ್ದು ಇದುವರೆಗಿನ ಗರಿಷ್ಠ ವಿಕೆಟ್. ಭಾರತ ತಂಡ ಇದೇ ಮೊದಲ ಬಾರಿಗೆ ರನ್ ಗಳಿಸದೆ ಸತತ ಆರು ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ ಭಾರತ 4 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತ್ತು. ಆದರೆ ಮುಂದಿ 11 ಎಸೆತಗಳಲ್ಲಿ ಭಾರತ ಆಲೌಟ್ ಆಯಿತು.
ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರು ಡಕ್ ಔಟ್ ಆದರು. ಒಂದೇ ಟೆಸ್ಟ್ ಇನಿಂಗ್ಸ್ನಲ್ಲಿ ಜಂಟಿಯಾಗಿ ಅತಿ ಹೆಚ್ಚು ಡಕ್ ಔಟ್ ಆದ ದಾಖಲೆ ಇದಾಗಿದೆ. ಪಾಕಿಸ್ತಾನ (1980 ರಲ್ಲಿ ಕರಾಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ), ದಕ್ಷಿಣ ಆಫ್ರಿಕಾ (1996 ರಲ್ಲಿ ಅಹಮದಾಬಾದ್ನಲ್ಲಿ (ಭಾರತದ ವಿರುದ್ಧ), ಬಾಂಗ್ಲಾದೇಶ (2002 ರಲ್ಲಿ ಢಾಕಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ), ಮತ್ತು ನ್ಯೂಜಿಲೆಂಡ್ (2018 ರಲ್ಲಿ ದುಬೈನಲ್ಲಿ ಪಾಕಿಸ್ತಾನ ವಿರುದ್ಧ) ಈ ಕಳಪೆ ಸಾಧನೆ ಮಾಡಿತ್ತು.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 23.2 ಓವರ್ಗಳಲ್ಲಿ ಕೇವಲ 55 ರನ್ಗಳಿಗೆ ಆಲೌಟ್ ಆಯಿತು, ಕೈಲ್ ವೆರೆನ್ನೆ (15) ಮತ್ತು ಡೇವಿಡ್ ಬೆಡಿಂಗ್ಹ್ಯಾಮ್ (12) ಎರಡಂಕಿ ಮುಟ್ಟಿದ ಆಟಗಾರರು. ಮೊಹಮ್ಮದ್ ಸಿರಾಜ್ 15ಕ್ಕೆ 6 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ (25ಕ್ಕೆ 2) ಹಾಗೂ ಮುಖೇಶ್ ಕುಮಾರ್ 2 ವಿಕೆಟ್ ಪಡೆದರು.
ಇದನ್ನೂ ಓದಿ : Virat kohli : ಎಲ್ಗರ್ ವಿಕೆಟ್ಗೆ ಸಂಭ್ರಮಿಸದಂತೆ ಹೇಳಿ ಮನಗೆದ್ದ ಕೊಹ್ಲಿ
ವಿರಾಟ್ ಕೊಹ್ಲಿ (59 ಎಸೆತಗಳಲ್ಲಿ 46 ರನ್, 6 ಬೌಂಡರಿ ಮತ್ತು ಒಂದು ಸಿಕ್ಸರ್), ರೋಹಿತ್ ಶರ್ಮಾ (50 ಎಸೆತಗಳಲ್ಲಿ 39 ರನ್, 7 ಬೌಂಡರಿ) ಮತ್ತು ಶುಭ್ಮನ್ ಗಿಲ್ (55 ಎಸೆತಗಳಲ್ಲಿ 36 ರನ್, ಐದು ಬೌಂಡರಿಗಳೊಂದಿಗೆ) ಅವರ ಉತ್ತಮ ಸ್ಕೋರ್ಗಳೊಂದಿಗೆ ಭಾರತವು ಒಂದು ಹಂತದಲ್ಲಿ 153/4 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್ಗಿಡಿ (30ಕ್ಕೆ 3), ಕಗಿಸೊ ರಬಾಡ (38ಕ್ಕೆ 3) ಹಾಗೂ ನಾಂಡ್ರೆ ಬರ್ಗರ್ (42ಕ್ಕೆ 3) ತಲಾ 3 ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ 3 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದ್ದು, ಐಡೆನ್ ಮಾರ್ಕ್ರಮ್ (36*) ಹೆಚ್ಚಿನ ಸ್ಕೋರ್ ಗಳಿಸಿದರು. ನಾಯಕ ಡೀನ್ ಎಲ್ಗರ್ ತಮ್ಮ ಕೊನೆಯ ಟೆಸ್ಟ್ ಇನ್ನಿಂಗ್ಸ್ ನಲ್ಲಿ 12 ರನ್ ಗಳಿಸಿದರು. ಮುಕೇಶ್ 2 ವಿಕೆಟ್ ಪಡೆದರೆ, ಬುಮ್ರಾ 1 ವಿಕೆಟ್ ಪಡೆದರು.