Site icon Vistara News

G20 Summit 2023: ಜಿ20 ಶೃಂಗಸಭೆಗೆ ಬರುವ ವಿಶ್ವ ನಾಯಕರನ್ನು ಲೈವ್‌ ಆಗಿ ಇಲ್ಲಿ ನೋಡಿ!

G20 Summit 2023

ಹೊಸದಿಲ್ಲಿ: ಈ ವಾರಾಂತ್ಯದಲ್ಲಿ ಹೊಸದಿಲ್ಲಿಯಲ್ಲಿ ಜಿ20 ಶೃಂಗಸಭೆ (G20 Summit 2023) ನಡೆಯುತ್ತಿದೆ. ಜಾಗತಿಕ ಮಟ್ಟದ ಈ ಕಾರ್ಯಕ್ರಮದಲ್ಲಿ ವಿಶ್ವದ ಪ್ರಮುಖ ಆರ್ಥಿಕ ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಈ ಸಭೆಗಳ ಆಗುಹೋಗುಗಳ ಲೈವ್‌ ಅನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

ಶೃಂಗಸಭೆ ಶನಿವಾರ ಆರಂಭಗೊಂಡು ಭಾನುವಾರದವರೆಗೆ ಮುಂದುವರಿಯಲಿದೆ. ಇವರ ಮುಕ್ತ ಓಡಾಟಕ್ಕಾಗಿ ದೆಹಲಿ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಜಿ20 ಶೃಂಗಸಭೆಯ ಸ್ಥಳವಾದ ಪ್ರಗತಿ ಮೈದಾನದಲ್ಲಿ ಮತ್ತು ಸುತ್ತಮುತ್ತಲಿನ ಹೊಸ ದೆಹಲಿ ಜಿಲ್ಲೆಯಲ್ಲಿ ವ್ಯಾಪಕ ಸಂಚಾರ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾರ್ಯಕ್ರಮ ನಡೆಯುತ್ತಿರುವಲ್ಲಿಗೆ ಆಹ್ವಾನಿತರನ್ನು ಹೊರತುಪಡಿಸಿ ಇತರರಿಗೆ ಪ್ರವೇಶವಿಲ್ಲ. ಹೀಗಾಗಿ ನಾವು- ನೀವು ಇದನ್ನು ಆನ್‌ಲೈನ್‌ನಲ್ಲಿ ಮಾತ್ರ ವೀಕ್ಷಿಸಲು ಸಾಧ್ಯ.

G20 ಸಭೆಯ ಅಧಿಕೃತ YouTube ಚಾನಲ್‌ನಲ್ಲಿ ಈವೆಂಟ್ ಅನ್ನು ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಅದನ್ನು ನೀವು ಇಲ್ಲಿ ನೋಡಬಹುದು: ಜಿ20

ಶೃಂಗಸಭೆಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಇದರ ಲೇಟೆಸ್ಟ್‌ ಅಪ್‌ಡೇಟ್‌ಗಳನ್ನು ಪೋಸ್ಟ್ ಮಾಡಲಾಗುತ್ತದೆ. ಕವರೇಜ್‌ನ ಲೈವ್ ಅಪ್‌ಡೇಟ್‌ಗಳನ್ನು ಪಡೆಯಲು ಬಳಕೆದಾರರು ವಿಸ್ತಾರ ನ್ಯೂಸ್‌ ಅನ್ನೂ ಫಾಲೋ ಮಾಡಬಹುದು. ಸಭೆಯ ಫಲಿತಾಂಶಗಳ ಬಗ್ಗೆ ಜನರಿಗೆ ತಿಳಿಸಲು ಶೃಂಗಸಭೆಯ ಸಮಯದಲ್ಲಿ ನಡೆಯುತ್ತಿರುವ ದ್ವಿಪಕ್ಷೀಯ ಸಭೆಗಳ ಕುರಿತು ನಿಯಮಿತವಾಗಿ ಮಾಧ್ಯಮ ಸಂವಾದಗಳು ಇರುತ್ತವೆ.

ಜಿ20 ಶೃಂಗಸಭೆಯು ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ನಡೆಯಲಿದೆ. ಸ್ಥಳವನ್ನು ಸರ್ವಸಜ್ಜಿತಗೊಳಿಸಲಾಗಿದ್ದು, ಪ್ರವೇಶದ್ವಾರದಲ್ಲಿ 27 ಅಡಿ ನಟರಾಜನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಆಗಮಿಸಲಿರುವ ಜಾಗತಿಕ ನಾಯಕರಿಗಾಗಿ ದೆಹಲಿಯನ್ನು ಸಿಂಹರಿಸಲಾಗಿದ್ದು, ವಿವಿಧ ಸ್ಥಳಗಳಲ್ಲಿ 100ಕ್ಕೂ ಹೆಚ್ಚು ಶಿಲ್ಪಗಳು ಮತ್ತು 150 ಕಾರಂಜಿಗಳನ್ನು ವಿವಿಧ ವಿನ್ಯಾಸಗಳೊಂದಿಗೆ ಸ್ಥಾಪಿಸಲಾಗಿದೆ.

ಇದನ್ನೂ ಓದಿ: G20 Summit 2023: ಜಿ20 ವಿಶೇಷ ಔತಣಕೂಟಕ್ಕೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ, ಖರ್ಗೆಗಿಲ್ಲ ಆಮಂತ್ರಣ!

Exit mobile version