Site icon Vistara News

G20 Summit 2023: ಜಿ20 ಶೃಂಗಸಭೆ ಸಕ್ಸೆಸ್, ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ

Modi at bjp office

ನವದೆಹಲಿ: ಜಿ 20 ಶೃಂಗಸಭೆಯು (G20 Summit 2023) ಯಶಸ್ವಿಯಾಗಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದಿಲ್ಲಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಕೇಂದ್ರ ಕಚೇರಿಗೆ (BJP Office) ಸಂಜೆ ಆಗಮಿಸಿದರು. ಈ ವೇಳೆ, ಬಿಜೆಪಿ ಕಾರ್ಯಕರ್ತರು ಪುಷ್ಪವೃಷ್ಟಿ ಮಾಡುವ ಮೂಲಕ ಭವ್ಯ ಸ್ವಾಗತವನ್ನು (Grand Wel Come) ಕೋರಿದರು. ಪ್ರಧಾನಿ ಮೋದಿ ಜತೆಗೆ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಕೂಡ ಇದ್ದರು.

ಕಚೇರಿಗೆ ಪ್ರಧಾನಿ ಆಗಮಿಸಲಿದ್ದಾರೆಂಬ ಸುದ್ದಿ ಗೊತ್ತಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸಂಜೆ 5 ಗಂಟೆಯಿಂದಲೇ ಕಚೇರಿ ಬಳಿ ಜಮಾಯಿಸಿದ್ದರು. ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಬಿಜೆಪಿ ಕಚೇರಿಗೆ ಮೋದಿ ಆಗಮನ ಹಿನ್ನಲೆ 1000 ಕ್ಕೂ ಹೆಚ್ಚು ಕಾರ್ಯಕರ್ತರ ದಂಡು ನೆರೆದಿತ್ತು.

ಜಿ20 ಶೃಂಗಸಭೆ ಯಶಸ್ವಿಗೊಳಿಸಿದ್ದಕ್ಕೆ ಮಾತ್ರವಲ್ಲದೇ, ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ಕೂಡ ನಡೆಯಲಿದೆ. ಈ ಕಾರಣಕ್ಕಾಗಿಯೇ ಅವರು ಕೇಂದ್ರ ಕಚೇರಿಗೆ ಆಗಮಿಸಿದ್ದರು. ವರ್ಷಾಂತ್ಯಕ್ಕೆ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಸೇರಿದಂತೆ ಉದು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ಸೇರಿ ಚರ್ಚಿಸಲಿದೆ. ಇದರಲ್ಲಿ ಪ್ರಧಾನಿ ಮೋದಿ ಅವರ ಜತೆಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗವಹಿಸಲಿದ್ದಾರೆ. ಕರ್ನಾಟಕದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ರಾಜನಾಥ್ ಸಿಂಗ್ ಕೂಡ ಇರಲಿದ್ದಾರೆ. ಇಂದಿನ ಸಭೆಯಲ್ಲಿ ಮಧ್ಯಪ್ರದೇಶದ ಬಿಜೆಪಿ ಅಭ್ಯರ್ಥಿಗಳ ಎರಡನೆ ಪಟ್ಟಿ ಬಗ್ಗೆ ಚರ್ಚೆ ನಡೆಯಲಿದೆ.

ಭಾರತ ಈಗ ಸೂಪರ್ ಪವರ್ ರಾಷ್ಟ್ರ

ಭಾರತವು ಈಗ ಸೂಪರ್ ಪವರ್ (India Super Power Nation) ರಾಷ್ಟ್ರವಾಗಿದೆ ಮತ್ತು ಚೀನಾಕ್ಕಿಂತಲೂ (China) ಮುಂದಿದೆ ಎಂದು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ (Azali Assoumani) ಅವರು ಹೇಳಿದ್ದಾರೆ. ದಿಲ್ಲಿಯಲ್ಲಿ ನಡೆದ ಎರಡು ದಿನಗಳ ಜಿ20 ಶೃಂಗಸಭೆಯಲ್ಲಿ ಆಫ್ರಿಕನ್ ಯೂನಿಯನ್ (African Union) ಅನ್ನು ಜಿ20ನ ಶಾಶ್ವತ ಸದಸ್ಯ ರಾಷ್ಟ್ರವಾಗಿ ಘೋಷಿಸಲಾಯಿತು(G20 Summit 2023). ಭಾರತವು ಜಗತ್ತಿನ ಐದನೇ ಸೂಪರ್ ಪವರ್ ರಾಷ್ಟ್ರವಾಗಿದೆ. ಹಾಗಾಗಿ, ಆಫ್ರಿಕಾದಲ್ಲಿ ಭಾರತಕ್ಕೆ ಸಾಕಷ್ಟು ಅವಕಾಶಗಳು ಸೃಷ್ಟಿಯಾಗಲಿವೆ. ಭಾರತವು ಬಾಹ್ಯಾಕಾಶಕ್ಕೆ ಹೋಗಿರುವ ಸಂಗತಿಯೂ ನಮಗೆ ಅರಿವು ಇದೆ. ಚೀನಾಕ್ಕಿಂತಲೂ ಮುಂದಿರುವ ಭಾರತವು ಸೂಪರ್ ಪವರ್ ರಾಷ್ಟ್ರವಾಗಿದ್ದು, ನಾವು ಅದರ ಜತೆಗೆ ಸಮನ್ವಯವನ್ನು ಸಾಧಿಸಬೇಕಷ್ಟೇ ಎಂದು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: G20 Summit 2023: ಭಾರತದಲ್ಲಿ ಅವಮಾನ; ಕೆನಡಾ ಪ್ರಧಾನಿಗೆ ಈಗ ತನ್ನ ದೇಶದಲ್ಲೂ ಅವಮಾನ!

ಶೃಂಗಸಭೆ ವೇಳೆ ಆಫ್ರಿಕನ್‌ ಯೂನಿಯನ್ ಅನ್ನು ಜಿ20 ಸದಸ್ಯವಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿ, ತಮ್ಮನ್ನು ಅಪ್ಪಿಕೊಂಡಾಗ ಭಾವಕರಾಗಿದ್ದ ಕ್ಷಣವನ್ನೂ ಅಸೌಮೌನಿ ಅವರು ವಿವರಿಸಿದ್ದಾರೆ.

ಆಫ್ರಿಕನ್ ಯೂನಿಯನ್ ಅನ್ನು ಜಿ20 ಕುಟುಂಬಕ್ಕೆ ಸೇರಿಸುವ ನಿರ್ಧಾರ ಬರುವ ಮೊದಲು ಚರ್ಚೆ ನಡೆಯಲಿದೆ ಎಂದು ಆಫ್ರಿಕನ್ ಯೂನಿಯನ್ ಅಧ್ಯಕ್ಷರು ಭಾವಿಸಿದ್ದರು. ಎರಡು ದಿನಗಳ ಶೃಂಗಸಭೆಯ ಪ್ರಾರಂಭದಲ್ಲಿ ಆಫ್ರಿಕನ್ ಯೂನಿಯನ್ ಅನ್ನು ಜಿ20 ಸದಸ್ಯ ಸಂಸ್ಥೆ ಎಂದು ಘೋಷಿಸಲಾಯಿತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version