Site icon Vistara News

G20 Summit : ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ 20 ಶೃಂಗಸಭೆ: ಪ್ರವಾಸೋದ್ಯಮಕ್ಕೆ ಉತ್ತೇಜನ

#image_title

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಭಾರತದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿರುವ ಪ್ರದೇಶ. ಇದೀಗ ಈ ಕೇಂದ್ರಾಡಳಿತ ಪ್ರದೇಶಗಳನ್ನು ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಪ್ರವಾಸಿ ಪ್ರದೇಶವಾಗಿ ಗುರುತಿಸುವ ಅವಕಾಶ ಬಂದಿದೆ. ಮುಂಬರುವ ಜಿ 20 ಶೃಂಗಸಭೆ (G20 Summit) ಜಮ್ಮು ಮತ್ತು ಕಾಶ್ಮೀರದಲ್ಲಿಯೇ ನಡೆಯುತ್ತಿದ್ದು, ಈ ಪ್ರದೇಶದ ಸೌಂದರ್ಯದ ಪ್ರದರ್ಶನ ಜಾಗತಿಕ ಮಟ್ಟದಲ್ಲಿ ಆಗಲಿದೆ.

ಅದೇ ನಿಟ್ಟಿನಲ್ಲಿ ಕೇಂದ್ರಾಡಳಿತ ಪ್ರದೇಶದಾದ್ಯಂತ ಹಲವಾರು ಹೊಸ ಅಭಿವೃದ್ಧಿಗಳನ್ನು ಇದೀಗ ಮಾಡಲಾಗಿದೆ. ಶ್ರೀನಗರದ ಜಬರ್ವಾನ್‌ ಪಾರ್ಕ್‌ನಲ್ಲಿ ಹಾಟ್‌ ಏರ್‌ ಬಲೂನ್‌ ಅನ್ನು ಆರಂಭಿಸಲಾಗಿದೆ. ಶುಕ್ರವಾರ ಆರಂಭವಾದ ಈ ಸಾಹಸ ಚಟುವಟಿಕೆಗೆ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಕಾರ್ಯದರ್ಶಿ ಸೈಯದ್‌ ಅಬಿದ್‌ ರಶೀದ್‌ ಶಾ ಚಾಲನೆ ಕೊಟ್ಟಿದ್ದಾರೆ.

ಇದನ್ನೂ ಓದಿ: Army Helicopter Crash: ಜಮ್ಮು-ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್​ ಪತನ; ಒಬ್ಬ ಅಧಿಕಾರಿ ಸಾವು, ಇಬ್ಬರು ಪೈಲೆಟ್​ಗಳು ಸೇಫ್​
ನಂತರ ಮಾತನಾಡಿದ ರಶೀದ್‌ ಶಾ ಅವರು, “ಜಿ 20ಯಲ್ಲಿ ಭಾಗವಹಿಸುವ ವಿವಿಧ ದೇಶಗಳ ಪ್ರತಿನಿಧಿಗಳು ಈ ಪ್ರದೇಶವನ್ನು ಜಾಗತಿಕ ಪ್ರವಾಸಿ ತಾಣವಾಗಿ ಉತ್ತೇಜಿಸಲು ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಅವರು ಜಾಗತಿಕ ಮಟ್ಟದಲ್ಲಿ ನಮ್ಮ ಈ ಪ್ರವಾಸಿ ಪ್ರದೇಶದ ಬಗ್ಗೆ ಪ್ರಚಾರ ಮಾಡುತ್ತಾರೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

“ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಹೊಸ ಮತ್ತು ವಿಶಿಷ್ಟ ಅನುಭವಗಳನ್ನು ಸೃಷ್ಟಿಸಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಹಾಟ್ ಏರ್ ಬಲೂನ್ ಸವಾರಿಯು ಶ್ರೀನಗರದ ಆಕರ್ಷಣೆಯನ್ನು ಹೆಚ್ಚಿಸುವ ಮತ್ತು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಸಹಕಾರಿಯಾಗಲಿದೆ” ಎಂದು ರಶೀದ್‌ ಅವರು ಹೇಳಿದರು.

ಇದನ್ನೂ ಓದಿ: ಜಿ20 ಪೂರ್ವಭಾವಿ ಸಭೆಗೂ ಮುನ್ನ ಇನ್ನೊಂದು ದಾಳಿ ನಡೆಸಲು ಪಾಕ್​ ಉಗ್ರರ ಪ್ಲ್ಯಾನ್​; ಜಮ್ಮು-ಕಾಶ್ಮೀರದಲ್ಲಿ ಹೈ ಅಲರ್ಟ್​
“ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯು ಕೇವಲ ರಾಜಕೀಯ ಕಾರ್ಯಕ್ರಮವಲ್ಲ. ಆದರೆ ಈ ಪ್ರದೇಶವು ತನ್ನ ಪ್ರವಾಸೋದ್ಯಮ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸುವ ಅವಕಾಶವಾಗಿದೆ. ಹೊಸ ಉಪಕ್ರಮಗಳು ಮತ್ತು ಆಕರ್ಷಣೆಗಳೊಂದಿಗೆ, ಜಮ್ಮು ಮತ್ತು ಕಾಶ್ಮೀರವು ಪ್ರಮುಖ ಜಾಗತಿಕ ಪ್ರವಾಸಿ ತಾಣವಾಗುವ ಹಾದಿಯಲ್ಲಿದೆ” ಎಂದೂ ಅವರು ತಿಳಿಸಿದ್ದಾರೆ.

Exit mobile version