Army Helicopter Crash: ಜಮ್ಮು-ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್​ ಪತನ; ಒಬ್ಬ ಅಧಿಕಾರಿ ಸಾವು, ಇಬ್ಬರು ಪೈಲೆಟ್​ಗಳು ಸೇಫ್​ - Vistara News

ದೇಶ

Army Helicopter Crash: ಜಮ್ಮು-ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್​ ಪತನ; ಒಬ್ಬ ಅಧಿಕಾರಿ ಸಾವು, ಇಬ್ಬರು ಪೈಲೆಟ್​ಗಳು ಸೇಫ್​

ಇಂದು ಬೆಳಗ್ಗೆ ಸೇನಾ ಹೆಲಿಕಾಪ್ಟರ್​ ಪತನಗೊಂಡಿದ್ದು, ಘಟನೆ ನಡೆದ ಸ್ಥಳಕ್ಕೆ ರಕ್ಷಣಾ ತಂಡಗಳು, ಸ್ಥಳೀಯ ಜನರು ತೆರಳಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

VISTARANEWS.COM


on

ALH Dhruv Helicopter crashed In Jammu Kashmir
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರೀನಗರ: ಭಾರತೀಯ ಸೇನೆಯ ಎಎಲ್​ಎಚ್​ ಧ್ರುವ ಹೆಲಿಕಾಪ್ಟರ್​ ಇಂದು ಜಮ್ಮು-ಕಾಶ್ಮಿರದ ಕಿಶ್ತಾವರ್ ಜಿಲ್ಲೆಯಲ್ಲಿ ಪತನಗೊಂಡಿದೆ (Army Helicopter Crash). ಈ ಹೆಲಿಕಾಪ್ಟರ್​​ನಲ್ಲಿ ಮೂವರು ಇದ್ದರು ಎಂದು ವರದಿಯಾಗಿದೆ. ಈ ಮೂವರಲ್ಲಿ ಇಬ್ಬರು ಪೈಲೆಟ್​​ಗಳಿಗೆ ಗಾಯವಾಗಿದ್ದು, ಜೀವಕ್ಕೇನೂ ಅಪಾಯವಾಗಿಲ್ಲ. ಇನ್ನೊಬ್ಬರು ಅಧಿಕಾರಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಕಿಶ್ತಾವರ್​ನ ಮಾರ್ವಾ ತಹಸಿಲ್‌ನಲ್ಲಿರುವ ಮಚ್ನಾ ಎಂಬ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಹೆಲಿಕಾಪ್ಟರ್​​ನ ಅವಶೇಷಗಳು ಮರುಸುದರ್ ನದಿ ಬಳಿ ಪತ್ತೆಯಾಗಿವೆ.

ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್​ ಅರುಣಾಚಲ ಪ್ರದೇಶದ ಮಂಡಲ ಬೆಟ್ಟಗಳ ಬಳಿ ಪತನಗೊಂಡಿತ್ತು. ಅದರಲ್ಲಿದ್ದ ಇಬ್ಬರೂ ಪೈಲೆಟ್​ಗಳು ಮೃತಪಟ್ಟಿದ್ದರು. ಈ ಸಲ ಪತನಗೊಂಡ ಎಎಲ್​ಎಚ್​ ಧ್ರುವ ಹೆಲಿಕಾಪ್ಟರ್​ ಎರಡು ಎಂಜಿನ್​​ಗಳಿರುವ ಯುಟಿಲಿಟಿ ಪ್ಲೇನ್​ ಆಗಿದೆ. ಇದನ್ನು ಅಭಿವೃದ್ಧಿ ಪಡಿಸಿದ್ದು ಹಿಂದೂಸ್ಥಾನ್ ಎರೋನಾಟಿಕ್ಸ್​ ಲಿಮಿಟೆಡ್​ (HAL). ಹಲಿಕಾಪ್ಟರ್​ ಎಲ್ಲಿಂದ-ಎಲ್ಲಿಗೆ ಹೋಗುತ್ತಿತ್ತು, ತರಬೇತಿ ಹಾರಾಟ ನಡೆಸುತ್ತಿತ್ತಾ ಎಂಬಿತ್ಯಾದಿ ಮಾಹಿತಿಗಳಿನ್ನೂ ಲಭ್ಯವಾಗಿಲ್ಲ. ಕಿಶ್ತ್ವಾರಾ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕಳೆದ ಎರಡು-ಮೂರು ದಿನಗಳಿಂದಲೂ ಮೋಡ ಕವಿದ ವಾತಾವರಣ ಇದೆ. ಮಳೆ, ಹಿಮಪಾತ ಆಗುತ್ತಿದೆ. ಹೆಲಿಕಾಪ್ಟರ್ ಪತನಕ್ಕೆ ಕೆಟ್ಟ ವಾತಾವರಣವೇ ಕಾರಣ ಆಗಿರಬಹುದು ಎಂದು ಕಿಶ್ತ್ವಾರಾ ಎಸ್​ಎಸ್​ಪಿ ಖಲಿ ಪೋಸ್ವಾಲ್​ ತಿಳಿಸಿದ್ದಾರೆ.

ಇದನ್ನೂ ಓದಿ: Army Helicopter Crash: ಭಾರತೀಯ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಇಬ್ಬರು ಪೈಲಟ್‌ಗಳ ಸಾವು, ತನಿಖೆಗೆ ಸೇನೆ ಆದೇಶ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Indian stock market: ಸೆನ್ಸೆಕ್ಸ್ ಕುಸಿತ: ಭಾರತೀಯ ಷೇರು ಮಾರುಕಟ್ಟೆಗೆ ಭಾರಿ ಹೊಡೆತ

Indian stock market: ನಿರಂತರ ಮೂರು ದಿನಗಳಿಂದ ಸೆನ್ಸೆಕ್ಸ್ ಕುಸಿಯುತ್ತಿದ್ದು, ಇಂದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟವಾಗಿದೆ. ನಿಫ್ಟಿ ಸೂಚ್ಯಂಕದಲ್ಲಿ ಸುಮಾರು 650 ಪಾಯಿಂಟ್‌ಗಳನ್ನು ಕಳೆದುಕೊಂಡಿದೆ.

VISTARANEWS.COM


on

By

Indian stock market
Koo

ಮುಂಬಯಿ: ಕಳೆದ ಮೂರು ದಿನಗಳಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ (Indian stock market) ತೀವ್ರ ಕುಸಿತವಾಗುತ್ತಿದ್ದು, ನಾಲ್ಕನೇ ದಿನದ ವೇಳೆಗೆ ನಿಫ್ಟಿ (Nifty) ಸೂಚ್ಯಂಕದಲ್ಲಿ (index) ಸುಮಾರು 650 ಪಾಯಿಂಟ್‌ಗಳನ್ನು ಕಳೆದುಕೊಂಡು ನೇರ ನಷ್ಟವನ್ನು ಅನುಭವಿಸಿದೆ. ಏಪ್ರಿಲ್ 16ರಂದು ನಿಫ್ಟಿ 50 ಸೂಚ್ಯಂಕವು 22,125 ಮಟ್ಟದಲ್ಲಿ ವಹಿವಾಟು ಆರಂಭಿಸಿ 22,103 ಅಂಕಗಳಿಗೆ ತಲುಪಿತು.

ಬಿಎಸ್‌ಇ (BSE) ಸಂವೇದಿ ಸೂಚ್ಯಂಕವು 72,892 ರಲ್ಲಿ ವಹಿವಾಟು ಪ್ರಾರಂಭಿಸಿ ಮೂರು ಸೆಷನ್‌ಗಳಲ್ಲಿ ಸುಮಾರು 2,184 ಪಾಯಿಂಟ್‌ಗಳನ್ನು ಕಳೆದುಕೊಂಡಿತ್ತು. ಬ್ಯಾಂಕ್ ನಿಫ್ಟಿ (bank nifty) 47,436 ಮಟ್ಟದಲ್ಲಿ ವಹಿವಾಟು ಪ್ರಾರಂಭಿಸಿ ಕನಿಷ್ಠ 47,316 ಅನ್ನು ತಲುಪಿದೆ.

ಎಷ್ಟು ನಷ್ಟ ?

ಕಳೆದ ಮೂರು ಅವಧಿಗಳಲ್ಲಿ ನಿಫ್ಟಿ 50 ಸೂಚ್ಯಂಕವು ಸುಮಾರು 650 ಪಾಯಿಂಟ್‌ಗಳನ್ನು ಕಳೆದುಕೊಂಡಿದೆ. ಬಿಎಸ್‌ಇ ಸೆನ್ಸೆಕ್ಸ್ ಸುಮಾರು 2,200 ಪಾಯಿಂಟ್‌ಗಳನ್ನು ಕಳೆದುಕೊಂಡಿದೆ ಮತ್ತು ಬ್ಯಾಂಕ್ ನಿಫ್ಟಿ ಸೂಚ್ಯಂಕ 2,700 ಪಾಯಿಂಟ್‌ಗಳಷ್ಟು ಕುಸಿತ ಕಂಡಿದೆ. ಈ ಮಧ್ಯೆ ಸ್ಮಾಲ್-ಕ್ಯಾಪ್ ಸೂಚ್ಯಂಕವು ಸುಮಾರು ಶೇಕಡಾ 1ರಷ್ಟು ಮತ್ತು ಮಿಡ್ ಕ್ಯಾಪ್ ಸೂಚ್ಯಂಕವು ಸುಮಾರು ಶೇ. 0.40 ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: Innova Hycross: ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಬಿಡುಗಡೆ; ದರ ಎಷ್ಟು?

ಸೆನ್ಸೆಕ್ಸ್ ಕುಸಿತಕ್ಕೆ ಕಾರಣ ?

ಇಸ್ರೇಲ್-ಇರಾನ್ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯು ಸ್ಟಾಕ್ ಮಾರುಕಟ್ಟೆಯ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಯುದ್ಧ ಪರಿಸ್ಥಿತಿಯು ಇಲ್ಲಿ ಭೌಗೋಳಿಕ ರಾಜಕೀಯ ಅನಿಶ್ಚಿತತೆಯನ್ನು ಉಂಟು ಮಾಡಿದೆ.

ಜಾಗತಿಕ ಮಾರುಕಟ್ಟೆ ಸ್ಥಿತಿ ?

ಯುಎಸ್ ಷೇರು ಮಾರುಕಟ್ಟೆಯು ಶುಕ್ರವಾರ ತೀವ್ರ ನಷ್ಟ ಅನುಭವಿಸಿದ್ದರಿಂದ ವಿಶ್ವ ಮಟ್ಟದಲ್ಲೇ ಷೇರುಗಳು ಹೆಚ್ಚಾಗಿ ಮಾರಾಟವಾಗಿವೆ. ಏಷ್ಯಾದ ಮಾರುಕಟ್ಟೆಗಳಾದ ನಿಕ್ಕಿ, ಹ್ಯಾಂಗ್ ಸೆಂಗ್, ಕೊಸ್ಪಿಯಲ್ಲಿ ಸೋಮವಾರ ಹೆಚ್ಚಿನ ಒತ್ತಡ ಕಂಡು ಬಂದಿದೆ.


ಕಚ್ಚಾ ತೈಲ ಬೆಲೆ ?

ಕಚ್ಚಾ ತೈಲ ಬೆಲೆಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಳೆದ ಆರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಮಾರ್ಚ್ 2024 ರಲ್ಲಿ ಸುಮಾರು ಶೇ. 6 ರಷ್ಟು ಹೆಚ್ಚಳವಾಗಿದ್ದು, ಏಪ್ರಿಲ್‌ನಲ್ಲಿ ಈಗಾಗಲೇ ಶೇ. 3 ರಷ್ಟು ಏರಿಕೆಯಾಗಿದೆ. ಹೀಗೆಯೇ ಕಚ್ಚಾ ತೈಲ ಬೆಲೆ ಏರಿಕೆಯಾದರೆ ಸ್ಥಳೀಯ ಕರೆನ್ಸಿ ಮತ್ತು ಹಣದುಬ್ಬರದ ಮೇಲೆ ಒತ್ತಡ ಉಂಟುಮಾಡುತ್ತದೆ.

ಯುಎಸ್ ಡಾಲರ್ ಮೌಲ್ಯ ?

ಯುಎಸ್ ಡಾಲರ್ ಮೌಲ್ಯ ನಿರಂತರವಾಗಿ ಏರುತ್ತಿದ್ದು, ಯುಎಸ್ ಡಾಲರ್ ಸೂಚ್ಯಂಕವು 106ಕ್ಕೆ ಸಮೀಪಿಸಿದೆ. ಜಪಾನಿನ ಯೆನ್ ವಿರುದ್ಧ 34 ವರ್ಷಗಳ ಗರಿಷ್ಠ ಮಟ್ಟವನ್ನು ಯುಎಸ್ ಡಾಲರ್ ತಲುಪಿದೆ. ಇದು ಭಾರತೀಯ ಷೇರು ಮಾರುಕಟ್ಟೆ ಸೇರಿದಂತೆ ಜಾಗತಿಕ ಇಕ್ವಿಟಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.

Continue Reading

ದೇಶ

Air India: ಕ್ಷಿಪಣಿ ದಾಳಿಗೂ ಮುನ್ನ ಇರಾನ್ ವಾಯು ಪ್ರದೇಶದಲ್ಲಿ ಏರ್​ ಇಂಡಿಯಾ ವಿಮಾನಗಳ ಹಾರಾಟ; ಅಧಿಕಾರಿಗಳು ಹೇಳಿದ್ದೇನು?

Air India: ಇಸ್ರೇಲ್‌ ಮೇಲೆ ಇರಾನ್‌ 200ಕ್ಕೂ ಅಧಿಕ ಡ್ರೋನ್‌ಗಳು ಹಾಗೂ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ. ಅಚ್ಚರಿ ಎಂದರೆ ಇರಾನ್​ ಕ್ಷಿಪಣಿ ದಾಳಿ ನಡೆಸುವುದಕ್ಕೂ ಕೆಲವು ಗಂಟೆಗಳ ಮುನ್ನ ಎರಡು ಏರ್​ ಇಂಡಿಯಾ ವಿಮಾನಗಳು ಇರಾನ್​ ವಾಯುನೆಲೆಯಲ್ಲಿ ಹಾರಾಟ ನಡೆಸಿದ್ದವು ಎಂದು ಮೂಲಗಳು ತಿಳಿಸಿದೆ. ಈ ವಿಮಾನಗಳಲ್ಲಿ 116 ಹಾಗೂ 131 ಮಂದಿ ಪ್ರಯಾಣಿಕರಿದ್ದರು. ಈ ಪೈಕಿ ಒಂದು ವಿಮಾನವು ನ್ಯೂಯಾರ್ಕ್​ನಿಂದ ಮುಂಬೈಗೆ ಮತ್ತೊಂದು ಮುಂಬೈನಿಂದ ಲಂಡನ್​ಗೆ ಪ್ರಯಾಣ ಬೆಳಸಿದ್ದವು.

VISTARANEWS.COM


on

Air India
Koo

ನವದೆಹಲಿ: ಇಸ್ರೇಲ್‌ ಮೇಲೆ ಇರಾನ್‌ 200ಕ್ಕೂ ಅಧಿಕ ಡ್ರೋನ್‌ಗಳು ಹಾಗೂ ಕ್ಷಿಪಣಿಗಳ ಮೂಲಕ ದಾಳಿ (Israel Iran War) ನಡೆಸಿದ್ದು, ಮೂರನೇ ಮಹಾಯುದ್ಧದ ಭೀತಿ ಹೆಚ್ಚಾಗಿದೆ. ಈ ಮಧ್ಯೆ ಇಸ್ರೇಲ್ ಮೇಲೆ ಇರಾನ್​ ಕ್ಷಿಪಣಿ ದಾಳಿ ನಡೆಸುವುದಕ್ಕೂ ಕೆಲವು ಗಂಟೆಗಳ ಮುನ್ನ ಎರಡು ಏರ್​ ಇಂಡಿಯಾ(Air India) ವಿಮಾನಗಳು ಇರಾನ್​ ವಾಯುನೆಲೆಯಲ್ಲಿ ಹಾರಾಟ ನಡೆಸಿದ್ದವು ಎಂದು ಮೂಲಗಳು ತಿಳಿಸಿದೆ. ಈ ವಿಮಾನಗಳಲ್ಲಿ 116 ಹಾಗೂ 131 ಮಂದಿ ಪ್ರಯಾಣಿಕರಿದ್ದರು.

ಈ ಪೈಕಿ ಒಂದು ವಿಮಾನವು ನ್ಯೂಯಾರ್ಕ್​ನಿಂದ ಮುಂಬೈಗೆ ಮತ್ತೊಂದು ಮುಂಬೈನಿಂದ ಲಂಡನ್​ಗೆ ಪ್ರಯಾಣ ಬೆಳಸಿದ್ದವು. ಈ ವಿಮಾನಗಳು ಕ್ರಮವಾಗಿ ಏಪ್ರಿಲ್ 13 ಮತ್ತು ಏಪ್ರಿಲ್ 14ರಂದು ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯ ಮೇಲೆ ಹಾರಾಟ ನಡೆಸಿದ್ದವು ಎಂದು ಮೂಲಗಳು ತಿಳಿಸಿವೆ. ಏಪ್ರಿಲ್​ 13ರಂದು ಇರಾನ್ ಕನಿಷ್ಠ 300 ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಇಸ್ರೇಲ್ ಮೇಲೆ ಹಾರಿಸಿತ್ತು.

ಏರ್‌ ಇಂಡಿಯಾ ಹೇಳಿದ್ದೇನು?

ಈ ಬಗ್ಗೆ ಏರ್‌ ಇಂಡಿಯಾ ಪ್ರತಿಕ್ರಿಯಿಸಿ, ಪ್ರಯಾಣಿಕರು, ಸಿಬ್ಬಂದಿ ಮತ್ತು ವಿಮಾನದ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದೆ. “ಏಪ್ರಿಲ್ 13ರಿಂದ ಇರಾನಿನ ವಾಯುಪ್ರದೇಶವು ಯಾವುದೇ ನಿರ್ಬಂಧಗಳಿಲ್ಲದೆ ನಾಗರಿಕ ವಿಮಾನ ಸಂಚಾರಕ್ಕೆ ಲಭ್ಯವಿದ್ದರೂ ಮತ್ತು ವಿಮಾನಯಾನ ಸಂಸ್ಥೆಗಳು ಆ ವಾಯುಪ್ರದೇಶದಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿದರೂ ಏರ್ ಇಂಡಿಯಾ ವಿವಿಧ ಸುರಕ್ಷತಾ ಸಂಸ್ಥೆಗಳು ಮತ್ತು ನಿಯಂತ್ರಕ ಸಂಸ್ಥೆಗಳೊಂದಿಗೆ ನಿಕಟ ಸಮಾಲೋಚನೆ ನಡೆಸುತ್ತಿದೆ. ಜತೆಗೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಪಶ್ಚಿಮ ದೇಶಗಳಿಗೆ ತೆರಳುವ ಕೆಲವು ವಿಮಾನಗಳಿಗೆ ಸುರಕ್ಷಿತ ಪರ್ಯಾಯ ಮಾರ್ಗಗಳನ್ನು ನಿರ್ದೇಶಿಸಲಾಗುತ್ತಿದೆʼʼ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏರ್ ಇಂಡಿಯಾ ವಿಮಾನ ಮಾತ್ರವಲ್ಲ ಇತರ ವಿಮಾನಯಾನ ಸಂಸ್ಥೆಗಳ ವಿಮಾನಗಳೂ ಇದೇ ಮಾರ್ಗದಲ್ಲಿ ಏಪ್ರಿಲ್ 13ರಂದು ಹಾರಾಟ ನಡೆಸಿದ್ದವು. ಇರಾನ್ ವಾಯುಪ್ರದೇಶದ ಮೂಲಕ ಮಲೇಷ್ಯಾ ಏರ್‌ಲೈನ್ಸ್‌, ಎಮಿರೇಟ್ಸ್ ಮತ್ತು ಕತಾರ್ ಏರ್‌ವೇಸ್‌ನಂತಹ ವಿಮಾನಗಳು ಹಾದು ಹೋಗಿದ್ದವು ಎಂದು ವರದಿ ಹೇಳಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಏರ್ ಇಂಡಿಯಾ ಏಪ್ರಿಲ್ 13ರಂದು ಕೆಲವು ವಿಮಾನಗಳನ್ನು ಬೇರೆ ಮಾರ್ಗಗಳ ಮೂಲಕ ಹಾರಾಟ ನಡೆಸಿದೆ. ಕೊಚ್ಚಿಯಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಮತ್ತು ದೆಹಲಿಯಿಂದ ಫ್ರಾಂಕ್ಫರ್ಟ್‌ಗೆ ತೆರಳುವ ವಿಮಾನಗಳು ಅಫ್ಘಾನಿಸ್ತಾನದ ಮಾರ್ಗ ಆಯ್ಕೆ ಮಾಡಿಕೊಂಡಿದ್ದವು. ಹೀಗಿದ್ದೂ ಈ ಎರಡು ವಿಮಾನಗಳು ಇರಾನ್‌ ವಾಯು ಮಾರ್ಗವನ್ನು ಏಕೆ ಆರಿಸಿಕೊಂಡವು ಎನ್ನುವುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಇದನ್ನೂ ಓದಿ: ಇಸ್ರೇಲ್‌-ಇರಾನ್‌ ಸಂಘರ್ಷದಿಂದ ಭಾರತದ ಮೇಲೆ ಪರಿಣಾಮ? ಪೆಟ್ರೋಲ್‌ ಬೆಲೆ ಏರಿಕೆ ನಿಶ್ಚಿತ?

ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ

ಇಸ್ರೇಲ್‌ ಮೇಲೆ ಇರಾನ್‌ ದಾಳಿ ಮಾಡಿದರೆ, ನಾವು ಇಸ್ರೇಲ್‌ ಪರ ನಿಲ್ಲುತ್ತೇವೆ ಎಂದು ಅಮೆರಿಕ ತಿಳಿಸಿದ ಬೆನ್ನಲ್ಲೇ ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ ನೀಡಿದೆ. “ಡಮಾಸ್ಕಸ್‌ನಲ್ಲಿರುವ ನಮ್ಮ ರಾಜತಾಂತ್ರಿಕ ಕಚೇರಿಗಳ ಮೇಲೆ ಯಹೂದಿಗಳು (ಇಸ್ರೇಲ್)‌ ಆಕ್ರಮಣಕಾರಿ ನೀತಿ ಅನುಸರಿಸುತ್ತಿರುವ ಕಾರಣ ಪ್ರತಿಕ್ರಿಯೆ ರೂಪದಲ್ಲಿ ಇರಾನ್‌ ಮಿಲಿಟರಿ ಪಡೆಗಳು ದಾಳಿ ನಡೆಸುತ್ತಿವೆ. ಇದಕ್ಕೆ ಇಸ್ರೇಲ್‌ ಕೂಡ ಪ್ರತಿದಾಳಿ ಮಾಡಬಹುದು. ಹಾಗಾಗಿ, ಮುಂದಿನ ದಿನಗಳಲ್ಲಿ ಪರಿಣಾಮಗಳು ಭೀಕರವಾಗಿರಲಿವೆ. ಇದು ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಸಮರವಾಗಿದೆ. ಹಾಗಾಗಿ, ಇದರಿಂದ ಅಮೆರಿಕ ದೂರ ಉಳಿಯಲೇಬೇಕು” ಎಂದು ಇರಾನ್‌ ಎಚ್ಚರಿಸಿದೆ.

Continue Reading

ದೇಶ

UPSC Results 2023: ಕೋಚಿಂಗ್‌ ಇಲ್ಲದೆ ಓದಿದ ಅನನ್ಯಾ ರೆಡ್ಡಿಗೆ ಯುಪಿಎಸ್‌ಸಿಯಲ್ಲಿ 3ನೇ ರ‍್ಯಾಂಕ್!

UPSC Results 2023: ಹಣಕಾಸು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಂಎನ್‌ಸಿಯಲ್ಲಿ ಕೆಲಸ ಮಾಡಿದ ಆದಿತ್ಯ ಶ್ರೀವಾಸ್ತವ್‌ ಅವರು ನಾಗರಿಕ ಸೇವೆಯ ಕಾರಣಕ್ಕಾಗಿ 2017ರಲ್ಲಿ ಉದ್ಯೋಗ ತೊರೆದು, ಐಎಎಸ್‌ಗೆ ತಯಾರಿ ನಡೆಸಿ ಯಶಸ್ಸು ಗಳಿಸಿದ್ದಾರೆ. ಇನ್ನು ತೆಲಂಗಾಣದ ಡೋನೂರು ಅನನ್ಯಾ ರೆಡ್ಡಿ ಅವರು ದೇಶಕ್ಕೇ ಮೂರನೇ ರ‍್ಯಾಂಕ್‌ ಪಡೆದಿದ್ದಾರೆ. ಇವರು ಯಾವುದೇ ಕೋಚಿಂಗ್‌ ತರಬೇತಿ ಇಲ್ಲದೆಯೇ ಸಾಧನೆ ಮಾಡಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

VISTARANEWS.COM


on

Donuru Ananya Reddy
Koo

ಹೈದರಾಬಾದ್‌: ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ (UPSC Results 2023) ಪ್ರಕಟವಾಗಿದೆ. ಉತ್ತರ ಪ್ರದೇಶದ ಆದಿತ್ಯ ಶ್ರೀವಾಸ್ತವ್‌ (Aditya Srivastava) ಅವರು ಮೊದಲ ರ‍್ಯಾಂಕ್‌ ಗಳಿಸಿದ್ದಾರೆ. ಇನ್ನು, ತೆಲಂಗಾಣದ ಡೋನೂರು ಅನನ್ಯಾ ರೆಡ್ಡಿ (Donuru Ananya Reddy) ಅವರು ದೇಶಕ್ಕೇ ಮೂರನೇ ರ‍್ಯಾಂಕ್‌ ಪಡೆದಿದ್ದಾರೆ. ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯವರಾದ ಡೋನೂರು ಅನನ್ಯಾ ರೆಡ್ಡಿ ಅವರು ಕೋಚಿಂಗ್‌ ತರಬೇತಿ ಇಲ್ಲದೆಯೇ ಅಧ್ಯಯನ ಮಾಡಿ ಇಂತಹ ಸಾಧನೆಗೈದಿದ್ದಾರೆ. ಹಾಗಾದರೆ, ಇವು ಐಎಎಸ್‌ಗೆ ಹೇಗೆ ಅಧ್ಯಯನ ಮಾಡುತ್ತಿದ್ದರು? ಇವರ ಸ್ಟ್ರ್ಯಾಟಜಿ ಏನಾಗಿತ್ತು ಎಂಬುದರ ಮಾಹಿತಿ ಇಲ್ಲಿದೆ.

ಮೆಹಬೂಬ್‌ನಗರ ಜಿಲ್ಲೆಯವರಾದ ಅನನ್ಯಾ ರೆಡ್ಡಿ ಅವರು ದೆಹಲಿ ವಿಶ್ವವಿದ್ಯಾಲಯದ ಮಿರಿಂಡ ಹೌಸ್‌ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರುವ ಇವರು ಮಕ್ಕಳಿಗೆ ಕಲಿಸುವುದರಲ್ಲಿ ಖುಷಿ ಕಂಡವರು. ಪದವಿ ನಂತರ ಕಷ್ಟಪಟ್ಟು ಓದಿದ ಇವರು ಯಾವುದೇ ತರಬೇತಿ ಇಲ್ಲದೆಯೇ ಯುಪಿಎಸ್‌ಸಿಯಲ್ಲಿ ಮೂರನೇ ರ‍್ಯಾಂಕ್‌ ಪಡೆದಿದ್ದಾರೆ. ಮಾನವಶಾಸ್ತ್ರ ವಿಷಯದ ಕುರಿತು ಮಾತ್ರ ಇವರು ತರಬೇತಿ ಪಡೆದಿದ್ದು ಬಿಟ್ಟರೆ, ಉಳಿದ ತಯಾರಿಯನ್ನು ಅವರೇ ಮಾಡಿಕೊಂಡು, ಸತತ ಪರಿಶ್ರಮದ ಮೂಲಕ ಸಾಧನೆಯ ಮೆಟ್ಟಿಲು ಹತ್ತಿದ್ದಾರೆ.

ದೇಶಕ್ಕೇ ತೃತೀಯ ರ‍್ಯಾಂಕ್‌ ಪಡೆದ ಕುರಿತು ಅನನ್ಯಾ ರೆಡ್ಡಿ ಮಾಹಿತಿ ನೀಡಿದ್ದಾರೆ. “ನಾನು ಯಾವುದೇ ಕೋಚಿಂಗ್‌ ಸಂಸ್ಥೆಗಳಲ್ಲಿ ತರಬೇತಿ ಪಡೆದಿಲ್ಲ. ನಿತ್ಯ 12-14 ತಾಸು ಕಡ್ಡಾಯವಾಗಿ ಅಧ್ಯಯನ ಮಾಡುತ್ತಿದ್ದೆ. ನಾನು ಚಿಕ್ಕವಳಿದ್ದಾಗಲೇ ಸಮಾಜಕ್ಕೆ ನನ್ನಿಂದಾದ ಸೇವೆ ಮಾಡಬೇಕು ಎಂದು ಬಯಸಿದ್ದೆ. ಶಾಲೆಯಲ್ಲಿದ್ದಾಗಲೇ ಈ ದಿಸೆಯಲ್ಲಿ ಅಧ್ಯಯನ ಮಾಡುತ್ತಿದ್ದೆ. ಮುಖ್ಯ ಪರೀಕ್ಷೆ, ಸಂದರ್ಶನವನ್ನು ಆತ್ಮವಿಶ್ವಾಸದಿಂದ ಎದುರಿಸಿದ್ದೆ. ಆದರೆ, ಮೂರನೇ ರ‍್ಯಾಂಕ್‌ ಪಡೆಯುತ್ತೇನೆ ಎಂದುಕೊಂಡಿರಲಿಲ್ಲ” ಎಂಬುದಾಗಿ ಅನನ್ಯಾ ರೆಡ್ಡಿ ತಿಳಿಸಿದ್ದಾರೆ.

ದೇಶಕ್ಕೇ ಮೊದಲ ರ‍್ಯಾಂಕ್‌ ಪಡೆದ ಆದಿತ್ಯ ಶ್ರೀವಾಸ್ತವ್‌ ಅವರು ಉತ್ತರ ಪ್ರದೇಶದ ಲಖನೌ ಮೂಲದವರು. ಇವರು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಲಖನೌನಲ್ಲಿಯೇ ಮುಗಿಸಿದ್ದಾರೆ. ಐಐಟಿ ಕಾನ್ಪುರದಲ್ಲಿ ಎಂ.ಟೆಕ್‌ ಸ್ನಾತಕೋತ್ತರ ಪದವಿ ಪಡೆದ ಇವರು 15 ತಿಂಗಳು ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಆದರೆ, ಐಎಎಸ್‌ ಅಧಿಕಾರಿಯಾಗಬೇಕು ಎಂಬ ಕನಸು ಹೊತ್ತ ಇವರು ಎಲೆಕ್ಟ್ರಿಕಲ್‌ ಎಂಜಿನಿಯರ್ ಉದ್ಯೋಗ ಬಿಟ್ಟು ಐಎಎಸ್‌ಗೆ ಅಧ್ಯಯನ ಮಾಡಲು ಆರಂಭಿಸಿದರು. ಈಗ ಇವರು ಯಶಸ್ಸು ಸಾಧಿಸಿದ್ದಾರೆ.

ಇದನ್ನೂ ಓದಿ: UPSC Results 2023: ಎಂಎನ್‌ಸಿ ಕೆಲಸ ಬಿಟ್ಟ ಆದಿತ್ಯಗೆ ಯುಪಿಎಸ್‌ಸಿ ಫಸ್ಟ್‌ ರ‍್ಯಾಂಕ್;‌ ಯಾರಿವರು?

Continue Reading

Lok Sabha Election 2024

Lok Sabha Election 2024: ರಾಮ ನವಮಿ ಆಚರಣೆ; ಪಶ್ವಿಮ ಬಂಗಾಳದಲ್ಲಿ ಬಿಜೆಪಿ – ಟಿಎಂಸಿ ಮಧ್ಯೆ ವಾಗ್ವಾದ

Lok Sabha Election 2024: ದೇಶದಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್‌ 19ರಂದು ಮೊದಲ ಹಂತದ ಮತದಾಬ ನಡೆಯಲಿದೆ. ಈ ಮಧ್ಯೆ ನಾಳೆ ನಡೆಯಲಿರುವ ರಾಮ ನವಮಿ ಬಗ್ಗೆ ಚರ್ಚೆ ಆರಂಭವಾಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ರಾಮ ನವಮಿ ಆಚರಣೆಗೆ ಟಿಎಂಸಿ ಬ್ರೇಕ್‌ ಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇತ್ತ ಟಿಎಂಸಿ ನಾಳೆ ಶೋಭಾ ಯಾತ್ರೆ ನಡೆಸುವುದಾಗಿ ಘೋಷಿಸಿದೆ.

VISTARANEWS.COM


on

Lok Sabha Election 2024
Koo

ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ಜೋರಾಗಿದೆ. ಮೊದಲ ಹಂತದ ಮತದಾನ ಶುಕ್ರವಾರ (ಏಪ್ರಿಲ್‌ 19) ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಈ ಮಧ್ಯೆ ನಾಳೆ (ಏಪ್ರಿಲ್‌ 17) ರಾಮ ನವಮಿಯಂದು ಹೌರಾದಲ್ಲಿ ‘ಶೋಭಾ ಯಾತ್ರೆ’ ನಡೆಸುವುದಾಗಿ ತೃಣಮೂಲ ಕಾಂಗ್ರೆಸ್ (Trinamool Congress) ಮಂಗಳವಾರ ಘೋಷಿಸಿದೆ.

ಇತ್ತ ಪಶ್ಚಿಮ ಬಂಗಾಳದ ಬಾಲೂರ್ಘಾಟ್‌ನಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಬಿಜೆಪಿಯ ರಾಮ ನವಮಿಯ ಅಚರಣೆಗೆ ಅಡ್ಡಿಪಡಿಸಲು ಮತ್ತು ಸಿಎಎಯನ್ನು ವಿರೋಧಿಸಲು ಟಿಎಂಸಿ ಪ್ರಯತ್ನಿಸುತ್ತಿದೆ” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಂಗಾಳದಲ್ಲಿ ರಾಮ ನವಮಿ ಆಚರಣೆಯನ್ನು ತಡೆಯಲು ಟಿಎಂಸಿ ಎಂದಿನಂತೆ ಪ್ರಯತ್ನಿಸಿದೆ ಎಂದು ಮೋದಿ ಹೇಳಿದರು. ಇದಾಗಿ ಕೆಲವೇ ನಿಮಿಷಗಳಲ್ಲಿ ಟಿಎಂಸಿ ರಾಮ ನವಮಿಯಂದು ಶೋಭಾ ಯಾತ್ರೆ ನಡೆಸುವುದಾಗಿ ತಿಳಿಸಿದೆ. “ಹೌರಾ ಅಭ್ಯರ್ಥಿ ಪ್ರಸೂನ್ ಬ್ಯಾನರ್ಜಿ ಅವರೊಂದಿಗೆ ಪಕ್ಷದ ಸ್ಟಾರ್ ಪ್ರಚಾರಕರಾದ ಸಾಯೋನಿ ಘೋಷ್, ಅರೂಪ್ ರಾಯ್ ಮತ್ತು ಬಂಗಾಳ ಕ್ರೀಡಾ ಸಚಿವ ಮನೋಜ್ ತಿವಾರಿ ಮತ್ತಿತರರ ಸಮ್ಮುಖದಲ್ಲಿ ರಾಮ ನವಮಿಯ ಶೋಭಾ ಯಾತ್ರೆಯಲ್ಲಿ ಆಯೋಜಿಸಲಾಗಿದೆʼʼ ಎಂದು ಪಕ್ಷ ತಿಳಿಸಿದೆ.

ಹೌರಾ ನಗರದಲ್ಲಿ ರಾಮ ನವಮಿಯಂದು ಮೆರವಣಿಗೆ ನಡೆಸಲು ವಿಶ್ವ ಹಿಂದೂ ಪರಿಷತ್ (VHP)ಗೆ ಕೋಲ್ಕತ್ತಾ ಹೈಕೋರ್ಟ್ ಸೋಮವಾರ ಷರತ್ತುಬದ್ಧ ಅನುಮತಿ ನೀಡಿದೆ. ಹೌರಾದಲ್ಲಿ ವಿಶ್ವ ಹಿಂದೂ ಪರಿಷತ್‌ ನಡೆಸಲಿದ್ದ ರಾಮ ನವಮಿ ರ‍್ಯಾಲಿಯನ್ನು ನಿಷೇಧಿಸಲು ನಿರ್ದೇಶನ ನೀಡುವಂತೆ ಕೋರಿ ಟಿಎಂಸಿ ಕೋಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು ಎಂದು ಮೋದಿ ಟೀಕಿಸಿದ್ದಾರೆ.

“ಅಯೋಧ್ಯೆಯ ಭವ್ಯ ದೇವಾಲಯದಲ್ಲಿ ರಾಮ್ ಲಲ್ಲಾ ಸಿಂಹಾಸನಾರೋಹಣ ಮಾಡಿದ ಬಳಿಕ ಮೊದಲ ರಾಮ ನವಮಿ ಇದಾಗಿದೆ. ಟಿಎಂಸಿ ಎಂದಿನಂತೆ ಇಲ್ಲಿ ರಾಮನವಮಿ ಆಚರಣೆಯನ್ನು ತಡೆಯಲು ತನ್ನ ಅತ್ಯುತ್ತಮ ಪ್ರಯತ್ನ ಮಾಡಿದೆ ಮತ್ತು ಹಲವು ಪಿತೂರಿಗಳನ್ನು ನಡೆಸಿದೆ. ಆದರೆ ಸತ್ಯ ಮಾತ್ರ ಗೆಲ್ಲುತ್ತದೆ. ಆದ್ದರಿಂದ ನ್ಯಾಯಾಲಯವು ಅನುಮತಿ ನೀಡಿದೆ ಮತ್ತು ನಾಳೆ ರಾಮ ನವಮಿ ಮೆರವಣಿಗೆಗೆ ಬೇಕಾದ ಸಿದ್ಧತೆ ನಡೆಸಲಾಗುವುದು. ಈ ಸಂದರ್ಭದಲ್ಲಿ ನಾನು ಬಂಗಾಳದ ನನ್ನ ಎಲ್ಲ ಸಹೋದರ ಸಹೋದರಿಯರನ್ನು ಅಭಿನಂದಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಮೆರವಣಿಗೆ ವೇಳೆ ಯಾವುದೇ ಪ್ರಚೋದನಕಾರಿ ಘೋಷಣೆಗಳನ್ನು ಕೂಗಬಾರದು ಎಂದು ನ್ಯಾಯಮೂರ್ತಿ ಜಯ್ ಸೇನ್ ಗುಪ್ತಾ ಅವರು ನಿರ್ದೇಶನ ನೀಡಿದ್ದಾರೆ. ಗರಿಷ್ಠ 200 ಮಂದಿಯನ್ನು ಮೀರದಂತೆ ಮೆರವಣಿಗೆ ನಡೆಸಬೇಕು ಮತ್ತು ಐದು ಸ್ವಯಂಸೇವಕರು ಮೇಲ್ವಿಚಾರಣೆ ನಡೆಸಬೇಕು ಎಂದೂ ಸೂಚಿಸಿದ್ದಾರೆ.

ಇದನ್ನೂ ಓದಿ: BSP List: ವಾರಾಣಸಿಯಲ್ಲಿ ಮೋದಿ ವಿರುದ್ಧ ಬಿಎಸ್‌ಪಿ ಅಭ್ಯರ್ಥಿ ಯಾರು? ಗ್ಯಾಂಗ್‌ಸ್ಟರ್‌ ಪತ್ನಿಗೂ ಟಿಕೆಟ್!

ಇತ್ತೀಚಿನ ವರ್ಷಗಳಲ್ಲಿ ಕೋಮು ಗಲಭೆಗಳಿಂದಾಗಿ ರಾಜ್ಯದಲ್ಲಿ ರಾಮನವಮಿ ರ‍್ಯಾಲಿಗಳು ಪ್ರಮುಖ ರಾಜಕೀಯ ವಿಷಯಗಳಾಗಿ ಮಾರ್ಪಟ್ಟಿವೆ. ಆಡಳಿತಾರೂಢ ಟಿಎಂಸಿ ಮತ್ತು ಪ್ರತಿಪಕ್ಷ ಬಿಜೆಪಿ ಪರಸ್ಪರ ಹಿಂಸಾಚಾರವನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿವೆ. ಹೀಗಾಗಿ ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

Continue Reading
Advertisement
Indian stock market
ವಾಣಿಜ್ಯ3 mins ago

Indian stock market: ಸೆನ್ಸೆಕ್ಸ್ ಕುಸಿತ: ಭಾರತೀಯ ಷೇರು ಮಾರುಕಟ್ಟೆಗೆ ಭಾರಿ ಹೊಡೆತ

Air India
ದೇಶ8 mins ago

Air India: ಕ್ಷಿಪಣಿ ದಾಳಿಗೂ ಮುನ್ನ ಇರಾನ್ ವಾಯು ಪ್ರದೇಶದಲ್ಲಿ ಏರ್​ ಇಂಡಿಯಾ ವಿಮಾನಗಳ ಹಾರಾಟ; ಅಧಿಕಾರಿಗಳು ಹೇಳಿದ್ದೇನು?

Physical Abuse From husband
ಬೆಂಗಳೂರು8 mins ago

Physical Abuse : ಇವನೆಂಥ ಗಂಡ! ಕಾಲ್‌ ಗರ್ಲ್‌ ಕರೆಸಿ ಪತ್ನಿ ಮುಂದೆಯೇ ಅಸಭ್ಯ ವರ್ತನೆ

Actor Dwarakish
ಸ್ಯಾಂಡಲ್ ವುಡ್12 mins ago

Actor Dwarakish: ಪತ್ನಿ, ಮಕ್ಕಳಿದ್ದರೂ ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದರು ದ್ವಾರಕೀಶ್​​

Lok Sabha Election 2024 Dr Manjunath joins PM Narendra Modi team Ashwathnarayan reveals BJP vision
Lok Sabha Election 202434 mins ago

Lok Sabha Election 2024: ಮೋದಿ ಟೀಂಗೆ ಡಾ.ಮಂಜುನಾಥ್ ಸೇರ್ಪಡೆ; ಬಿಜೆಪಿ ವಿಷನ್‌ ಬಿಚ್ಚಿಟ್ಟ ಅಶ್ವತ್ಥನಾರಾಯಣ್

Star Saree Fashion
ಫ್ಯಾಷನ್35 mins ago

Star Saree Fashion: ಮಹಿಳೆಯರನ್ನು ಆಕರ್ಷಿಸಿದ ನಟಿ ಅಮೂಲ್ಯ‌ ಹಸಿರು ಸೀರೆಯ ಸೀಕ್ರೆಟ್ ಇದು!

t20 World Cup
ಕ್ರೀಡೆ41 mins ago

T20 World Cup : ವಿಶ್ವ ಕಪ್​ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ನೋ ಚಾನ್ಸ್​; ಆಯ್ಕೆದಾರರ ಇಂಗಿತ ಬಹಿರಂಗ

Donuru Ananya Reddy
ದೇಶ43 mins ago

UPSC Results 2023: ಕೋಚಿಂಗ್‌ ಇಲ್ಲದೆ ಓದಿದ ಅನನ್ಯಾ ರೆಡ್ಡಿಗೆ ಯುಪಿಎಸ್‌ಸಿಯಲ್ಲಿ 3ನೇ ರ‍್ಯಾಂಕ್!

Lok Sabha Election 2024:
ಕರ್ನಾಟಕ44 mins ago

Lok Sabha Election 2024: ಹಾವೇರಿ, ಬಾಗಲಕೋಟೆ ಸೇರಿ ವಿವಿಧೆಡೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 87 ಲಕ್ಷ ರೂ. ಜಪ್ತಿ

IPL 2024
ಕ್ರೀಡೆ55 mins ago

IPL 2024: ಮುಂಬೈ ಪಂದ್ಯದ ಟಾಸ್​ ಕಳ್ಳಾಟ ಬಿಚ್ಚಿಟ್ಟ ಆರ್​ಸಿಬಿ ನಾಯಕ; ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ13 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌