ನವದೆಹಲಿ: ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನಿರ್ಣಾಯಕ ಕೊಡುಗೆ ನೀಡಿದ, ಅಹಿಂಸಾ ತತ್ವದಿಂದಲೇ ಜಗತ್ತಿಗೆ ಸ್ಫೂರ್ತಿಯಾದ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ (Gandhi Jayanti 2023) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ಗಣ್ಯರು ಗಾಂಧೀಜಿಯವರ ಸಮಾಧಿಸ್ಥಳವಾದ ರಾಜ್‌ಘಾಟ್‌ಗೆ (Rajghat) ತೆರಳಿ ಪುಷ್ಪನಮನ ಸಲ್ಲಿಸಿದರು.
“ಗಾಂಧಿ ಜಯಂತಿಯಂದು ರಾಷ್ಟ್ರಪಿತನಿಗೆ ಗೌರವ ಸಲ್ಲಿಸುತ್ತೇನೆ. ಅವರ ಜೀವನ ಹಾಗೂ ಸಂದೇಶಗಳು ದೇಶಕ್ಕೆ ಮಾರ್ಗವನ್ನು ತೋರಿಸಿವೆ. ಅವರ ತತ್ವಾದರ್ಶಗಳು ಭಾರತ ಮಾತ್ರವಲ್ಲ ಜಗತ್ತಿಗೇ ಬೆಳಕು ತೋರಿವೆ. ಇಡೀ ಮಾನವಕುಲಕ್ಕೇ ಅವರ ಜೀವನ, ಸಂದೇಶ, ಹೋರಾಟವು ದಾರಿದೀಪವಾಗಿದೆ. ಅವರ ಕನಸುಗಳನ್ನು ನನಸು ಮಾಡಲು ನಾವು ಎಂದಿಗೂ ಶ್ರಮಿಸೋಣ. ಏಕತೆ ಹಾಗೂ ಸಾಮರಸ್ಯ ಸಾಧನೆಗೆ ಇಂದಿನ ಪೀಳಿಗೆಯು ಗಾಂಧೀಜಿಯವರ ಸಂದೇಶಗಳನ್ನು ಪಾಲಿಸಬೇಕು” ಎಂದು ನರೇಂದ್ರ ಮೋದಿ ಪೋಸ್ಟ್ ಮಾಡಿದ್ದಾರೆ.
#WATCH | Delhi: Congress President Mallikarjun Kharge pays floral tributes to Mahatma Gandhi at Rajghat on #GandhiJayanti pic.twitter.com/S7E7dEUc0p
— ANI (@ANI) October 2, 2023
ಲಾಲ್ ಬಹದ್ದೂರ್ ಶಾಸ್ತ್ರಿಯನ್ನೂ ನೆನೆದ ಪ್ರಧಾನಿ
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ. “ಸರಳತೆ ಹಾಗೂ ದೇಶ ಸೇವೆಯ ಪರಮ ಧ್ಯೇಯದೊಂದಿಗೆ ಸೇವೆ ಸಲ್ಲಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಜನ್ಮದಿನದಂದು ನೆನೆಯೋಣ. ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆಯೂ ಈಗಲೂ ಸ್ಫೂರ್ತಿದಾಯಕವಾಗಿದೆ. ಸವಾಲಿನ ಸಂದರ್ಭಗಳಲ್ಲಿ ಅವರು ತೋರಿದ ನಾಯಕತ್ವವು ಪೀಳಿಗೆಗಳವರೆಗೆ ಸ್ಫೂರ್ತಿ ತುಂಬುತ್ತದೆ” ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Remembering Lal Bahadur Shastri Ji on his Jayanti. His simplicity, dedication to the nation, and iconic call for 'Jai Jawan, Jai Kisan' resonate even today, inspiring generations. His unwavering commitment to India's progress and his leadership during challenging times remain…
— Narendra Modi (@narendramodi) October 2, 2023
ಇದನ್ನೂ ಓದಿ: Raja Marga Column : ಗಾಂಧಿ ಕ್ಲಾಸ್ ಹೆಸರು ಬಂದಿದ್ದು ಹೇಗೆ?; ನೀವೆಂದೂ ಕೇಳಿರದ 25 ಸಂಗತಿಗಳು
ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೇರಿ ಹಲವು ಗಣ್ಯರು ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸಿದರು. ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಅಕ್ಟೋಬರ್ 1 ರಂದು ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಕೇಂದ್ರದ ಸಚಿವರು, ಸಂಸದರು, ಬಿಜೆಪಿ ನಾಯಕರು ಸ್ವಚ್ಛತಾ ಅಭಿಯಾನದಲ್ಲ ಪಾಲ್ಗೊಂಡು ಜಾಗೃತಿ ಮೂಡಿಸಿದರು.