Site icon Vistara News

Pune Police: ವಿವಾಹ ವಾರ್ಷಿಕೋತ್ಸವ ದಿನ ತನ್ನವರಿಂದಲೇ ಕೊಲೆಯಾದ ಗ್ಯಾಂಗ್‌ಸ್ಟರ್‌!

Gangster Sharad Mohol Shot dead Says Pune police

ನವದೆಹಲಿ: ಶುಕ್ರವಾರ ಮಧ್ಯಾಹ್ನ ಪುಣೆಯ ಕೊತ್ರುಡ್‌ನಲ್ಲಿ ಗ್ಯಾಂಗ್‌ಸ್ಟರ್ ಶರದ್ ಮೊಹೋಲ್‌ನನ್ನು (Gangster Sharad Mohol) ಆತನ ಗ್ಯಾಂಗ್‌ನ ಕೆಲವು ಸದಸ್ಯರು ಗುಂಡಿಕ್ಕಿ ಕೊಂದಿದ್ದಾರೆ (Shot Dead) ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ(Pune Police). ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ 40 ವರ್ಷದ ಶರದ್‌ಗೆ ಕೊತ್ತೂರು ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಖ್ಯಾತ ಗ್ಯಾಂಗ್‌ಸ್ಟರ್ ತನ್ನ ವಿವಾಹ ವಾರ್ಷಿಕೋತ್ಸವದ ದಿನವೇ (Wedding Anniversary) ಬಲಿಯಾಗಿದ್ದಾನೆ.

ಶುಕ್ರವಾರ ಮಧ್ಯಾಹ್ನ 1.30 ಗಂಟೆ ಸುಮಾರಿಗೆ ಮೂರ್ನಾಲ್ಕು ಮಂದಿ ಶರದ್ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ತಕ್ಷಣವೇ ಸಾಗಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಶರದ್ ಗ್ಯಾಂಗಿನವರೇ ಆಗಿರುವ ಕೊಲೆ ಮಾಡಿದ ಆರೋಪಿಗಳನ್ನು ಸೆರೆ ಹಿಡಿಯಲು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯು ಹೇಳಿದ್ದಾರೆ.

ಪ್ರಮುಖ ಆರೋಪಿಯನ್ನು ಸುತಾರ್ದಾರ ನಿವಾಸಿ ಸಾಹಿಲ್ ಅಲಿಯಾಸ್ ಮುನ್ನಾ ಪೋಲೇಕರ್ ಎಂದು ಪೊಲೀಸರು ಗುರುತಿಸಿದ್ದು, ಆತನನ್ನು ಮತ್ತು ಆತನ ಸಹಾಯಕರನ್ನು ಬಂಧಿಸಲು ಬಲೆ ಬೀಸಲಾಗಿದೆ. ಮೇಲ್ನೋಟಕ್ಕೆ ಶರದ್ ಮೊಹೋಲ್ ಮೇಲಿನ ದಾಳಿಯು, ಗ್ಯಾಂಗಿನೊಳಗೆ ಶುರುವಾದ ಹಣಕಾಸಿನ ವಿವಾದಕ್ಕೆ ಸಂಬಧಿಸಿದಂತೆ ನಡೆದಿರುವ ಸಾಧ್ಯತೆಗಳಿವೆ ಎಂದು ಪುಣೆ ಸಿಟಿ ಪೊಲೀಸ್ ಕಮಿಷನರ್ ರಿತೇಶ್ ಕುಮಾರ್ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚೆಗಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಸಮ್ಮುಖದಲ್ಲಿ, ಆತನ ನಿಕಟವರ್ತಿಯೂ ಆಗಿರುವ ಕೊತ್ತೂರಿನ ಸ್ವರದ್ ಪ್ರತಿಷ್ಠಾನದ ಅಧ್ಯಕ್ಷೆ ಸ್ವಾತಿ ಮೊಹೋಲ್ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಮೊಹೋಲ್ ಹೆಸರಿನಲ್ಲಿ ಕೊಲೆ ಮತ್ತು ಡಕಾಯಿತಿ ಸೇರಿದಂತೆ ಹಲವಾರು ಪ್ರಕರಣಗಳಿವೆ. ಯರವಾಡ ಜೈಲಿನಲ್ಲಿ ಶಂಕಿತ ಇಂಡಿಯನ್ ಮುಜಾಹಿದ್ದೀನ್ ಉಗ್ರ ಮೊಹಮ್ಮದ್ ಖತೀಲ್ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಆತನನ್ನು ಖುಲಾಸೆಗೊಳಿಸಲಾಗಿತ್ತು. ಭೂಮಿ ಮತ್ತು ಹಣದ ವಿವಾದವೇ ಗುಂಡಿನ ದಾಳಿಯ ಹಿಂದಿನ ಉದ್ದೇಶ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ಗ್ಯಾಂಗ್‌ಸ್ಟರ್ ಹತ್ಯೆಗೆ ಸಂಬಂಧಿಸಿದಂತೆ ಒಬ್ಬ ಶಂಕಿತನನ್ನು ಬಂಧಿಸಲಾಗಿದ್ದು, ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಲಾಗಿದೆ. ಉಳಿದ ಶಂಕಿತರನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ. ಮೊಹೋಲ್‌ಗೆ ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಮೂರು ಗುಂಡು ಹಾರಿಸಲಾಗಿದೆ. ಎರಡು ಗುಂಡುಗಳು ಅವನ ಬಲ ಭುಜಕ್ಕೆ ಬಡಿದು ಒಂದು ಗುಂಡು ಅವನ ಎದೆಗೆ ತೂರಿಕೊಂಡಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Encounter in UP: ಯೋಗಿ ನಾಡಿನಲ್ಲಿ ಮತ್ತೊಂದು ಎನ್‌ಕೌಂಟರ್‌, ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ ಬಲಿ!

Exit mobile version