Site icon Vistara News

Garbha Sanskar: ಗರ್ಭದಲ್ಲಿರುವ ಶಿಶುವಿಗೇ ಭಗವದ್ಗೀತೆ, ರಾಮಾಯಣ ಶಿಕ್ಷಣ; ಆರೆಸ್ಸೆಸ್ ಅಂಗಸಂಸ್ಥೆಯಿಂದ ಅಭಿಯಾನ

#image_title

ನವದೆಹಲಿ: ಗರ್ಭದಲ್ಲಿರುವ ಶಿಶುಗಳಿಗೇ ಸಂಸ್ಕಾರ ಕಲಿಸುವುದಕ್ಕೆ ಆರ್‌ಎಸ್‌ಎಸ್‌ನ ಅಂಗ ಸಂಸ್ಥೆಯಾಗಿರುವ ಸಮರ್ಧಿನಿ ನ್ಯಾಸ ಸಿದ್ಧವಾಗಿದೆ. ಅದಕ್ಕೆಂದೇ ಹೊಸ ಅಭಿಯಾನವನ್ನು (Garbha Sanskar) ಆರಂಭಿಸಿದೆ ಈ ಸಂಘಟನೆ.

ಇದನ್ನೂ ಓದಿ: Pregnancy and Dental Care: ಹಲ್ಲುಗಳ ಬಗ್ಗೆ ಗರ್ಭಿಣಿಯರ ಕಾಳಜಿ ಹೇಗಿರಬೇಕು?

ಮಕ್ಕಳು ಗರ್ಭದಲ್ಲಿರುವಾಗಲೇ ರಾಮಾಯಣ, ಭಗವದ್ಗೀತೆ ಶ್ಲೋಕಗಳನ್ನು ತಾಯಂದಿರಿಂದ ಪಠಣ ಮಾಡಿಸಲಾಗುವುದು. ಮಗು ಎರಡು ವರ್ಷವಾಗುವವರೆಗೆ ಮಗುವಿಗೆ ಶ್ಲೋಕಗಳ ಪಠಣ ಹೇಳಿಕೊಟ್ಟು, ಸಂಸ್ಕಾರ ಬೆಳೆಸಲಾಗುವುದು. ಅದರ ಜತೆಯಲ್ಲಿ ಸ್ತ್ರೀರೋಗ ತಜ್ಞರು, ಆಯುರ್ವೇದ ವೈದ್ಯರಿಂದ ಚಿಕಿತ್ಸೆ ಹಾಗೂ ಯೋಗ ತರಬೇತುದಾರರಿಂದ ತರಬೇತಿಯನ್ನೂ ಕೊಡಿಸಲಾಗುವುದು. ಇದು ನಮ್ಮ ಗರ್ಭ ಸಂಸ್ಕಾರ ಅಭಿಯಾನವಾಗಿದೆ ಎಂದು ಸಮರ್ಧಿನಿ ನ್ಯಾಸ ಸಂಘಟನೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಮಾಧುರಿ ಮರಾಠೆ ಅವರು ತಿಳಿಸಿದ್ದಾರೆ.

“ಗರ್ಭದಲ್ಲಿರುವ ಮಗು 500 ಪದಗಳವರೆಗೆ ಕಲಿಯಬಹುದಾಗಿದೆ. ತಾಯಿಯ ಮಾತನ್ನು ಗರ್ಭದಲ್ಲಿರುವ ಮಕ್ಕಳು ಕೇಳಬಲ್ಲರಾದ್ದರಿಂದ ನಾವು ಆ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ನಡೆಸುತ್ತಿದ್ದೇವೆ. ಈ ಅಭಿಯಾನದಲ್ಲಿ ಕನಿಷ್ಠ 1000 ಗರ್ಭಿಣಿಯರನ್ನು ಜೋಡಿಸಿಕೊಳ್ಳುವ ಗುರಿ ಹೊಂದಿದ್ದೇವೆ” ಎಂದೂ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Viral Video: ಆಜಾನ್​ ವೇಳೆ ಭಾಷಣ ನಿಲ್ಲಿಸಿದರೂ ನೀವು ಸೈತಾನ್​ ಆಗಿಯೇ ಇರುತ್ತೀರಿ; ಪ್ರಧಾನಿ ಮೋದಿ ವಿರುದ್ಧ ಪಾಕ್​ ಮಾಜಿ ಕ್ರಿಕೆಟರ್​ ವಾಗ್ದಾಳಿ

ಈ ಅಭಿಯಾನದ ಭಾಗವಾಗಿ, ಭಾನುವಾರ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯಾಗಾರವನ್ನು ನಡೆಸಲಾಗಿದೆ. ಅದರಲ್ಲಿ ದೆಹಲಿಯ ಏಮ್ಸ್‌ನ ಸ್ತ್ರೀರೋಗ ತಜ್ಞರು ಸೇರಿದಂತೆ ಹಲವಾರು ಸ್ತ್ರೀರೋಗತಜ್ಞರು ಭಾಗವಹಿಸಿದ್ದರು.

ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ವರದಿಯ ಪ್ರಕಾರ, ಗರ್ಭದಲ್ಲಿರುವಾಗಲೇ ಶಿಶುಗಳು ಭಾಷೆಯನ್ನು ಕಲಿತುಕೊಳ್ಳಲು ಪ್ರಾರಂಭಿಸುತ್ತವೆ. ಗರ್ಭಾವಸ್ಥೆಯ 30 ವಾರಗಳಲ್ಲಿ ಶ್ರವಣೇಂದ್ರಿಯ ಮತ್ತು ಮೆದುಳಿನ ಕಾರ್ಯವಿಧಾನಗಳು ಅಭಿವೃದ್ಧಿಯಾಗುತ್ತದೆ. ಗರ್ಭದಲ್ಲಿರುವ ಮಕ್ಕಳು ಗರ್ಭಾವಸ್ಥೆಯ ಕೊನೆಯ 10 ವಾರಗಳಲ್ಲಿ ತಮ್ಮ ತಾಯಂದಿರ ಮಾತುಗಳನ್ನು ಕೇಳುತ್ತಾರೆ ಎಂದೂ ವರದಿಯಿದೆ.

Exit mobile version