Site icon Vistara News

Ghulam Nabi Azad | ಮೋದಿ ಒರಟ ಎಂದುಕೊಂಡಿದ್ದೆ ಆದರೆ, ಇದು ಗುಲಾಂ ನಬಿ ಆಜಾದ್‌ ಮನ್ ಕಿ ಬಾತ್

Modi Ghulam

ನವದೆಹಲಿ: ಸುಮಾರು ಐದು ದಶಕಗಳವರೆಗೆ ಕಾಂಗ್ರೆಸ್‌ನಲ್ಲಿದ್ದು, ಇತ್ತೀಚೆಗೆ ಪಕ್ಷದಲ್ಲಿ ಉಂಟಾದ ನಾಯಕತ್ವ ಬಿಕ್ಕಟ್ಟಿನಿಂದ ಬೇಸತ್ತು ಕೆಲ ದಿನಗಳ ಹಿಂದಷ್ಟೇ ಪಕ್ಷದಿಂದ ಹೊರಬಂದ ಗುಲಾಂ ನಬಿ ಆಜಾದ್‌ (Ghulam Nabi Azad) ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. “ನಾನು ಮೋದಿ ಅವರನ್ನು ಒರಟ ಎಂದುಕೊಂಡಿದ್ದೆ. ಆದರೆ, ಅವರು ಮಾನವೀಯತೆ ಪ್ರದರ್ಶಿಸಿದರು” ಎಂದು ಹೇಳಿದ್ದಾರೆ.

ಕಳೆದ ವರ್ಷ ಗುಲಾಂ ನಬಿ ಆಜಾದ್‌ ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಮುಗಿದಾಗ ವಿದಾಯ ಭಾಷಣ ಮಾಡಿದ್ದ ಮೋದಿ ಭಾವುಕರಾಗಿದ್ದರು. ಇದನ್ನು ಸ್ಮರಿಸಿದ ಆಜಾದ್‌, “ನರೇಂದ್ರ ಮೋದಿ ಅವರು ನನ್ನ ಸದಸ್ಯತ್ವದ ಅವಧಿ ಮುಗಿಯುತ್ತೆ ಎಂಬುದರ ಬಗ್ಗೆ ದುಃಖಿತರಾಗಿರಲಿಲ್ಲ. ಆದರೆ, ಅವರು ಘಟನೆಯನ್ನು ನೆನಪಿಸಿದರು” ಎಂದಿದ್ದಾರೆ.

“ಉಗ್ರರ ದಾಳಿ ನಡೆದಾಗ ಗುಜರಾತ್‌ ಸಿಎಂ ಆಗಿದ್ದ ಮೋದಿ ಸಾಹೇಬರು ನನ್ನ ಕಚೇರಿಗೆ ಕರೆ ಮಾಡಿದ್ದರು. ಆದರೆ, ನಾನು ದುಃಖಿತನಾಗಿದ್ದೆ. ಜನರ ಗೋಳಾಟ ನೋಡಿ ನಾನೂ ಅಳುತ್ತಿದ್ದೆ. ನನ್ನ ಕಚೇರಿ ಸಿಬ್ಬಂದಿಯು ನನ್ನ ಬಳಿ ಫೋನ್‌ ತಂದಾಗ ನಾನು ಅಳುವುದು ಮೋದಿ ಅವರಿಗೆ ಕೇಳಿಸಿತು. ದುಃಖದಲ್ಲಿದ್ದ ನಾನು ಮಾತನಾಡಲು ಆಗಲಿಲ್ಲ. ಇದಾದ ಬಳಿಕವೂ ಜನರ ರಕ್ಷಣೆಗಾಗಿ ಮೋದಿ ಕರೆ ಮಾಡಿದ್ದರು. ಆಗಲೇ, ನಾನು ಅವರ ಬಗ್ಗೆ ಹೊಂದಿದ್ದ ಅಭಿಪ್ರಾಯ ಬದಲಾಯಿತು. ಅವರು ಒರಟ ಎಂದುಕೊಂಡಿದ್ದೆ. ಆದರೆ, ಅವರು ಮಾನವೀಯತೆ ಪ್ರದರ್ಶಿಸಿದರು” ಎಂದರು.

ಇದನ್ನೂ ಓದಿ | Ghulam Nabi Azad | ಸ್ವಾಭಿಮಾನವಿದ್ದವರು ಕಾಂಗ್ರೆಸ್ ಬಿಟ್ಟು ಬರಲಿ, ಗುಲಾಂ ನಬಿ ಆಜಾದ್ ಕರೆ

Exit mobile version