ನವದೆಹಲಿ: ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಮತ್ತು ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಲವು ಅಭಿಯಾನಗಳಿಗೆ ಸಿದ್ಧವಾಗುತ್ತಿರುವ ಬೆನ್ನಲ್ಲೇ ಹಿರಿಯ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಅವರು ಪಕ್ಷವನ್ನು ತೊರೆದಿದ್ದಾರೆ. ಹಾಗೆಯೇ, ರಾಹುಲ್ ಗಾಂಧಿ ವಿರುದ್ಧ ಜಿ-೨೩ ಬಂಡಾಯ ಗುಂಪಿನ ನಾಯಕರೂ ಆದ ಗುಲಾಂ ನಬಿ ಟೀಕಿಸಿದ್ದಾರೆ. ರಾಹುಲ್ ಕುರಿತು ಆಜಾದ್ ಮಾಡಿದ ಪ್ರಮುಖ ೧೦ ಟೀಕೆಗಳು ಹೀಗಿವೆ.
೧. ರಾಹುಲ್ ಗಾಂಧಿ ಅಪ್ರಬುದ್ಧರಂತೆ ವರ್ತಿಸುತ್ತಾರೆ. ಇದರಿಂದ ಪಕ್ಷದಲ್ಲಿ ಗಾಂಭೀರ್ಯವೇ ಇಲ್ಲದಂತಾಗಿದೆ ಹಾಗೂ ಜನರೂ ಅವರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.
೨. ಯಾವುದೇ ನಿರ್ಧಾರಕ್ಕೂ ಮುನ್ನ ಸಮಾಲೋಚನೆ ಮಾಡುವ ಪದ್ಧತಿಯನ್ನೇ ರಾಹುಲ್ ಅಳಿಸಿಹಾಕಿದ್ದಾರೆ.
೩. ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸುವುದು, ಅವರ ಅಭಿಪ್ರಾಯಕ್ಕೆ ಬೆಲೆ ಇಲ್ಲದಂತಾಗಿರುವುದು ಹಾಗೂ ಹಿರಿಯರನ್ನು ಮರೆಗೆ ಸರಿಸಿದ್ದು ಸೋನಿಯಾ ಗಾಂಧಿ ಪುತ್ರನೇ.
4. ಪಕ್ಷವು ಅನನುಭವಿಗಳು ಹಾಗೂ ಭಟ್ಟಂಗಿಗಳ ಗೂಡಾಗಲು ರಾಹುಲ್ ಗಾಂಧಿಯೇ ಕಾರಣ.
೫. ಸರಕಾರದ ಸುಗ್ರೀವಾಜ್ಞೆಯೊಂದನ್ನು ಹರಿದು ಹಾಕಿದ್ದು ಕಾಂಗ್ರೆಸ್ ನಾಯಕನ ಅಪ್ರಬುದ್ಧತೆಗೆ ಹಿಡಿದ ಕನ್ನಡಿಯಾಗಿದೆ.
೬. ರಾಹುಲ್ ತೆಗೆದುಕೊಂಡ ತೀರ್ಮಾನ, ಅವರ ನಡೆಗಳೇ ೨೦೧೪ರಲ್ಲಿ ಕಾಂಗ್ರೆಸ್ ಸೋಲಲು ಕಾರಣವಾದವು.
೭. ಸಿಡುಕು, ಮುನಿಸಿನಿಂದಲೇ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ತೊರೆದರು.
8. ಪಕ್ಷದೊಳಗಿನ ಬಿಕ್ಕಟ್ಟಿನ ಕುರಿತು ಜಿ-೨೩ ನಾಯಕರು ನೀಡಿದ ಎಚ್ಚರಿಕೆ, ಸಲಹೆಗಳನ್ನು ತಿರಸ್ಕರಿಸಿದರು.
೯. ಪಕ್ಷದ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಲು ಬಿಡುತ್ತಿರಲಿಲ್ಲ.
೧೦. ಈಗ ಮಾತ್ರವಲ್ಲ, ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿದ್ದಾಗಲೂ ಹಿರಿಯ ನಾಯಕರ ಕಡೆಗಣನೆ ಮಾಡಿದ್ದರು.
ಇದನ್ನೂ ಓದಿ | ಪ್ರಮುಖ ಹುದ್ದೆಗೆ ನೇಮಕವಾದ ಒಂದೇ ತಾಸಲ್ಲಿ ರಾಜೀನಾಮೆ ಕೊಟ್ಟ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್