Site icon Vistara News

Viral News: ಮಹಿಳಾ ಟೀಚರ್‌ ಜತೆ ಓಡಿ ಹೋದ 17 ವರ್ಷದ ಬಾಲಕಿ, ಇಲ್ಲೂ ಲವ್‌ ಜಿಹಾದ್‌ ಶಂಕೆ

Law Against Love Jihad

Step to curb Love Jihad: Sexual relations established with fake identity is crime now

ಜೈಪುರ: ಮುಸ್ಲಿಂ ಹುಡುಗ ಹಾಗೂ ಹಿಂದು ಹುಡುಗ ಪ್ರೀತಿಯಲ್ಲಿ ಬಿದ್ದರೆ, ಅವರಿಬ್ಬರೂ ಓಡಿ ಹೋದರೆ, ಹಿಂದು ಯುವತಿ ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ಅದನ್ನು ಲವ್‌ ಜಿಹಾದ್‌ ಎಂದು ಆರೋಪಿಸಲಾಗುತ್ತದೆ. ಆದರೆ, ರಾಜಸ್ಥಾನದ ಬಿಕಾನೇರ್‌ನಲ್ಲಿ ಮಹಿಳಾ ಟೀಚರ್‌ ಜತೆ 17 ವರ್ಷದ ಬಾಲಕಿಯು ಓಡಿಹೋಗಿದ್ದು, ಇಲ್ಲೂ ಲವ್‌ ಜಿಹಾದ್‌ ಇದೆ ಎಂದು ಬಾಲಕಿಯ ಕುಟುಂಬಸ್ಥರು (Viral News) ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಗ್ರಾಮದಲ್ಲೀಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಬಿಕಾನೇರ್‌ ವ್ಯಾಪ್ತಿಯ ಶ್ರೀದುಂಗರಗಢ ಗ್ರಾಮದಲ್ಲಿರುವ ಶಾಲೆಯಲ್ಲಿ 21 ವರ್ಷದ ಯುವತಿಯು ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ಶಾಲೆಯಲ್ಲಿ ಓದುತ್ತಿದ್ದ ಗ್ರಾಮದ 17 ವರ್ಷದ ಬಾಲಕಿಯ ಶಿಕ್ಷಕಿ ಜತೆ ಓಡಿಹೋಗಿದ್ದಾಳೆ. ಅದರಲ್ಲೂ, ಶಿಕ್ಷಕಿಯು ಮುಸ್ಲಿಂ ಸಮುದಾಯದಕ್ಕೆ ಸೇರಿರುವ ಕಾರಣ, ಲವ್‌ ಜಿಹಾದ್‌ ಹಿನ್ನೆಲೆಯಲ್ಲಿ ಶಿಕ್ಷಕಿಯು ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಬಾಲಕಿಯ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಜೂನ್‌ 30ರಂದು 17 ವರ್ಷದ ಬಾಲಕಿಯು ನಾಪತ್ತೆಯಾಗಿದ್ದಾಳೆ. ಇದೇ ದಿನ ಶಿಕ್ಷಕಿ ಕೂಡ ನಾಪತ್ತೆಯಾಗಿದ್ದಾರೆ. ಬಾಲಕಿಯು ಕಾಣೆಯಾಗುತ್ತಲೇ ಪೋಷಕರು ಎಲ್ಲೆಡೆ ಹುಡುಕಾಡಿದ್ದಾರೆ. ಸಂಬಂಧಿಕರಿಗೆಲ್ಲ ಕರೆ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇಷ್ಟಾದರೂ ಬಾಲಕಿಯ ಸುಳಿವು ಸಿಗದ ಕಾರಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿಕ್ಷಕಿಯೇ ನಮ್ಮ ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Viral Video: ನೋಡದೆಯೇ ಆಂಜನೇಯನ ಅದ್ಭುತ ಚಿತ್ರ ಬಿಡಿಸಿದ ಮಹಿಳೆ; ಜೈ ಬಜರಂಗ್ ಬಲಿ ಎಂದ ಜನ

ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯ ಪ್ರಕಾರ, ತುಂಬ ದಿನಗಳಿಂದ ಶಿಕ್ಷಕಿ ಹಾಗೂ ಬಾಲಕಿಯು ರಿಲೇಷನ್‌ಶಿಪ್‌ನಲ್ಲಿದ್ದರು ಎಂದು ತಿಳಿದುಬಂದಿದೆ. “ಶಿಕ್ಷಕಿಯ ಜತೆ ಬಾಲಕಿ ಓಡಿಹೋಗಿದ್ದು, ಅಪಹರಣದ ಕೇಸ್‌ ದಾಖಲಿಸಲಾಗಿದೆ. ಬಾಲಕಿಯನ್ನು ಹೀಗೆ ಕರೆದುಕೊಂಡು ಹೋಗುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version