ಭದ್ರಕ್, ಒಡಿಶಾ: ದೇಶದಲ್ಲೇ ಸಾಕಷ್ಟು ಹಿಂದುಳಿದುಳಿರುವ ಒಡಿಶಾದಲ್ಲಿನ (Odisha) ಮೂಲಭೂತ ಸೌಕರ್ಯಗಳ ಕೊರತೆಯ ಉದಾಹರಣೆಗಳು ಆಗಾಗ ಹೊರ ಜಗತ್ತಿಗೆ ಗೊತ್ತಾಗುತ್ತವೆ. ಅಂಥದ್ದೇ ಘಟನೆಯೊಂದು ನಡೆದಿದ್ದು, 14 ವರ್ಷದ ಬಾಲಕಿಯೊಬ್ಬಳು (14 Year Girl) ಗಾಯಗೊಂಡ ತನ್ನ ತಂದೆಯನ್ನು (injured father) 35 ಕಿ ಮೀ ಸೈಕಲ್ ರಿಕ್ಷಾ(pedals cart) ತುಳಿದುಕೊಂಡು ಜಿಲ್ಲಾಸ್ಪತ್ರೆಗೆ (Bhadrak District hospital) ಕರೆದುಕೊಂಡು ಬಂದಿದ್ದಾಳೆ. ಆದರೆ, ಅವಳಿಗೆ ಅಲ್ಲಿ ನಿರಾಸೆ ಎದುರಾಗಿದೆ. ಅಷ್ಟು ಕಷ್ಟಪಟ್ಟು ಚಿಕಿತ್ಸೆಗೆ ಬಂದವರಿಗೆ ಆಸ್ಪತ್ರೆಯವರು ಚಿಕಿತ್ಸೆ ನೀಡದೇ ವಾರ ಬಿಟ್ಟು ಬನ್ನಿ ಎಂದು ಹೇಳಿದ್ದಾರೆ! ಈ ಮನ ಕರಗುವ ಘಟನೆ ಒಡಿಶಾದ ಭದ್ರಕ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಈ ಘಟನೆ ಅಕ್ಟೋಬರ್ 23ರಂದು ನಡೆದಿದ್ದು, ಅಕ್ಟೋಬರ್ 26, ಗುರುವಾರ ಬೆಳಕಿಗೆ ಬಂದಿದೆ. ಗುರುವಾರ ಟ್ರಾಲಿಯಲ್ಲಿ ತನ್ನ ತಂದೆಯನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಕೆಲವು ಸ್ಥಳೀಯ ಜನರು ಮತ್ತು ಪತ್ರಕರ್ತರು ಭದ್ರಕ್ ಪಟ್ಟಣದ ಮೊಹತಾಬ್ ಛಾಕ್ ಬಳಿ ಬಾಲಕಿಯನ್ನು ನೋಡಿ, ವಿಚಾರಿಸಿದಾಗ ಇಡೀ ವಿಷಯ ಗೊತ್ತಾಗಿದೆ.
14 ವರ್ಷದ ಸುಜಾತಾ ಸೇಥಿ ಅವರು ನಾದಿಗಾನ್ ಹಳ್ಳಿಯಿಂದ ಗಾಯಗೊಂಡ ತನ್ನ ತಂದೆಯನ್ನು 14 ಕಿ.ಮೀ. ದೂರದ ಧಾಮನಗರ ಆಸ್ಪತ್ರೆಗೆ ಸೈಕಲ್ ರಿಕ್ಷಾದಲ್ಲಿ ಕರೆದುಕೊಂಡು ಬಂದಿದ್ದರು. ಆದರೆ, ಅಲ್ಲಿನ ಆಸ್ಪತ್ರೆಯವರು ಭದ್ರಕ್ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ. ಅಲ್ಲಿಂದ 35 ಕಿ.ಮೀ ದೂರದಲ್ಲಿರುವ ಭದ್ರಕ್‌ಗೆ ತನ್ನ ತಂದೆಯನ್ನು ಸೈಕಲ್ ಟ್ರಾಲಿಯಲ್ಲಿ ಕೂಡಿಸಿಕೊಂಡು, ಪೆಡೆಲ್ ತುಳಿದುಕೊಂಡು ಕರೆದುಕೊಂಡು ಬಂದಿದ್ದಾಳೆ. ಅಕ್ಟೋಬರ್ 22ರಂದು ನಡೆದ ಗುಂಪು ಗಲಾಟೆಯಲ್ಲಿ ಹುಡುಗಿಯ ತಂದೆ ತೀವ್ರವಾಗಿ ಗಾಯಗೊಂಡಿದ್ದ.
ಈ ಸುದ್ದಿಯನ್ನೂ ಓದಿ: Heart Attack: ಒಡಿಶಾ ರೈಲು ಅಪಘಾತದಲ್ಲಿ ಬದುಕುಳಿದರೂ ಬಿಡಲಿಲ್ಲ ಯಮರಾಯ!
ಅಷ್ಟು ದೊರದಿಂದ ಬಂದಿದ್ದ ಬಾಲಕಿಗೆ ಈಗ ವಾಪಸ್ ಮನೆಗೆ ಹೋಗಿ ಮತ್ತೆ ಒಂದು ವಾರ ಬಿಟ್ಟು ಆಪರೇಷನ್‌ಗೆ ಬರುವಂತೆ ಜಿಲ್ಲಾಸ್ಪತ್ರೆಯವರು ತಿಳಿಸಿದ್ದಾರೆ. “ನನ್ನ ಬಳಿ ಖಾಸಗಿ ವಾಹನ ಅಥವಾ ಆಂಬ್ಯುಲೆನ್ಸ್‌ಗೆ ಕರೆ ಮಾಡಲು ಮೊಬೈಲ್ ಫೋನ್ ಬಾಡಿಗೆಗೆ ಹಣವಿಲ್ಲ. ಆದ್ದರಿಂದ, ನಾನು ಅವರನ್ನು (ಸಂಭುನಾಥ್) ಆಸ್ಪತ್ರೆಗೆ ಕರೆತರಲು ನನ್ನ ತಂದೆಯ ಟ್ರಾಲಿಯನ್ನು ಬಳಸಿದ್ದೇನೆ” ಎಂದು ಬಾಲಕಿ ಹೇಳಿದ್ದಾಳೆ.
ಈ ವಿಷಯ ತಿಳಿಯುತ್ತಿದ್ದಂತೆ ಭದ್ರಕ್ ಶಾಸಕ ಸಂಜೀಬ್ ಮಲ್ಲಿಕ್ ಮ್ತತು ಧಾಮನಗರ ಮಾಜಿ ಶಾಸಕ ರಾಜೇಂದ್ರ ದಾಸ್ ಅವರು ಬಾಲಕಿಯ ನೆರವಿಗೆ ಧಾವಿಸಿದ್ದಾರೆ. ಮತ್ತು ಅಗತ್ಯವಿರುವ ಎಲ್ಲ ಸಹಾಯವನ್ನ ಮಾಡಿದ್ದಾರೆ.