Site icon Vistara News

Muslim Laws | ಯುವತಿಯು ಮುಸ್ಲಿಂ ಕಾನೂನಿನ ಅನ್ವಯ ಪೋಷಕರ ಒಪ್ಪಿಗೆ ಇಲ್ಲದೆ ಮದುವೆ ಸಾಧ್ಯ ಎಂದ ಕೋರ್ಟ್

Marriage

ನವದೆಹಲಿ: ೧೮ ವರ್ಷ ತುಂಬಿದ ಯುವತಿಯು ಮುಸ್ಲಿಂ ಕಾನೂನಿನ ಅನ್ವಯ (Muslim Laws) ಪೋಷಕರ ಅನುಮತಿ ಇಲ್ಲದೆಯೇ ಮದುವೆಯಾಗಬಹುದು ಎಂದು ದೆಹಲಿ ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಪೋಷಕರ ಅನಮತಿ ಇಲ್ಲದೆ ಮದುವೆಯಾದ ದಂಪತಿಯು ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು ಈ ಮೇಲಿನಂತೆ ಸ್ಪಷ್ಟಪಡಿಸಿದೆ.

“ಪ್ರೌಢಾವಸ್ಥೆ ತಲುಪಿದ ಯುವತಿಗೆ ಪೋಷಕರ ಒಪ್ಪಿಗೆ ಇಲ್ಲದೆ ಮದುವೆಯಾಗುವ ಹಕ್ಕಿದೆ. ಹಾಗೆಯೇ, ಅವಳು ತನ್ನ ಗಂಡನ ಜತೆ ವಾಸಿಸುವ ಹಕ್ಕನ್ನೂ ಹೊಂದಿದ್ದಾಳೆ. ಪೋಕ್ಸೊ ಕಾಯಿದೆಯ ನಿಬಂಧನೆಗಳು ಗಂಡನಿಗೆ ಅನ್ವಯವಾಗುವುದಿಲ್ಲ” ಎಂದು ನ್ಯಾಯಮೂರ್ತಿ ಜಸ್ಮೀತ್‌ ಸಿಂಗ್‌ ತಿಳಿಸಿದರು.

ಕಳೆದ ಮಾರ್ಚ್‌ ೧೧ರಂದು ಯುವಕ-ಯುವತಿ ಮದುವೆಯಾಗಿದ್ದರು. ಆದರೆ, ಯುವತಿಯ ಪೋಷಕರು ತಮ್ಮ ಮಗಳು ೧೫ ವರ್ಷದವಳಾಗಿದ್ದು, ಯುವಕ ೨೫ ವರ್ಷದವನಾಗಿದ್ದಾನೆ ಎಂದು ಆರೋಪಿಸಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದರು. ಆದರೆ, ಆಧಾರ್‌ ಕಾರ್ಡ್‌ ಮಾಹಿತಿ ಪ್ರಕಾರ ಯುವತಿಗೆ ೧೯ ವರ್ಷ ತುಂಬಿದೆ ಎಂಬುದು ದೃಢವಾಗಿದೆ.

ಇದೆಲ್ಲವನ್ನು ಪರಿಗಣಿಸಿದ ನ್ಯಾಯಾಲಯವು, “ಪ್ರೌಢಾವಸ್ಥೆಗೆ ಬಂದ ಯುವತಿಗೆ ತನ್ನ ಇಚ್ಛೆಯಂತೆ ಮದುವೆಯಾಗುವ ಹಕ್ಕಿದೆ. ಅವಳ ವೈಯಕ್ತಿಕ ನಿರ್ಧಾರದ ವಿಚಾರದಲ್ಲಿ ಯಾರಿಗೂ ಮಧ್ಯಪ್ರವೇಶಿಸುವ ಹಕ್ಕಿಲ್ಲ. ಮುಸ್ಲಿಂ ಕಾನೂನಿನ ಅನ್ವಯ ಆಕೆ ತಂದೆ-ತಾಯಿಯ ಸಮ್ಮತಿ ಇಲ್ಲದೆ ಮದುವೆಯಾಗಬಹುದು” ಎಂದು ತಿಳಿಸಿದೆ. ಹಾಗೆಯೇ, ದಂಪತಿಗೆ ಭದ್ರತೆ ಒದಗಿಸಿ ಎಂದು ಪೊಲೀಸರಿಗೆ ಸೂಚಿಸಿದೆ.

ಇದನ್ನೂ ಓದಿ | Double Marriage | ಈ ದೇಶದಲ್ಲಿ ಡಬಲ್ ಮದುವೆ ಆಗದಿದ್ದರೆ ಜೈಲು ಗ್ಯಾರಂಟಿನಾ?

Exit mobile version