Site icon Vistara News

ಕೊಹಿನೂರು ವಜ್ರವಿರುವ ಕಿರೀಟ ಧರಿಸಲೊಪ್ಪದ ಬ್ರಿಟನ್ ರಾಣಿ ಕ್ಯಾಮಿಲ್ಲಾ; ವಾಪಸ್​ ಕೊಡುವಂತೆ ಭಾರತೀಯರ ಒತ್ತಾಯ

Give back Our Kohinoor Says Indians After Britain Coronation Ceremony over

#image_title

ಬ್ರಿಟನ್​ನಲ್ಲಿ ನೂತನ ರಾಜ-ರಾಣಿಯರಾದ ಕಿಂಗ್​ ಚಾರ್ಲ್ಸ್​​ 111 ಮತ್ತು ಕ್ಯಾಮಿಲ್ಲಾರ (Queen Camilla) ಪಟ್ಟಾಭಿಷೇಕ ಶನಿವಾರ ಅದ್ಧೂರಿಯಾಗಿ ನಡೆಯಿತು (King charles’ coronation). ಅವರಿಬ್ಬರಿಗೂ ಕಿರೀಟ ಧಾರಣೆ ಮಾಡಿ, ಸಿಂಹಾಸನದಲ್ಲಿ ಕೂರಿಸಲಾಯಿತು. ನಂತರ ರಾಜ-ರಾಣಿ ಮೆರವಣಿಗೆಯೂ ನಡೆಯಿತು. ಹೀಗೆ ರಾಜ-ರಾಣಿಯ ಪಟ್ಟಾಭಿಷೇಕ ಮುಕ್ತಾಯಗೊಳ್ಳುತ್ತಿದ್ದಂತೆ ಭಾರತೀಯರು ಕೊಹಿನೂರ್ ವಜ್ರವನ್ನು ವಾಪಸ್ ಕೊಡುವಂತೆ ಆಗ್ರಹ ಮಾಡುತ್ತಿದ್ದಾರೆ. ಭಾರತದ ಹಲವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡು, ಇನ್ನಾದರೂ ಕೊಹಿನೂರು ವಜ್ರವನ್ನು ನಮಗೆ ಕೊಟ್ಟುಬಿಡಿ ಎನ್ನುತ್ತಿದ್ದಾರೆ.

1849ರಲ್ಲಿ ಬ್ರಿಟಿಷರು ಪಂಜಾಬ್​​ನ್ನು ವಶಪಡಿಸಿಕೊಂಡ ಬೆನ್ನಲ್ಲೇ ಕೊಹಿನೂರು ವಜ್ರ ಅಂದಿನ ರಾಣಿ ವಿಕ್ಟೋರಿಯಾ ಪಾಲಾಗಿತ್ತು. ಅದಾದ ಬಳಿಕ ಬ್ರಿಟನ್​​ನಲ್ಲಿ 70ವರ್ಷಗಳ ಕಾಲ ರಾಣಿಯಾಗಿ ಮೆರೆದ ಕ್ವೀನ್ ಎಲಿಜಬೆತ್​ 11 ಅವರ ಕಿರೀಟದಲ್ಲಿ ಈ ವಜ್ರ ಸೇರಿಕೊಂಡಿತು. ರಾಣಿ ಎಲಿಜಬೆತ್ ಅವರು 2022ರ ಸೆಪ್ಟೆಂಬರ್​ನಲ್ಲಿ ಮೃತಪಟ್ಟ ಬಳಿಕ ಅವರ ಕಿರೀಟವನ್ನು ರಕ್ಷಣೆ ಮಾಡಿಡಲಾಗಿತ್ತು. ಅರಮನೆಯ ಮ್ಯೂಸಿಯಂನಲ್ಲಿ ಇಡಲಾಗಿತ್ತು. ಕ್ವೀನ್​ ಎಲಿಜಬೆತ್​ ಅವರ ಹಿರಿಯ ಪುತ್ರ ಪ್ರಿನ್ಸ್​ ಚಾರ್ಲ್ಸ್​ 111 ರಾಜನಾದ ಮೇಲೆ ಅವರ ಪತ್ನಿ ಕ್ಯಾಮಿಲ್ಲಾ ಅವರೇ ರಾಣಿಯಾಗುತ್ತಾರೆ. ಹಾಗಾಗಿ ಕೊಹಿನೂರು ವಜ್ರ ಇರುವ ಕಿರೀಟವನ್ನು ಅವರಿಗೇ ಧಾರಣೆ ಮಾಡಲಾಗುತ್ತದೆ ಎಂಬ ವರದಿಗಳು ಹರಿದಾಡಿದ್ದವು.

ಆದರೆ ಶನಿವಾರ ನಡೆದ ರಾಜ-ರಾಣಿ ಪಟ್ಟಾಭಿಷೇಕದಲ್ಲಿ ಕೊಹಿನೂರು ವಜ್ರವಿರುವ ಕಿರೀಟ ಕಾಣಿಸಲೇ ಇಲ್ಲ. ರಾಣಿ ಕ್ಯಾಮಿಲ್ಲಾರಿಗೆ ಹಾಕಿದ ಕಿರೀಟ ಅದಾಗಿರಲೂ ಇಲ್ಲ. ಕ್ವೀನ್ ಎಲಿಜಬೆತ್​ 11 ಅವರಿಗಿಂತಲೂ ಪೂರ್ವ ರಾಣಿಯಾಗಿದ್ದ ಅವರ ಅಜ್ಜಿ ಕ್ವೀನ್ ಮೇರಿ ಧರಿಸುತ್ತಿದ್ದ ಕಿರೀಟವನ್ನು ತಾವು ಧರಿಸಲು ಕ್ವೀನ್​ ಕ್ಯಾಮಿಲ್ಲಾ ನಿರ್ಧಾರ ಮಾಡಿದ್ದರಿಂದ ಅದೇ ಕಿರೀಟವನ್ನು ಕ್ಯಾಮಿಲ್ಲಾರಿಗೆ ಹಾಕಲಾಗಿದೆ. ಅಂದರೆ ಇದು ಕೊಹಿನೂರು ವಜ್ರವಿಲ್ಲದ, ರತ್ನಖಚಿತವಾದ ಇನ್ನೊಂದು ಕಿರೀಟ. ರಾಣಿ ಕ್ಯಾಮಿಲ್ಲಾ ಅವರು ಕೊಹಿನೂರು ವಜ್ರವಿಲ್ಲದ ಕಿರೀಟ ಧರಿಸಿದ್ದು ಯಾವಾಗ ಗೊತ್ತಾಯಿತೋ, ಆಗಿನಿಂದಲೂ ಭಾರತೀಯರು ಮತ್ತೆ ಕೊಹಿನೂರು ವಜ್ರಕ್ಕಾಗಿ ಒತ್ತಾಯ ಮಾಡುತ್ತಿದ್ದಾರೆ.

ಇದನ್ನೂ ಓದಿ: Rishi Sunak | ಪ್ಲೀಸ್‌, ಕೊಹಿನೂರು ವಜ್ರ ವಾಪಸ್‌ ಕಳುಹಿಸಿ… ರಿಷಿ ಬ್ರಿಟನ್‌ ಪ್ರಧಾನಿ ಆಗುತ್ತಲೇ ಭಾರತೀಯರ ಒತ್ತಾಯ!

‘ಕಿಂಗ್​​ ಚಾರ್ಲ್ಸ್​ ಮತ್ತು ರಾಣಿ ಕ್ಯಾಮಿಲ್ಲಾರಿಗೆ ಅಭಿನಂದನೆಗಳು. ದಯವಿಟ್ಟು ಭಾರತದಿಂದ ನಿಮ್ಮ ಪೂರ್ವಜನರು ಲೂಟಿ ಮಾಡಿಕೊಂಡು ಹೋದ ಕೊಹಿನೂರು ಡೈಮಂಡ್​ನ್ನು ನೀವಾದರೂ ವಾಪಸ್ ಕೊಡಿ’ ಎಂದು ಒಬ್ಬರು ಪೋಸ್ಟ್ ಹಾಕಿದ್ದರೆ, ಇನ್ನೊಬ್ಬರು ಟ್ವೀಟ್ ಮಾಡಿ ‘ಇನ್ನಾದರೂ ನಮ್ಮ ದೇಶದ ಸ್ವತ್ತಾದ ಕೊಹಿನೂರ್ ವಜ್ರವನ್ನು ನಾವು ಮರಳಿ ಪಡೆಯಬಹುದೇ’ ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆ ಅಕ್ಟೋಬರ್​ನಲ್ಲಿ ಬ್ರಿಟನ್​ ಪ್ರಧಾನಿಯಾಗಿ ರಿಷಿ ಸುನಕ್​ ಅವರು ನೇಮಕಗೊಂಡಾಗಲೂ ಸಾಮಾಜಿಕ ಜಾಲತಾಣದಲ್ಲಿ ಇದೇ ಬೇಡಿಕೆ ಇಟ್ಟಿದ್ದರು. ನೀವು ಮೂಲತಃ ಭಾರತದವರೇ ಅಲ್ಲವೇ, ಕೊಹಿನೂರು ವಜ್ರ ವಾಪಸ್ ಕೊಡಿಸಿ’ ಎಂದಿದ್ದರು. ಅಂದಹಾಗೇ ಈ ಕೊಹಿನೂರ್ ಡೈಮಂಡ್​ 105.6 ಕ್ಯಾರೆಟ್​ವುಳ್ಳದ್ದಾಗಿದೆ.

Exit mobile version