ಅಹಮದಾಬಾದ್: ಮುಸ್ಲಿಂ ಹೆಣ್ಣುಮಕ್ಕಳಿಗೆ ಮಸೀದಿಗಳ ಪ್ರವೇಶಕ್ಕೆ ನಿರ್ಬಂಧಿಸಿರುವ ಕುರಿತು ಆಗಾಗ ಚರ್ಚೆಗಳು ನಡೆಯುತ್ತವೆ. ಪ್ರವೇಶ ಕಲ್ಪಿಸಬೇಕು ಎಂಬ ಹಕ್ಕೊತ್ತಾಯಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಮುಸ್ಲಿಂ ಮೌಲ್ವಿ ಅವರು ಹೆಣ್ಣುಮಕ್ಕಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಚುನಾವಣೆಯಲ್ಲಿ ಸ್ಪರ್ಧಿಸಲು ಮುಸ್ಲಿಂ ಹೆಣ್ಣುಮಕ್ಕಳಿಗೆ ಟಿಕೆಟ್ (Tickets To Muslim Women) ನೀಡುವುದು ಇಸ್ಲಾಂ ವಿರೋಧಿ” ಎಂದು ಅಹಮದಾಬಾದ್‌ನಲ್ಲಿರುವ ಜಾಮಾ ಮಸೀದಿಯ ಶಾಹಿ ಇಮಾಮ್ ಶಬ್ಬೀರ್ ಅಹ್ಮದ್ ಸಿದ್ದಿಕಿ ಹೇಳಿದ್ದಾರೆ.
“ಮುಸ್ಲಿಂ ಹೆಣ್ಣುಮಕ್ಕಳಿಗೆ ಟಿಕೆಟ್ ನೀಡುವುದು ಇಸ್ಲಾಂನಲ್ಲಿ ನಿಷಿದ್ಧವಾಗಿದೆ. ಟಿಕೆಟ್ ನೀಡಿದರೆ ಅದರಿಂದ ಧರ್ಮವನ್ನು ದುರ್ಬಲಗೊಳಿಸಿದಂತೆ ಆಗುತ್ತದೆ. ಮುಸ್ಲಿಮರಲ್ಲಿ ಪುರುಷರೇ ಇಲ್ಲ ಎಂದಂತಾಗುತ್ತದೆ” ಎಂದು ಹೇಳಿದ್ದಾರೆ. ಶಬ್ಬೀರ್ ಅಹ್ಮದ್ ಸಿದ್ದಿಕಿ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ | Viral Video| ಹಿಜಾಬ್ ಧರಿಸದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಇರಾನ್ ಕ್ರೀಡಾಪಟುವಿನ ಮನೆ ಧ್ವಂಸ