ಗಾಂಧಿನಗರ: ಬಾಂಬ್ ದಾಳಿ ಬೆದರಿಕೆಯ (Bomb Threat) ಹಿನ್ನೆಲೆಯಲ್ಲಿ ರಷ್ಯಾದ ಮಾಸ್ಕೊದಿಂದ ಗೋವಾಗೆ ತೆರಳುತ್ತಿದ್ದ ಚಾರ್ಟರ್ಡ್ ವಿಮಾನವು ಗುಜರಾತ್‌ನ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡ್ ಆಗಿದೆ. ಗೋವಾ ಎಟಿಸಿ (Air Traffic Control)ಗೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಕ್ಷಿಪ್ರವಾಗಿ ವಿಮಾನವನ್ನು ಜಾಮ್‌ನಗರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
“ಗೋವಾಗೆ ತೆರಳುತ್ತಿದ್ದ ವಿಮಾನವನ್ನು ಜಾಮ್‌ನಗರದಲ್ಲಿ ಸೋಮವಾರ ರಾತ್ರಿ 9.49ಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ” ಎಂದು ಜಾಮ್‌ನಗರ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನದಲ್ಲಿ 244 ಪ್ರಯಾಣಿಕರು ಇದ್ದರು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಆದಾಗ್ಯೂ, ಬಾಂಬ್ ದಾಳಿ ಬೆದರಿಕೆ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ | ಗೃಹ ಸಚಿವ ಅಮಿತ್ ಶಾ ಪ್ರಯಾಣಿಸುತ್ತಿದ್ದ ವಿಮಾನ ಗುವಾಹಟಿಯಲ್ಲಿ ತುರ್ತು ಭೂಸ್ಪರ್ಶ; ಏರ್ಪೋರ್ಟ್ಗೆ ತೆರಳಿದ ಅಸ್ಸಾಂ ಸಿಎಂ