Site icon Vistara News

Silly Souls Bar | ಗೋವಾ ಕೆಫೆ & ಬಾರ್‌ನಲ್ಲಿ ಸ್ಮೃತಿ ಇರಾನಿ ಕುಟುಂಬದ್ದೇ ಹೂಡಿಕೆ, ಆರ್‌ಟಿಐ ಮಾಹಿತಿ ಬಹಿರಂಗ!

Smriti

ಪಣಜಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಗಳು ಗೋವಾದಲ್ಲಿ ಅಕ್ರಮವಾಗಿ ದಿ ಸಿಲ್ಲಿ ಸೋಲ್ಸ್‌ ಕೆಫೆ ಆ್ಯಂಡ್‌ ಬಾರ್‌ನ (The Silly Souls Cafe and Bar) ಪರವಾನಗಿ ಪಡೆದಿದ್ದಾರೆ ಎಂದು ಪ್ರತಿಪಕ್ಷಗಳು ಮಾಡಿದ ಆರೋಪವು ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ, “ಸ್ಮೃತಿ ಇರಾನಿ ಅವರ ಕುಟುಂಬಸ್ಥರದ್ದೇ ಸಿಲ್ಲಿ ಸೋಲ್ಸ್‌ ಕೆಫೆ ಆ್ಯಂಡ್‌ ಬಾರ್‌ನಲ್ಲಿ ಹೂಡಿಕೆ ಇದೆ” ಎಂದು ಆರ್‌ಟಿಇ ಮಾಹಿತಿಯಿಂದ ಬಹಿರಂಗವಾಗಿದೆ.

ಎರೆಸ್‌ ರೋಡ್ರಿಗ್ಯೂಸ್‌ ಎಂಬುವರು ಸಲ್ಲಿಸಿದ ಅರ್ಜಿ ಅನ್ವಯ ಆರ್‌ಟಿಐ ಮಾಹಿತಿ ಲಭ್ಯವಾಗಿದೆ. “ಗೋವಾ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಪರವಾನಗಿ ಒಪ್ಪಂದವು ಡೀನ್‌ ಡಿʼಗಾಮಾ ಎಂಬುವರು ಹಾಗೂ ಏಟಾಲ್‌ ಫುಡ್‌ ಆ್ಯಂಡ್‌ ಬೆವರೇಜಸ್‌ ಲಿಮಿಟೆಡ್‌ ಲಿಯಾಬಿಲಿಟಿ ಪಾರ್ಟ್‌ನರ್‌ಶಿಪ್‌ ಮಧ್ಯೆ ನಡೆದಿದೆ. ಏಟಾಲ್‌ ಫುಡ್‌ ಆ್ಯಂಡ್‌ ಬೆವರೇಜಸ್‌ ಲಿಮಿಟೆಡ್‌ನಲ್ಲಿ ಸ್ಮೃತಿ ಇರಾನಿ ಕುಟುಂಬದ ಹೂಡಿಕೆ ಇದೆ” ಎಂದು ಆರ್‌ಟಿಐ ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ, ಪ್ರಕರಣವು ಮತ್ತೆ ಸುದ್ದಿಯಾಗುವ ಸಾಧ್ಯತೆ ಇದೆ.

ಸ್ಮೃತಿ ಇರಾನಿ ಪುತ್ರಿ ಜೋಯಿಶ್‌ ಇರಾನಿ ಅವರು ಅಕ್ರಮವಾಗಿ ಪರವಾನಗಿ, ಅಂದರೆ, ೨೦೨೧ರಲ್ಲಿ ಮೃತಪಟ್ಟವರ ಹೆಸರಿನಲ್ಲಿ ಪರವಾನಗಿ ಪಡೆದು ಸಿಲ್ಲಿ ಸೋಲ್ಸ್‌ ಕೆಫೆ ಆ್ಯಂಡ್‌ ಬಾರ್‌ ನಡೆಸುತ್ತಿದ್ದರು ಎಂಬ ಆರೋಪವಿದೆ. ಆದರೆ, ಪ್ರಕರಣವು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿ, ನ್ಯಾಯಾಲಯವು “ದಾಖಲೆಗಳ ಪ್ರಕಾರ ಇದು ಜೋಯಿಶ್‌ ಇರಾನಿ ಅವರಿಗೆ ಸೇರಿದ ರೆಸ್ಟೋರೆಂಟ್‌ ಎನಿಸಿಲ್ಲ” ಎಂದಿತ್ತು.

ಇದನ್ನೂ ಓದಿ | ಗೋವಾ ಬಾರ್​ ಆ್ಯಂಡ್​ ರೆಸ್ಟೋರೆಂಟ್​ ಸ್ಮೃತಿ ಇರಾನಿದೂ ಅಲ್ಲ, ಅವರ ಪುತ್ರಿದೂ ಅಲ್ಲ ಎಂದ ದೆಹಲಿ ಹೈಕೋರ್ಟ್

Exit mobile version