Site icon Vistara News

Narendra Modi: 2047ರವರೆಗೆ ದೇಶಕ್ಕಾಗಿ ನನ್ನ ಸೇವೆ; ಇದು ದೇವರ ಆದೇಶ ಎಂದ ಮೋದಿ

Narendra Modi

God has ordained that I should continue to work for Viksit Bharat till 2047, won't die till then: PM Narendra Modi

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಕೊನೆಯ ಹಂತಕ್ಕೆ ಬಂದಿದ್ದು, ಶನಿವಾರ (ಮೇ 25) 6ನೇ ಹಂತದ ಮತದಾನ ನಡೆಯಲಿದೆ. ಹಾಗಾಗಿ, ಚುನಾವಣೆ ಪ್ರಚಾರವೂ ಅಬ್ಬರದಿಂದ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಂತೂ ಸಾಲು ಸಾಲು ಸಮಾವೇಶಗಳ ಜತೆಗೆ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇದರ ಮಧ್ಯೆಯೇ, ನರೇಂದ್ರ ಮೋದಿ ಅವರು, “ವಿಕಸಿತ ಭಾರತದ (Viksit Bharat) ನಿರ್ಮಾಣವಾಗುವವರೆಗೆ ಅಂದರೆ, 2047ರವರೆಗೆ ನಾನು ಕೆಲಸ ಮಾಡಬೇಕು ಎಂಬುದು ದೇವರ ಆದೇಶವಾಗಿದೆ” ಎಂದು ಹೇಳಿದ್ದಾರೆ. ಆ ಮೂಲಕ 2047ರವರೆಗೆ ನಾನೇ ಪ್ರಧಾನಿ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.

“ದೇವರು ನನಗೆ ವಿಶೇಷ ಕಾರಣಕ್ಕಾಗಿ ಇಲ್ಲಿಗೆ ಕಳುಹಿಸಿದ್ದಾನೆ ಎಂಬುದು ನನ್ನ ಭಾವನೆ. ವಿಕಸಿತ ಭಾರತದ ಕಲ್ಪನೆ ಸಾಕಾರ ಮಾಡು ಎಂಬುದು ದೇವರ ಆದೇಶವಾಗಿದೆ. ದೇವರೇ ನನಗೆ ದಾರಿ ತೋರುತ್ತಿದ್ದಾನೆ, ಆತನೇ ನನಗೆ ಶಕ್ತಿ ತುಂಬುತ್ತಿದ್ದಾನೆ. ನನಗೆ ತುಂಬ ವಿಶ್ವಾಸವಿದೆ. ನಾನು 2047ರ ವೇಳೆಗೆ ದೇಶವು ವಿಕಸಿತ ಆಗುತ್ತದೆ ಎಂಬ ದೃಢ ನಿಶ್ಚಯವಿದೆ. ಹಾಗಾಗಿ, ನಾನು 2047ರವರೆಗೆ ಹಗಲು-ರಾತ್ರಿ ಕೆಲಸ ಮಾಡುತ್ತೇನೆ. ಅಲ್ಲಿಯ ತನಕ ದೇವರು ನನ್ನನ್ನು ಕರೆದುಕೊಳ್ಳುವುದಿಲ್ಲ” ಎಂದು 74 ವರ್ಷದ ನರೇಂದ್ರ ಮೋದಿ ಅವರು ಇಂಡಿಯಾ ಟಿವಿಗೆ ನೀಡಿದ ಸಂದರ್ಶನದ ವೇಳೆ ಪ್ರಸ್ತಾಪಿಸಿದ್ದಾರೆ.

ಪಾಕ್‌ನಲ್ಲಿ ಉಗ್ರರ ಹತ್ಯೆ ಹಿಂದೆ ಇರೋದು ಯಾರು?

ಪಾಕಿಸ್ತಾನದಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಉಗ್ರರು ಬಲಿಯಾಗುತ್ತಿರುವುದರ ಹಿಂದೆ ಭಾರತದ ಕೈವಾಡ ಇದೆ ಎಂಬುದಾಗಿ ಸಂದರ್ಶಕ ಕೇಳಿದ ಪ್ರಶ್ನೆಗೆ ನರೇಂದ್ರ ಮೋದಿ ಉತ್ತರಿಸಿದರು. “ಪಾಕಿಸ್ತಾನದವರು ಇದರ ಕುರಿತು ಚಿಂತೆ ಮಾಡುತ್ತಾರೆ. ಆದರೆ, ಪಾಕಿಸ್ತಾನದಲ್ಲಿ ಉಗ್ರರು ಹತ್ಯೆಗೀಡಾದರೆ, ಭಾರತದಲ್ಲಿರುವ ಕೆಲವರ ಕಣ್ಣಿನಲ್ಲಿ ನೀರು ಏಕೆ ಬರುತ್ತದೆ ಎಂಬುದೇ ನನಗೆ ಗೊತ್ತಾಗುತ್ತಿಲ್ಲ” ಎಂದಷ್ಟೇ ಹೇಳಿದರು. ಸಂದರ್ಶನದ ವೇಳೆ ರಾಹುಲ್‌ ಗಾಂಧಿ, ಪ್ರತಿಪಕ್ಷಗಳು, ಅಭಿವೃದ್ಧಿ, ಇಸ್ರೇಲ್‌-ಪ್ಯಾಲೆಸ್ತೀನ್‌ ಯುದ್ಧ ಸೇರಿ ಹಲವು ವಿಷಯಗಳ ಕುರಿತು ಮೋದಿ ಮಾತನಾಡಿದರು.

ಮಣಿಶಂಕರ್‌ ಅಯ್ಯರ್‌ ‘ಅಣುಬಾಂಬ್‌’ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿರು. “ನಾನೇ ಪಾಕಿಸ್ತಾನಕ್ಕೆ (Pakistan) ಹೋಗಿ, ಆ ದೇಶದ ಶಕ್ತಿ ಎಷ್ಟಿದೆ ಎಂಬುದನ್ನು ನೋಡಿಕೊಂಡು ಬಂದಿದ್ದೇನೆ” ಎಂದು ಹೇಳುವ ಮೂಲಕ ತಿರುಗೇಟು ನೀಡಿದರು. “ನಾನೇ ಲಾಹೋರ್‌ಗೆ ತೆರಳಿ ಆ ಪಾಕಿಸ್ತಾನದ ಶಕ್ತಿ ಎಷ್ಟಿದೆ ಎಂಬುದನ್ನು ನೋಡಿಕೊಂಡು ಬಂದಿದ್ದೇನೆ. ನನ್ನನ್ನು ನೋಡಿ, ಪಾಕಿಸ್ತಾನದ ಒಬ್ಬ ಪತ್ರಕರ್ತ ಆಶ್ಚರ್ಯದಿಂದ ಕೇಳಿದ. ‘ವೀಸಾ ಇಲ್ಲದೆ ನೀವೇಗೆ ಇಲ್ಲಿಗೆ ಬಂದಿದ್ದೀರಿ’ ಎಂದ. ಅದಕ್ಕೆ ನಾನು, ‘ಪಾಕಿಸ್ತಾನ ಒಂದು ಕಾಲಕ್ಕೆ ನಮ್ಮದೇ ದೇಶದ ಭಾಗವಾಗಿತ್ತು’ ಎಂಬುದಾಗಿ ಉತ್ತರಿಸಿದೆ” ಎಂಬುದಾಗಿ ನರೇಂದ್ರ ಮೋದಿ ಹೇಳಿದ್ದಾರೆ. ಆ ಮೂಲಕ ಮಣಿಶಂಕರ್‌ ಅಯ್ಯರ್‌ ಹೇಳಿಕೆಗೆ ವ್ಯಂಗ್ಯವಾಗಿಯೇ ಉತ್ತರ ಕೊಟ್ಟರು.

ಇದನ್ನೂ ಓದಿ: PM Modi: 400 ಸೀಟು, 400 ಸೀಟು ಎಂದು ಪ್ರತಿಪಕ್ಷಗಳನ್ನು ಮಂಗ್ಯಾ ಮಾಡಿದ ಮೋದಿ; ಅವರ ಮಾತಲ್ಲೇ ಕೇಳಿ!

Exit mobile version