ಚಿನ್ನ-ಬೆಳ್ಳಿ ಬೆಲೆ (Gold-Silver Price Today) ಇಂದು ಗಣನೀಯವಾಗಿ ಏರಿಕೆ ಕಂಡಿದೆ. ಗುಡ್ರಿಟರ್ನ್ಸ್ ವೆಬ್ಸೈಟ್ ಪ್ರಕಾರ, 22 ಕ್ಯಾರೆಟ್ನ, 10 ಗ್ರಾಂ ಚಿನ್ನದ ಬೆಲೆ (Gold Price Today) ನಿನ್ನೆ 56000 ರೂಪಾಯಿ ಇದ್ದಿದ್ದು, ಇಂದು 250 ರೂಪಾಯಿಯಷ್ಟು ಏರಿಕೆಯಾಗಿದ್ದು, 56,250 ರೂ.ಗೆ ತಲುಪಿದೆ. ಹಾಗೇ, 24 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ ನಿನ್ನೆ 61,100 ರೂಪಾಯಿ ಇದ್ದಿದ್ದು, ಇಂದು 260 ರೂ.ಏರಿಕೆಯಾಗಿ, 61,360 ರೂಪಾಯಿ ಆಗಿದೆ. ಬೆಳ್ಳಿಯ ದರ (Silver Rate) ತುಸು ಕಡಿಮೆಯಾಗಿದೆ. 100 ಗ್ರಾಂ. ಬೆಳ್ಳಿಯ ಬೆಲೆ ಇಂದು 7405 ರೂ. ಆಗಿದ್ದು, ನಿನ್ನೆ 7450 ರೂ. ಇತ್ತು. ಬಹು ಸರಕು ವಿನಿಮಯ (MCX) ಮಾರುಕಟ್ಟೆಯಲ್ಲಿ 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ 5625 ರೂಪಾಯಿ ಇದ್ದು, 24 ಕ್ಯಾರೆಟ್ನ 1 ಗ್ರಾಂ. ಬಂಗಾರದ ಬೆಲೆ 6136 ಇದೆ. ಹಾಗೇ, 10 ಗ್ರಾಂ ಬೆಳ್ಳಿಯ ಬೆಲೆ 740 ರೂ. ಇದ್ದು, 1 ಕೆಜಿ ಬೆಳ್ಳಿ ದರ 74,050ರೂ. ಆಗಿದೆ.
ಬೆಂಗಳೂರಿನ ಚಿನ್ನ-ಬೆಳ್ಳಿ ದರ
22 ಕ್ಯಾರೆಟ್ ಚಿನ್ನ: 1 ಗ್ರಾಂ-5,630ರೂ., 8 ಗ್ರಾಂ: 45,040 ರೂ., 10 ಗ್ರಾಂ: 56,300 ರೂ, 100 ಗ್ರಾಂ: 5,63,000 ರೂ.
24 ಕ್ಯಾರೆಟ್ ಚಿನ್ನ: 1 ಗ್ರಾಂ: 6,141 ರೂ., 8 ಗ್ರಾಂ: 49,128, 10 ಗ್ರಾಂ: 61,410 ರೂ., 100 ಗ್ರಾಂ: 6,14,100 ರೂಪಾಯಿ.
ಬೆಳ್ಳಿ ಬೆಲೆ: 1ಗ್ರಾಂ: 77.50 ರೂ., 8 ಗ್ರಾಂ: 620 ರೂ., 10 ಗ್ರಾಂ: 775 ರೂ., 100 ಗ್ರಾಂ: 7750 ರೂ., 1ಕೆಜಿ: 77,500 ರೂ.
ಇದನ್ನೂ ಓದಿ: Gold Price Today: ಚಿನ್ನ-ಬೆಳ್ಳಿ ದರದಲ್ಲಿ ಇಂದು ಮತ್ತೆ ಇಳಿಕೆ; ಬೆಂಗಳೂರಿನಲ್ಲಿ ಎಷ್ಟಿದೆ ಬೆಲೆ?
ವಿವಿಧ ಮಹಾನಗರಗಳಲ್ಲಿ 22 ಕ್ಯಾರೆಟ್, 10ಗ್ರಾಂ ಚಿನ್ನ ಮತ್ತು 10 ಗ್ರಾಂ ಬೆಳ್ಳಿ ದರ ಹೇಗಿದೆ?
ದೆಹಲಿ: ಚಿನ್ನ 56,400 ರೂ. ಮತ್ತು ಬೆಳ್ಳಿ-740 ರೂಪಾಯಿ
ಮುಂಬಯಿ: ಚಿನ್ನ-56,250 ರೂ. ಮತ್ತು ಬೆಳ್ಳಿ 740 ರೂ.
ಕೋಲ್ಕತ್ತ: ಚಿನ್ನ-56,250 ರೂ. ಮತ್ತು ಬೆಳ್ಳಿ 740.50 ರೂಪಾಯಿ.
ಚೆನ್ನೈ: ಚಿನ್ನ: 56,650ರೂ. ಬೆಳ್ಳಿ: 775 ರೂಪಾಯಿ.
ಭಾರತ ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡ ಬಂಗಾರದ ಮಾರುಕಟ್ಟೆಯಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಈಗಂತೂ ಭಾರತದಲ್ಲಿ ಮದುವೆ ಮತ್ತಿತರ ಸಮಾರಂಭಗಳ ಸೀಸನ್. ಹೀಗಾಗಿ ಚಿನ್ನ-ಬೆಳ್ಳಿ ಒಡವೆಗಳಿಗೆ ಸಹಜವಾಗಿ ಬೇಡಿಕೆಯೂ ಹೆಚ್ಚಿದೆ. ಬೆಲೆಯಲ್ಲೂ ಏರಿಳಿತ ಆಗುತ್ತಿದೆ.