ಬೆಂಗಳೂರು, ಕರ್ನಾಟಕ: ದೇಶದ ಐಟಿ ಕ್ಯಾಪಿಟಲ್ ಆಗಿರುವ ಬೆಂಗಳೂರು (Bengaluru) ನಗರದಲ್ಲಿ ಜೂನ್ 9ರಂದು ಬಂಗಾರ ದರದಲ್ಲಿ ಏರಿಕೆಯಾಗಿದೆ. 1 ಗ್ರಾಮ್ 22 ಕ್ಯಾರಟ್ ಗೋಲ್ಡ್ ಬೆಲೆ ಇಂದು(ಶುಕ್ರವಾರ) 5,565 ರೂ. ಇದೆ. ಗುರುವಾರ ಈ ಬೆಲೆ 5525 ರೂ. ಇತ್ತು. ಅದೇ ರೀತಿ, 10 ಗ್ರಾಮ್ ದರ 55650 ರೂ. ಆಗಿದೆ. ಇನ್ನು 24 ಕ್ಯಾರಟ್ ಗೋಲ್ಡ್ ದರ ಶುಕ್ರವಾರ 10 ಗ್ರಾಮ್‌ಗೆ 60,730 ರೂ. ಇದೆ. ಗುರುವಾರ ಈ ದರ 60,270 ರೂ. ಇತ್ತು. ಅಂದರೆ, 460 ಏರಿಕೆಯಾಗಿದೆ(Gold Rate Today).
ಬೆಂಗಳೂರು ಸೇರಿದಂತೆ ದೇಶಾದ್ಯಂತ ಚಿನ್ನದ ದರ ಏರಿಕೆಯಾಗಿದೆ. ಈ ಮೂಲಕ ಸತತ ಎರಡು ವಾರಗಳಿಂದಲೂ ಏರಿಕೆಯ ಹಾದಿಯಲ್ಲಿದೆ. ಇದರ ಪರಿಣಾಮ ಬೆಳ್ಳಿಯ ದರವೂ ನಾಲ್ಕು ವಾರಗಳಲ್ಲಿ ಅತ್ಯಧಿಕವಾಗಿದೆ ಎನ್ನುತ್ತಿವ ಮಾರುಕಟ್ಟೆ ಮೂಲಗಳು. ಭಾರತದ ರೂಪಾಯಿ ಎದುರು ತುಸು ಡಾಲರ್ ಮೌಲ್ಯ ಇಳಿಕೆಯಾಗಿದ್ದೇ ತಡ ಚಿನ್ನದ ದರ ಕೂಡ ಏರಿಕೆಯಾಗಲು ಕಾರಣವಾಗಿದೆ.
ಆದರೆ, ಜಾಗತಿಕವಾಗಿ ಶುಕ್ರವಾರ ಈ ಹಳದಿ ಲೋಹದ ಬೆಲೆ ತುಸು ತಗ್ಗಿದೆ. ಗುರುವಾರ ಶೇ.1ರಷ್ಟು ಏರಿಕೆಯಾಗಿದ್ದ ದರವೂ ಅಷ್ಟೇ ತಗ್ಗಿದೆ. ಅಮೆರಿಕವು ಬಡ್ಡಿದರವನ್ನು ಹೆಚ್ಚಿಸುವುದರ ಹಿನ್ನೆಲೆಯಲ್ಲಿ ಈ ಏರಿಕೆ ತಗ್ಗಬಹುದು ಎಂದೂ ಹೇಳಲಾಗುತ್ತಿದೆ.
ಜ್ಯುವೆಲ್ಲರಿ ರಫ್ತು: ಭಾರತದಿಂದ ಇತ್ತೀಚಿನ ವರ್ಷಗಳಲ್ಲಿ ಜ್ಯುವೆಲ್ಲರಿ ರಫ್ತು ಕೂಡ ಗಣನೀಯ ಏರಿಕೆಯಾಗುತ್ತಿದೆ. 2015ರಲ್ಲಿ 7.6 ಶತಕೋಟಿ ಡಾಲರ್‌ನಷ್ಟಿದ್ದ ಜ್ಯುವೆಲ್ಲರಿ ರಫ್ತು 2020ರಲ್ಲಿ ಕೋವಿಡ್-19 ಬರುವುದಕ್ಕೆ ಮುನ್ನ ೧೨.೪ ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತು. ಭಾರತೀಯ ಜ್ಯುವೆಲ್ಲರಿಗಳನ್ನು ಹೊಸ ಮಾರುಕಟ್ಟೆಗೆ ರಫ್ತು ಮಾಡಬೇಕಾದ ಅಗತ್ಯವೂ ಇದೆ. ಈಗ ಜ್ಯುವೆಲ್ಲರಿ ರಫ್ತಿನ 90% ಪಾಲು ಕೂಡ ಕೇವಲ ಐದು ದೇಶಗಳಿಗೆ ಹೋಗುತ್ತಿದೆ.
ಇದನ್ನೂ ಓದಿ: Gold rate : ಚಿನ್ನದ ದರದಲ್ಲಿ 170 ರೂ. ಇಳಿಕೆ, ಬೆಳ್ಳಿ 1,000 ರೂ. ಏರಿಕೆ, ಪ್ರಮುಖ ನಗರಗಳಲ್ಲಿ ಇಂದಿನ ದರದ ಡಿಟೇಲ್ಸ್