ಅಮೆರಿಕದಲ್ಲಿ ಬ್ಯಾಂಕ್ ಅಕೌಂಟ್ಗಳ ಬಿಕ್ಕಟ್ಟು ಪ್ರಾರಂಭವಾದ ಬೆನ್ನಲ್ಲೇ, ಬಹು ಸರಕು ವಿನಿಮಯ ಕೇಂದ್ರ (MCX)ದಲ್ಲಿ ಚಿನ್ನದ ಬೆಲೆ ಶುಕ್ರವಾರ (ಮಾರ್ಚ್ 17) 10 ಗ್ರಾಂ ಗೆ 59,420 ರೂಪಾಯಿಗೆ ತಲುಪಿತ್ತು. ಇದು ಈವರೆಗಿನ ಗರಿಷ್ಠ ಮಟ್ಟದ ಬೆಲೆ (Gold Rate Today)ಎಂದು ಹೇಳಲಾಗಿದೆ. ಗುರುವಾರದ ದಿನದ ಅಂತ್ಯಕ್ಕೆ ಚಿನ್ನದ ಬೆಲೆ 10 ಗ್ರಾಂ.ಗೆ 58,847 ರೂಪಾಯಿ ಇದ್ದಿದ್ದು, ಶುಕ್ರವಾರ ಬೆಳಗ್ಗೆ ಆರಂಭಿಕ ವಹಿವಾಟಿನಲ್ಲೇ 1414 ರೂಪಾಯಿ ಏರಿಕೆಯಾಗಿ, 59,420ಕ್ಕೆ ತಲುಪಿತು. ಕಳೆದ ವಾರದ ಅಂತ್ಯದಲ್ಲಿ 10 ಗ್ರಾಂ ಚಿನ್ನದ ಬೆಲೆ 56,130 ರೂಪಾಯಿ ಇದ್ದಿದ್ದು, ಶೇ.5.86ರಷ್ಟು ಹೆಚ್ಚಳವಾಗಿ, ಈ ಸಲದ ವಾರಾಂತ್ಯಕ್ಕೆ ಬಂಗಾರದ ಬೆಲೆ 59 ಸಾವಿರದ ಗಡಿ ದಾಟಿದ್ದು, ಸೋಮವಾರದ ಪ್ರಾರಂಭದಲ್ಲಿ 60 ಸಾವಿರ ರೂಪಾಯಿ ತಲುಪುವ ಸಾಧ್ಯತೆ ದಟ್ಟವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ಗೆ 1,988.50 ಡಾಲರ್ ಇದ್ದು, ವಹಿವಾಟು ಕೊನೆಗೊಂಡಿತು. ಕಳೆದ ವಾರದ ಅಂತ್ಯದಲ್ಲಿ ಚಿನ್ನ ಪ್ರತಿ ಔನ್ಸ್ಗೆ 1,867 ಡಾಲರ್ ಇತ್ತು. ಅದು ಶೇ.6.48ರಷ್ಟು ಹೆಚ್ಚಳವಾಗಿದೆ.
ಮಾರುಕಟ್ಟೆ ತಜ್ಞರ ಪ್ರಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ಗೆ 2000 ಡಾಲರ್ ತಲುಪಲಿದೆ. ಹಾಗೇ, ಬಹು ಸರಕು ವಿನಿಮಯ ಕೇಂದ್ರದಲ್ಲಿ ಈಗಾಗಲೇ 59 ಸಾವಿರ ರೂಪಾಯಿ ತಲುಪಿರುವ ಬಂಗಾರದ ಬೆಲೆ 60 ಸಾವಿರಕ್ಕೇರಲು ಸಿದ್ಧವಾಗಿದೆ. ಇದು ಚಿನ್ನಪ್ರಿಯರಿಗೆ ಬೇಸರದ ಸಂಗತಿಯಾಗಿದೆ.
ಬಂಗಾರದ ಬೆಲೆ ಏರಿಕೆ ಬಗ್ಗೆ ಮಾರುಕಟ್ಟೆ ತಜ್ಞರಾದ ಸುಗಂಧಾ ಸಚ್ದೇವಾ ಪ್ರತಿಕ್ರಿಯೆ ನೀಡಿ ‘ಯುಎಸ್ನಲ್ಲಿ ಬ್ಯಾಂಕ್ಗಳು ದಿವಾಳಿಯಾಗುತ್ತಿವೆ. ಅದರ ಮಧ್ಯೆ ಸ್ವಿಸ್ ಬ್ಯಾಂಕಿಂಗ್ ದೈತ್ಯ ಕ್ರೆಡಿಟ್ ಸ್ವಿಸ್ನ ಷೇರುಗಳು ನಷ್ಟದಲ್ಲಿವೆ. ಹೀಗಾಗಿ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯನ್ನು ಹೆಚ್ಚಿಸುತ್ತಿದ್ದಾರೆ. ಇದೇ ಕಾರಣಕ್ಕೆ ಚಿನ್ನದ ಬೆಲೆ ಒಂದೇ ಸಮನೆ ಏರಿಕೆಯಾಗುತ್ತಿದೆ’ ಎಂದು ವಿವರಿಸಿದ್ದಾರೆ.
ಬೆಳ್ಳಿ ಬೆಲೆಯೂ ಏರಿಕೆ
ಚಿನ್ನವಷ್ಟೇ ಅಲ್ಲ, ಬುಲಿಯನ್ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಯೂ ಒಂದೇ ಸಮನೆ ಏರಿಕೆಯಾಗುತ್ತಿದೆ. ಇಂದು (ಮಾರ್ಚ್ 18) ಒಂದು ಕೆಜಿ ಚಿನ್ನದ ಬೆಲೆ 68,000 ರೂಪಾಯಿ ಇದೆ. ಮಾರ್ಚ್ 17ರಂದು ಕೆಜಿಗೆ 67,500 ರೂಪಾಯಿ ಇದ್ದಿದ್ದು, ಒಂದು ದಿನದಲ್ಲಿ 500 ರೂಪಾಯಿ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಎಷ್ಟಿದೆ ಇಂದು ಚಿನ್ನ-ಬೆಳ್ಳಿ ದರ?
ಯುಗಾದಿ ಹಬ್ಬ ಸಮೀಪಿಸುತ್ತಿರುವುದರಿಂದ ಚಿನ್ನ-ಬೆಳ್ಳಿ ಖರೀದಿಯೂ ಹೆಚ್ಚುತ್ತದೆ. ಆದರೆ ಇದೇ ಸಮಯಕ್ಕೆ ಸರಿಯಾಗಿ ಎರಡೂ ಲೋಹಗಳ ಬೆಲೆ ಭರ್ಜರಿ ಏರಿಕೆಯಾಗಿದೆ. ರಾಜ್ಯರಾಜಧಾನಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಈಗಾಗಲೇ 10 ಗ್ರಾಂ.ಗೆ 60 ಸಾವಿರ ದಾಟಿದೆ.
ಇಲ್ಲಿದೆ ನೋಡಿ ಬೆಂಗಳೂರಿನ ಇಂದಿನ ಚಿನ್ನದ ದರ..
22 ಕ್ಯಾರೆಟ್ ಚಿನ್ನ:
1 ಗ್ರಾಂ- 5,535 ರೂಪಾಯಿ (ಮಾ.17ರಂದು 5385 ರೂ. ಇತ್ತು)
8 ಗ್ರಾಂ- 44,280 ರೂ. (ನಿನ್ನೆ ಬೆಲೆ-43080 ರೂ.)
10 ಗ್ರಾಂ- 55,350 ರೂ. (ಮಾ.17ರಂದು 53,850 ರೂ.)
100 ಗ್ರಾಂ- 5,53,500 ರೂ.( ಮಾ.17ರಂದು ₹5,38,500)
24 ಕ್ಯಾರೆಟ್ ಚಿನ್ನ
1 ಗ್ರಾಂ- 6,037 ರೂ. (ಮಾ.17ರಂದು 5,874 ರೂ.)
8 ಗ್ರಾಂ- 48,286 ರೂ. (ನಿನ್ನೆ 46,992 ರೂ.)
10 ಗ್ರಾಂ-60,370 ರೂ. (ಮಾ.17ರಂದು 58,740 ರೂ.ಇತ್ತು)
100 ಗ್ರಾಂ-6,03,700 ರೂ. (ನಿನ್ನೆ 5,87,400 ರೂಪಾಯಿ ಇತ್ತು)
ಬೆಂಗಳೂರಿನಲ್ಲಿ ಬೆಳ್ಳಿ ದರ
1 ಗ್ರಾಂ-74.40 ರೂ. (ಮಾ.17ರಂದು 73.10 ರೂ.ಇತ್ತು)
8 ಗ್ರಾಂ- 595.20 ರೂ. (ನಿನ್ನೆ 584.80 ರೂ.)
10 ಗ್ರಾಂ-744 ರೂ. (ಮಾ.17ರಂದು 731 ರೂ.ಇತ್ತು)
100 ಗ್ರಾಂ- 7440 ರೂ. (ನಿನ್ನೆ 7310 ರೂ.)
ಇದನ್ನೂ ಓದಿ: Gold price today : ಬಂಗಾರದ ದರದಲ್ಲಿ 430 ರೂ. ಇಳಿಕೆ, ಖರೀದಿಸುವವರು ಗಮನಿಸಿ