ನವದೆಹಲಿ: ದಸರಾ ಹಬ್ಬಕ್ಕೆ (Dasara Bonus) ರೈಲ್ವೆ ಇಲಾಖೆ ನೌಕರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸುಮಾರು ೧೧ ಲಕ್ಷ ನಾನ್ ಗೆಜೆಟೆಡ್ ನೌಕರರಿಗೆ (ಸಿ ಹಾಗೂ ಡಿ ದರ್ಜೆಯ ನೌಕರರು) ಕೇಂದ್ರದ ನಿರ್ಧಾರದಿಂದ ಬೋನಸ್ ಸಿಗಲಿದೆ. ಇದಕ್ಕೆ ಕೇಂದ್ರ ಸರ್ಕಾರವು ೧,೯೮೫ ಕೋಟಿ ರೂ. ವ್ಯಯಿಸಲಿದೆ. ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ.
ನೌಕರರ ಕಾರ್ಯಕ್ಷಮತೆ ಆಧರಿಸಿ ೭೮ ದಿನಗಳ ಸಂಬಳವನ್ನು ಬೋನಸ್ ಆಗಿ ನೀಡಲಾಗುತ್ತದೆ. ರೈಲ್ವೆ ಇಲಾಖೆ ನಿಯಮದ ಪ್ರಕಾರ ಒಬ್ಬ ನೌಕರನಿಗೆ ತಿಂಗಳಿಗೆ ೭ ಸಾವಿರ ರೂ. ಬೋನಸ್ ಸಿಗಲಿದೆ. ಅಲ್ಲಿಗೆ, ೭೮ ದಿನಗಳಿಗೆ ಅಂದರೆ, ಕಾರ್ಯಕ್ಷಮತೆ ಆಧಾರದ ಮೇಲೆ ಗರಿಷ್ಠ ೧೭,೯೫೧ ರೂ.ವರೆಗೆ ನೌಕರರು ಬೋನಸ್ ಪಡೆಯಬಹುದಾಗಿದೆ. ಒಟ್ಟು ೧೧.೫೬ ಲಕ್ಷ ನೌಕರರು ಬೋನಸ್ ಪಡೆಯಲಿದ್ದಾರೆ.
ಇದನ್ನೂ ಓದಿ | ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ 4% ಏರಿಕೆ, ಮೋದಿ ಸಂಪುಟ ನಿರ್ಣಯ