Site icon Vistara News

Republic Day 2023: ಅಹಮದಾಬಾದ್ ಕಲಾವಿದನ ಕಾಗದದ ಕಲಾಕೃತಿ ಗೂಗಲ್‌ ಪುಟದಲ್ಲಿ ಡೂಡಲ್!

Google celebrates Republic Day 2023 with doodle by Ahmedabad-based artist

ನವದೆಹಲಿ: ಅಹಮದಾಬಾದ್ ಮೂಲದ ಕಲಾವಿದ ಪಾರ್ಥ ಕೋಟೆಕರ್ ವಿನ್ಯಾಸ ಮಾಡಿರುವ ಡೂಡಲ್‌ ಅನ್ನು ತನ್ನ ಹೋಮ್‌ಪೇಜ್‌ನಲ್ಲಿ ಪ್ರದರ್ಶಿಸುವ ಮೂಲಕ ಗೂಗಲ್, 74ನೇ ಗಣರಾಜ್ಯೋತ್ಸವನ್ನು (Republic Day 2023) ಆಚರಿಸಿದೆ. ಈ ಡೂಡಲ್ ಕೈಯಿಂದ ಕತ್ತರಿಸಿದ ಸಂಕೀರ್ಣವಾಗಿರುವ ಕಾಗದ ಕಲಾಕೃತಿಯಾಗಿದ್ದು, ಹಿನ್ನೆಲೆಯಲ್ಲಿ ಭವ್ಯವಾದ ರಾಷ್ಟ್ರಪತಿ ಭವವನ್ನು ಚಿತ್ರಿಸಲಾಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಂಡಿದೆ.

ಸಂಕೀರ್ಣವಾಗಿರುವ ಈ ಕಾಗದದ ಡೂಡಲ್‌ನಲ್ಲಿ ರಾಷ್ಟ್ರಪತಿ ಭವನ ಮಾತ್ರವಲ್ಲದೇ, ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್‌ನ ಅನೇಕ ಸಂಗತಿಗಳನ್ನು ಪ್ರದರ್ಶಿಸುವ ಪ್ರಯತ್ನ ಮಾಡಲಾಗಿದೆ. ಐಕಾನಿಕ್ ಎನಿಸಿರುವ ಇಂಡಿಯಾ ಗೇಟ್, ಸಿಆರ್‌ಪಿಎಫ್ ಯೋಧರ ಪರೇಡ್ ಮತ್ತು ಮೋಟಾರ್‌ಸೈಕಲ್ ರೈಡರ್ಸ್‌ ಕವಾಯತು ಇರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ : Republic Day 2023 : ಗಣರಾಜ್ಯೋತ್ಸವ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಗೂಗಲ್‌ ಡೂಡಲ್‌ಗೆ ನನ್ನ ಚಿತ್ರ ಆಯ್ಕೆಯಾಗಿದ್ದು ನಾನು ನಂಬುವುದಕ್ಕೆ ಆಗಲಿಲ್ಲ. ಹಾಗಾಗಿ, ಇಮೇಲ್ ಅನ್ನು ಹಲವು ಬಾರಿ ಓದಿದ್ದೇನೆ. ಪುನಃ ಪುನಃ ಓದಿದ್ದೇನೆ. ಇಂಥ ಅವಕಾಶ ಸಿಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಭಾರತದ ವೈವಿಧ್ಯತೆಯನ್ನು ಒಂದೇ ಕಲಾಕೃತಿಯಲ್ಲಿ ಪ್ರಸ್ತುತಪಡಿಸಲು ಮುಂದಾದೆ ಎಂದು ಪಾರ್ಥ ಕೋಟೆಕರ್ ಅವರು ಹೇಳಿದ್ದಾರೆ.

Exit mobile version