Site icon Vistara News

Naxalism Free Country | 2024ರ ವೇಳೆಗೆ ದೇಶ ನಕ್ಸಲ್‌ಮುಕ್ತ, ಅಮಿತ್‌ ಶಾ ಶಪಥ

Amit Shah Naxal Free

ರಾಯ್‌ಪುರ: ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಸನ್ನದ್ಧವಾಗುತ್ತಿದೆ. ಇದೇ ಕಾರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹಲವು ಘೋಷಣೆ ಮಾಡುತ್ತಿದ್ದಾರೆ. 2024ರ ಜನವರಿಯಲ್ಲಿ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಘೋಷಿಸಿದ ಬೆನ್ನಲ್ಲೇ, “ದೇಶದಲ್ಲಿ 2024ರೊಳಗೆ ಮಾವೋವಾದವನ್ನು ನಿರ್ನಾಮ (Naxalism Free Country) ಮಾಡುವ ದಿಸೆಯಲ್ಲಿ ಯತ್ನಿಸಲಾಗುವುದು” ಎಂದು ಹೇಳಿದ್ದಾರೆ.

ಛತ್ತೀಸ್‌ಗಢದ ಕೊರ್ಬಾ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಅವರು, “ಕಳೆದ ಒಂದು ದಶಕದಲ್ಲಿ ದೇಶಾದ್ಯಂತ ಮಾವೋವಾದದ ತೀವ್ರತೆ ಗಣನೀಯವಾಗಿ ಕುಂಠಿತವಾಗಿದೆ. 2024ರ ಲೋಕಸಭೆ ಚುನಾವಣೆಗೆ ಮೊದಲು ದೇಶವನ್ನು ನಕ್ಸಲ್‌ಮುಕ್ತಗೊಳಿಸುವುದು ಗುರಿಯಾಗಿದೆ” ಎಂದು ತಿಳಿಸಿದರು.

“2009ರಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶದಲ್ಲಿ 2,258 ನಕ್ಸಲ್‌ ದಾಳಿಗಳು ನಡೆದಿದ್ದವು. 2021ರಲ್ಲಿ ಇವುಗಳ ಸಂಖ್ಯೆ 509ಕ್ಕೆ ಇಳಿಕೆಯಾಗಿದೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಮೋದಿ ಸರ್ಕಾರವು ಯುವಕರಿಗೆ ಉದ್ಯೋಗ ನೀಡುವುದು, ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಮುಂದಿನ ದಿನಗಳಲ್ಲಿ ಮಾವೋವಾದವನ್ನು ನಿರ್ಮೂಲನೆ ಮಾಡುವುದು ಗುರಿಯಾಗಿದೆ” ಎಂದರು.

ಇದನ್ನೂ ಓದಿ | Ram Mandir | 2024ರ ಜನವರಿಯಲ್ಲಿ ಭಕ್ತರಿಗೆ ರಾಮಮಂದಿರ ಮುಕ್ತ, ಅಮಿತ್‌ ಶಾ ಮಹತ್ವದ ಘೋಷಣೆ

Exit mobile version