Site icon Vistara News

Supreme Court: ಚರಂಡಿ ಸ್ವಚ್ಛಗೊಳಿಸುವಾಗ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ; ಸುಪ್ರೀಂ ಆದೇಶ!

Supreme Court On Cleaning Sewers

Government to pay Rs 30 lakh compensation to families of those who die while cleaning sewers: Supreme Court

ನವದೆಹಲಿ: ದೇಶಾದ್ಯಂತ ಒಳಚರಂಡಿ ಸ್ವಚ್ಛಗೊಳಿಸುವ ಕಾರ್ಮಿಕರು ನಿತ್ಯವೂ ಅಪಾಯದಲ್ಲಿಯೇ ಕಾರ್ಯನಿರ್ವಹಿಸುತ್ತಾರೆ. ಚರಂಡಿ ಸ್ವಚ್ಛಗೊಳಿಸುವ ವೇಳೆ ಬಿದ್ದು ಮೃತಪಟ್ಟವರು, ಗಾಯಗೊಂಡವರು, ಶಾಶ್ವತವಾಗಿ ವಿಶೇಷ ಚೇತನರಾದವರು ಇದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್‌ (Supreme Court), “ಒಳಚರಂಡಿ ಸ್ವಚ್ಛಗೊಳಿಸುವ ವೇಳೆ ಮೃತಪಟ್ಟರೆ, ಅವರ (Sewer Cleaners) ಕುಟುಂಬಸ್ಥರಿಗೆ 30 ಲಕ್ಷ ರೂ. ಪರಿಹಾರ (Compensation) ನೀಡಬೇಕು” ಎಂದು ಆದೇಶಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಹಲವು ಮಹತ್ವದ ಆದೇಶ ಹೊರಡಿಸಿದೆ. “ಒಳಚರಂಡಿ ಸ್ವಚ್ಛಗೊಳಿಸುವ ವೇಳೆ ಕಾರ್ಮಿಕ ಮೃತಪಟ್ಟರೆ ಅವರ ಕುಟುಂಬಸ್ಥರಿಗೆ 30 ಲಕ್ಷ ರೂ. ಪರಿಹಾರ ನೀಡಬೇಕು. ಹಾಗೊಂದು ವೇಳೆ, ಶಾಶ್ವತವಾಗಿ ಅಂಗವೈಕಲ್ಯ ಅನುಭವಿಸಿದರೆ ಅವರಿಗೆ 20 ಲಕ್ಷ ರೂ. ಹಾಗೂ ತಾತ್ಕಾಲಿಕವಾಗಿ ಅಂಗವೈಕಲ್ಯ ಅನುಭವಿಸಿದರೆ ಅವರಿಗೆ 10 ಲಕ್ಷ ರೂಪಾಯಿಯನ್ನು ಆಯಾ ಸರ್ಕಾರವು ಪರಿಹಾರ ನೀಡಬೇಕು” ಎಂದು ತೀರ್ಪು ನೀಡಿದೆ.

Supreme Court

ಮಲಹೊರುವ ಪದ್ಧತಿ ನಿರ್ಮೂಲನೆ ಆಗಲಿ

ದೇಶದಲ್ಲಿ ಮಲ ಹೊರುವ ಪದ್ಧತಿ ಕುರಿತು ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. “ದೇಶಾದ್ಯಂತ ಮಲಹೊರುವ ಪದ್ಧತಿ (Manual Scavenging) ನಿರ್ಮೂಲನೆಯಾಗಿರುವ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೃಢಪಡಿಸಿಕೊಳ್ಳಬೇಕು” ಎಂದು ಕೂಡ ಆದೇಶಿಸಿದೆ. ಪ್ರತಿಯೊಂದು ಪ್ರದೇಶದಲ್ಲಿ ಒಳಚರಂಡಿ ಸ್ವಚ್ಛಗೊಳಿಸುವವರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಸಾವು-ನೋವು ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್‌ ಸೂಚಿಸಿದೆ.

ಇದನ್ನೂ ಓದಿ: ಅರ್ಧ ಗಂಟೆ ಅಕ್ರಮ ಸೆರೆಯಾಗಿದ್ದ ವ್ಯಕ್ತಿಗೆ ಪೊಲೀಸರಿಂದಲೇ 50 ಸಾವಿರ ರೂ. ಪರಿಹಾರ ಒದಗಿಸಿದ ದಿಲ್ಲಿ ಹೈಕೋರ್ಟ್!

ಪಿಐಎಲ್‌, ಒಳಚರಂಡಿ ಸ್ವಚ್ಛಗೊಳಿಸುವವರ ಹಕ್ಕುಗಳ ರಕ್ಷಣೆ ಸೇರಿ ಹಲವು ವಿಷಯಗಳ ಕುರಿತು 2024ರ ಫೆಬ್ರವರಿ 1 ರಂದು ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್‌ ತಿಳಿಸಿದೆ. ದೇಶದಲ್ಲಿ ಒಳಚರಂಡಿ ಸ್ವಚ್ಛಗೊಳಿಸುವ ಕಾರ್ಮಿಕರ ಸಾವು ಹಾಗೂ ಮಲಹೊರುವ ಪದ್ಧತಿಯು ಗಂಭೀರ ಸಮಸ್ಯೆಯಾಗಿದೆ. ಕಳೆದ 30 ವರ್ಷದಲ್ಲಿ ದೇಶಾದ್ಯಂತ 1,035 ಜನ ಒಳಚರಂಡಿ ಸ್ವಚ್ಛಗೊಳಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರವೇ ಸಂಸತ್ತಿಗೆ ಮಾಹಿತಿ ನೀಡಿದೆ.

Exit mobile version