ನವದೆಹಲಿ: ದೇಶದಲ್ಲಿ ಕೊರೊನಾ ಭೀತಿ ಮತ್ತೆ ಹೆಚ್ಚಾಗಿದೆ. ಸೋಂಕು ಎದುರಿಸುವಲ್ಲಿ ಔಷಧ, ಔಷಧ ಕಂಪನಿಗಳ ಪಾತ್ರ ಹೆಚ್ಚಿದೆ. ಪರಿಸ್ಥಿತಿ ಹೀಗಿರುವಾಗಲೇ ಅವ್ಯವಹಾರ, ಅಕ್ರಮ ಎಸಗುವ ಕಂಪನಿಗಳ ಮೇಲೆ ಕೇಂದ್ರ ಸರ್ಕಾರವು ಸರ್ಜಿಕಲ್ ಸ್ಟ್ರೈಕ್ (Strike On Pharma Firms) ಕೈಗೊಂಡಿದೆ.
ಔಷಧ ಕಂಪನಿಗಳ ಅಕ್ರಮ ತಡೆಯಲು ಕೇಂದ್ರ ಸರ್ಕಾರವು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ನೇತೃತ್ವದಲ್ಲಿ ಇಬ್ಬರು ಜಂಟಿ ಕಂಟ್ರೋಲರ್‌ಗಳನ್ನು ಒಳಗೊಂಡ ಸಮಿತಿ ರಚಿಸಿದೆ. ಸಮಿತಿಯು ದೇಶದ ಔಷಧೀಯ ಕಂಪನಿಗಳ ಅಕ್ರಮ, ಅವ್ಯವಹಾರ, ಔಷಧಗಳ ಗುಣಮಟ್ಟದ ಕುರಿತು ವರದಿ ತಯಾರಿಸುವುದು, ಕಂಪನಿಗಳ ಮೇಲೆ ದಾಳಿ ನಡೆಸುವುದು ಸೇರಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಲಿದೆ.
ಕಾರ್ಯಾಚರಣೆ ಆರಂಭ
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯು ಈಗಾಗಲೇ ಹಿಮಾಚಲ ಪ್ರದೇಶ ಸೇರಿ ಹಲವೆಡೆ ಕಾರ್ಯಾಚರಣೆ ನಡೆಸಿದೆ. ಔಷಧ ಕಂಪನಿಗಳ ಮೇಲೆ ದಾಳಿಯನ್ನೂ ನಡೆಸಲಾಗಿದೆ. ದಾಳಿ ವೇಳೆ, ಟ್ರೇಡ್‌ಮಾರ್ಕ್‌ಗಳ ಉಲ್ಲಂಘನೆ, ನಕಲಿ ಔಷಧಗಳ ಉತ್ಪಾದನೆ, ಬಿಲ್ ಇಲ್ಲದೆ ಔಷಧಿ ಮಾರಾಟ, ಗುಣಮಟ್ಟ ಕೊರತೆ ಸೇರಿ ಹಲವು ಅಂಶಗಳು ಬೆಳಕಿಗೆ ಬಂದಿದ್ದು, ಹೆಚ್ಚಿನ ಕ್ರಮಕ್ಕೂ ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಬ್ಲ್ಯಾಕ್ ಲಿಸ್ಟ್‌ಗೆ ಸೇರಿರುವ ಕಂಪನಿಗಳಿಗೆ ಔಷಧ ಪೂರೈಕೆ ಆರೋಪ