Site icon Vistara News

45 Videos Blocked | ಅಗ್ನಿಪಥ ಕುರಿತು ಸುಳ್ಳು ಮಾಹಿತಿ, ಯುಟ್ಯೂಬ್‌ನ 45 ವಿಡಿಯೊ ಬ್ಲಾಕ್‌ ಮಾಡಿದ ಕೇಂದ್ರ

Agnipath

ನವದೆಹಲಿ: ದೇಶದ ಭದ್ರತೆಗೆ ಧಕ್ಕೆ, ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು, ಭಾರತೀಯ ಸೇನೆ ಕುರಿತು ಸುಳ್ಳು ಮಾಹಿತಿ ಹರಡುವುದು ಸೇರಿ ಹಲವು ಅಂಶಗಳು ಇರುವ ಕಾರಣ ಕೇಂದ್ರ ಸರ್ಕಾರವು ೧೦ ಯುಟ್ಯೂಬ್‌ ಚಾನೆಲ್‌ಗಳ ೪೫ ವಿಡಿಯೊಗಳನ್ನು ಬ್ಲಾಕ್‌ (45 Videos Blocked) ಮಾಡಿದೆ. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಈ ಕುರಿತು ಆದೇಶ ಹೊರಡಿಸಿದೆ.

“ದೇಶದ ಸೌಹಾರ್ದತೆಗೆ ಭಂಗ ಉಂಟು ಮಾಡುವುದು, ಅಗ್ನಿಪಥ, ಸೈನಿಕರ ಕುರಿತು ಸುಳ್ಳು ಮಾಹಿತಿ ಪಸರಿಸುವುದು, ಭದ್ರತೆಗೆ ಧಕ್ಕೆ ತರುವ ಅಂಶಗಳನ್ನು ಹರಡುವುದು, ಕೋಮುಗಲಭೆಗೆ ಧಕ್ಕೆ ತರುವ ವಿಷಯಗಳು ಇರುವ ೪೫ ವಿಡಿಯೊಗಳನ್ನು ಬ್ಲಾಕ್‌ ಮಾಡಲಾಗಿದೆ” ಎಂದು ಕೇಂದ್ರ ಸರ್ಕಾರ ಸೋಮವಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

೧೦ ಚಾನೆಲ್‌ಗಳ ೪೫ ವಿಡಿಯೊಗಳನ್ನು ೧.೩ ಕೋಟಿ ಜನ ವೀಕ್ಷಿಸಿದ್ದಾರೆ. ಹಿಂಸೆಗೆ ಪ್ರಚೋದನೆ ಸೇರಿ ಹಲವು ಗಂಭೀರ ಅಂಶಗಳು ಇದ್ದ ಕಾರಣ ವಿಡಿಯೊಗಳನ್ನು ಬ್ಲಾಕ್‌ ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. “ಭಾರತ ವಿರೋಧಿ ಕೃತ್ಯಗಳನ್ನು ನಾವು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ದೇಶದ ಸಾಮರಸ್ಯ, ಸೌಹಾರ್ದತೆ, ಭದ್ರತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಬ್ಲಾಕ್‌ ಮಾಡಲಾಗಿದೆ” ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ. ಇದೇ ಕಾರಣಕ್ಕೆ ಈಗಾಗಲೇ ಹಲವು ಯುಟ್ಯೂಬ್‌ ಚಾನೆಲ್, ಆ್ಯಪ್‌ಗಳನ್ನು ನಿಷೇಧಿಸಿದೆ.

ಇದನ್ನೂ ಓದಿ | Loan Apps | ಸಾಲದ ಆ್ಯಪ್‌ಗಳಲ್ಲಿ ವಂಚನೆ ತಡೆಯಲು ಆರ್‌ಬಿಐನಿಂದ ಹೊಸ ನಿಯಮಾವಳಿ ಬಿಡುಗಡೆ

Exit mobile version