Site icon Vistara News

George Soros: ‘ಭಾರತದ ಪ್ರಜಾಪ್ರಭುತ್ವ ನಾಶಕ್ಕೆ ಯತ್ನ’, ಮೋದಿ ಕುರಿತು ಸೊರೊಸ್‌ ಹೇಳಿಕೆಗೆ ಸ್ಮೃತಿ ಇರಾನಿ ತಿರುಗೇಟು

George Soros

#image_title

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಅಕ್ರಮದ ಕುರಿತು ಹಿಂಡನ್‌ಬರ್ಗ್‌ ತನಿಖಾ ವರದಿ ಉಲ್ಲೇಖಿಸಿ ಜಾಗತಿಕ ಹೂಡಿಕೆದಾರ ಜಾರ್ಜ್‌ ಸೊರೊಸ್‌ (George Soros) ಅವರು ಭಾರತದ ಪ್ರಜಾಪ್ರಭುತ್ವದ ಕುರಿತು ಮಾತನಾಡಿರುವುದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ. “ಭಾರತದ ಪ್ರಜಾಪ್ರಭುತ್ವ ನಾಶಪಡಿಸಲು ಜಾಗತಿಕವಾಗಿ ಕುತಂತ್ರ ಮಾಡಲಾಗುತ್ತಿದೆ” ಎಂದು ಸಚಿವೆ ತಿರುಗೇಟು ನೀಡಿದ್ದಾರೆ.

“ಗೌತಮ್‌ ಅದಾನಿಯಂತಹ ಪ್ರಕರಣಗಳು ಭಾರತದಲ್ಲಿ ಪ್ರಜಾಪ್ರಭುತ್ವದ ಪುನರುಜ್ಜೀವನಕ್ಕೆ ಕಾರಣವಾಗುತ್ತಿವೆ. ಜಾಗತಿಕ ಹೂಡಿಕೆದಾರರು ಹಾಗೂ ಅದಾನಿ ಕುರಿತು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಉತ್ತರಿಸಬೇಕು” ಎಂದು ಜಾರ್ಜ್‌ ಸೊರೊಸ್‌ ಆಗ್ರಹಿಸಿದ್ದಾರೆ. ಇದಕ್ಕೆ ಸ್ಮೃತಿ ಇರಾನಿ ಸೇರಿ ಬಿಜೆಪಿಯ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಜಾರ್ಜ್‌ ಸೊರೊಸ್‌ ಅವರು ಇಂಗ್ಲೆಂಡ್‌ ಬ್ಯಾಂಕ್‌ಅನ್ನು ಇಬ್ಭಾಗಗೊಳಿಸಿದರು. ಈಗ ಭಾರತದ ಆಂತರಿಕ ವಿಷಯಗಳ ಕುರಿತು ಆರೋಪಿಸುವ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಭಾರತದ ಮೇಲೆ ದಾಳಿ ಮಾಡುತ್ತಿದ್ದಾರೆ. ಆದರೆ, ಭಾರತೀಯರಾದ ನಾವು ಇದಕ್ಕೆ ಸರಿಯಾಗಿ ಪ್ರತ್ಯುತ್ತರ ನೀಡಬೇಕು” ಎಂದು ಸುದ್ದಿಗೋಷ್ಠಿ ನಡೆಸಿ ಸ್ಮೃತಿ ಇರಾನಿ ಕರೆ ನೀಡಿದ್ದಾರೆ.

ವ್ಯಂಗ್ಯವಾಡಿದ ಮಹುವಾ ಮೊಯಿತ್ರಾ

ಸ್ಮೃತಿ ಇರಾನಿ ಸುದ್ದಿಗೋಷ್ಠಿ ಕುರಿತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವ್ಯಂಗ್ಯವಾಡಿದ್ದಾರೆ. “ನಾವೆಲ್ಲರೂ ಜಾರ್ಜ್‌ ಸೊರೊಸ್‌ ಹೇಳಿಕೆಯನ್ನು ಖಂಡಿಸಿ, ತಕ್ಕ ಪ್ರತ್ಯುತ್ತರ ನೀಡಬೇಕು” ಎಂಬುದಾಗಿ ಕರೆದಿದ್ದಾರೆ. ಹಾಗೆಯೇ, ಸಂಜೆ ೬ ಗಂಟೆಗೆ ಎಲ್ಲರೂ ತಟ್ಟೆ-ಜಾಗಟೆ ಬಾರಿಸಬೇಕು ಎಂಬುದಾಗಿ ಕಟಕಿಯಾಡಿದ್ದಾರೆ.

ಇದನ್ನೂ ಓದಿ: IT Survey at BBC Offices: 58 ಗಂಟೆ ಬಳಿಕ ಬಿಬಿಸಿ ಕಚೇರಿಗಳಲ್ಲಿ ‘ಸಮೀಕ್ಷೆ’ ನಿಲ್ಲಿಸಿದ ಐಟಿ, ಸಿಕ್ಕ ದಾಖಲೆ ಏನು?

Exit mobile version