ಬಾನ್, ಜರ್ಮನಿ: ಬೆಂಗಳೂರಿಗರಾದ (Bangalorean) ಮೂರು ಬಾರಿ ಗ್ರ್ಯಾಮಿ ಅವಾರ್ಡ್ (Grammy Award) ವಿಜೇತ, ಸಂಗೀತ ನಿರ್ದೇಶಕ (Music Director) ಡಾ. ರಿಕಿ ಕೇಜ್ (Ricky Kej) ಅವರನ್ನು ದಿ ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಟು ಕೊಂಬಾಟ್ ಡಿಸೆರ್ಟಿಫಿಕೇಷನ್ (UNCCD)ನ ಜಾಗತಿಕ ಸದ್ಭಾವನಾ ರಾಯಭಾರಿಯನ್ನಾಗಿ (Goodwill Ambassador) ನೇಮಕ ಮಾಡಲಾಗಿದೆ. ರಿಕಿ ಕೇಜ್ ಅವರು ನಟ ರಮೇಶ್ ಅರವಿಂದ್ ಅವರ ಆಕ್ಸಿಡೆಂಟ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಈ ಹಿಂದೆ ರಿಕಿ ಕೇಜ್ ಅವರು ಯುಎನ್‌ಸಿಸಿಡಿಯ ಭೂ ರಾಯಭಾರಿಯಾಗಿದ್ದರು. ಈ ಮೂಲಕ ಪ್ರಪಂಚದಾದ್ಯಂತದ ಅವರ ಅಭಿಮಾನಿಗಳೊಂದಿಗೆ ಭೂ ಅವನತಿ, ಮರುಭೂಮಿ ಮತ್ತು ಬರಗಾಲದ ಬಗ್ಗೆ ಜಾಗೃತಿ ಮೂಡಿಸಲು ಸಮಾವೇಶಕ್ಕೆ ಸಹಾಯ ಮಾಡಿದ್ದರು. ಈಗ ಹೊಸ ಜವಾಬ್ದಾರಿ ಮೂಲಕ ಅವರು ಗೌರವ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಾರೆ. ಯುವಜನರು, ಮಹಿಳೆಯರು, ಮಕ್ಕಳು ಮತ್ತು ಪೀಡಿತ ಸಮುದಾಯಗಳೊಂದಿಗೆ ಸಮಾವೇಶದ ಉದ್ದೇಶಗಳಿಗಾಗಿ ಜಾಗೃತಿ ಮೂಡಿಸುವಲ್ಲಿ ಮತ್ತು ಪ್ರತಿಪಾದಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದ್ದಾರೆ.
ಈ ಸುದ್ದಿಯನ್ನೂ ಓದಿ: Ricky Kej: ಗ್ರ್ಯಾಮಿ ಅವಾರ್ಡ್ ಪುರಸ್ಕೃತ ರಿಕ್ಕಿ ಕೇಜ್‌ಗೆ ಲೆನ್ಸ್‌ಕಾರ್ಟ್‌ನಿಂದ ಕಿರುಕುಳ! ಏನಿದು ಸಮಸ್ಯೆ?
ಜೂನ್ 16 ರಂದು ನ್ಯೂಯಾರ್ಕ್‌ನಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ ಉನ್ನತ ಮಟ್ಟದ ಕಾರ್ಯಕ್ರಮದೊಂದಿಗೆ ಮರುಭೂಮಿ ಮತ್ತು ಬರಗಾಲದ ದಿನವನ್ನು ಜಾಗತಿಕವಾಗಿ ಆಚರಿಸುವ ಎರಡು ವಾರಗಳ ಮೊದಲು ಈ ನೇಮಕವನ್ನು ಮಾಡಲಾಗಿದೆ. ರಿಕಿ ಕೇಜ್ ಅವರು,ಯುಎನ್‌ಸಿಸಿಡಿ ಸದ್ಭಾವನಾ ರಾಯಭಾರಿಗಳು, ಸಂಗೀತಗಾರರಾದ ಬಾಬಾ ಮಾಲ್ ಮತ್ತು ಇನ್ನಾ ಮೊಡ್ಜಾ ಅವರೊಂದಿಗೆ ಪ್ರದರ್ಶನ ನೀಡಲಿದ್ದಾರೆ. ಈ ವರ್ಷದ ಮರುಭೂಮಿ ಮತ್ತು ಬರಗಾಲದ ದಿನವು “ಅವಳ ಭೂಮಿ” ಎಂಬ ಘೋಷಣೆಯಡಿಯಲ್ಲಿ ಮಹಿಳೆಯರ ಭೂಮಿಯ ಹಕ್ಕುಗಳ ಮೇಲೆ ಜಾಗತಿಕ ಗಮನವನ್ನು ನೀಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೇಶದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.