Site icon Vistara News

ಭಕ್ತರಿಗಾಗಿ ಕೇದಾರನಾಥ ದೇಗುಲದ ಅದ್ಧೂರಿ ಉದ್ಘಾಟನೆ

ಉತ್ತರಾಖಂಡದ ಪ್ರಸಿದ್ಧ ಕೇದಾರನಾಥ ದೇಗುಲವು ಶುಕ್ರವಾರ ಬೆಳಗ್ಗೆ ಭಕ್ತರಿಗಾಗಿ ಅದ್ಧೂರಿ ಉದ್ಘಾಟನೆ ಆಯಿತು.

ದೇಗುಲವನ್ನು ಪ್ರವೇಶಿಸಲು ಅಪಾರ ಸಂಖ್ಯೆಯ ಜನರು ಕಾಯುತ್ತಿದ್ದರು. ಮುಖ್ಯಮಂತ್ರಿ ಪುಷ್ಕರ್ ಧಾಮಿ ಕೂಡ ಮುಂಜಾನೆ ಪ್ರಾರ್ಥನೆ ಸಲ್ಲಿಸಿದರು. ಸುಮಾರು ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೋವಿಡ್ ತಡೆಗಳಿಲ್ಲದೆ ಭಕ್ತರು ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಯಿತು.

ದೇವಾಲಯವನ್ನು 15 ಕ್ವಿಂಟಾಲ್ ಹೂವುಗಳಿಂದ ಅಲಂಕರಿಸಲಾಗಿತ್ತು

ಮುಂಜಾನೆ 6.15 ಗಂಟೆಗೆ ದೇವಾಲಯವನ್ನು ಉದ್ಘಾಟಿಸಲಾಯಿತು. ಉದ್ಘಾಟನಾ ಸಮಾರಂಭಕ್ಕೆ ಭಕ್ತರಿಗೆ ಪ್ರವೇಶವಿರಲಿಲ್ಲ. ಆದರೆ ಬದಲಾಗಿ ಆನ್‌ಲೈನ್‌ ಆನ್‌ಲೈ ಮೂಲಕ ದರ್ಶನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.

ಸಮುದ್ರ ಮಟ್ಟಕ್ಕಿಂತ 10 ಸಾವಿರದ 279 ಅಡಿ ಎತ್ತರದಲ್ಲಿರುವ ಕೇದಾರನಾಥ ದೇವಾಲಯ ವರ್ಷದಲ್ಲಿ ಆರು ತಿಂಗಳು ಮಾತ್ರ ತೆರೆದಿರುತ್ತಿತು ಆದರೆ ಈಗ ಬಾಗಿಲು ಮೇ 8 ರಂದು ತೆರೆಯುತ್ತದೆ.

ಇದನ್ನೂ ಓದಿ | Explainer: ಭಾರತೀಯರ ಫೇವರಿಟ್‌ ಆಗುವತ್ತ ಯುಎಇ, ಏನಿದರ ವಿಶೇಷ?

Exit mobile version