ಶ್ರೀನಗರ: ಜಮ್ಮು-ಕಾಶ್ಮೀರದ ಕುಲಗಾಂವ್ ಜಿಲ್ಲೆಯಲ್ಲಿ ಇಂದು ಗ್ರೆನೇಡ್ ದಾಳಿಯಾಗಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಕುಲಗಾಂವ್ನ ಖೈಮೋಹ್ ಎಂಬಲ್ಲಿ ಈ ದಾಳಿಯಾಗಿದ್ದು, ಪೂಂಚ್ ಜಿಲ್ಲೆಯ ಮೇಂಧಾರ್ನ ಪೊಲೀಸ್ ಸಿಬ್ಬಂದಿ ತಾಹೀರ್ ಖಾನ್ ಅವರು ಗಂಭೀರ ಗಾಯಗೊಂಡಿದ್ದರು. ಅವರನ್ನು ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಬದುಕುಳಿಯಲಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಶ್ಮೀರ ಪೊಲೀಸ್ ವಲಯ ಅಧಿಕೃತವಾಗಿ ಟ್ವೀಟ್ ಮಾಡಿದ್ದು, ‘ಖೈಮೋಹ್ನಲ್ಲಿ ಶನಿವಾರ ರಾತ್ರಿ ಗ್ರೆನೇಡ್ ದಾಳಿಯಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಜಿಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸಲಿಲ್ಲ’ ಎಂದು ಹೇಳಿದೆ.
ರಾಜೌರಿ ಜಿಲ್ಲೆಯ ಸೇನಾ ನೆಲೆಯಲ್ಲಿ ಇಬ್ಬರು ಉಗ್ರರು ನಾಲ್ವರು ಯೋಧರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಈ ಗ್ರೆನೇಡ್ ದಾಳಿ ನಡೆಸಲಾಗಿದೆ. ರಾಜೌರಿಯಲ್ಲಿ ಯೋಧರನ್ನು ಹತ್ಯೆ ಮಾಡಿದವರು ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರರಾಗಿದ್ದು, ಇಬ್ಬರನ್ನೂ ಕೊಲ್ಲಲಾಗಿದೆ. ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಏರಿಯಲ್ ಕಣ್ಗಾವಲು ಇಡಲಾಗಿದೆ. ಅದರಲ್ಲೂ ಲಾಲ್ಚೌಕ್ ಸೇರಿ, ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲೂ ಹೆಚ್ಚಿನ ಭದ್ರತೆ ವಹಿಸಲಾಗಿದೆ.
ಇದನ್ನೂ ಓದಿ: Har Ghar Tiranga | ಕಾಶ್ಮಿರದಲ್ಲಿ ಲಷ್ಕರೆ ತೊಯ್ಬಾ ಉಗ್ರನ ಮನೆ ಮೇಲೆ ಹಾರಾಡಿತು ರಾಷ್ಟ್ರಧ್ವಜ