ಜಿ 20 ಸಭೆಯಲ್ಲಿ ಇತರ ದೇಶಗಳ ಪ್ರತಿನಿಧಿಗಳು ಭಾಗವಹಿಸುವುದನ್ನು ತಪ್ಪಿಸಬೇಕು ಎಂದು ಲಷ್ಕರೆ ತೊಯ್ಬಾ, ಜೈಷೆ ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗಳು ಪ್ಲ್ಯಾನ್ ರೂಪಿಸಿದ್ದವು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಶ್ರೀನಗರದಲ್ಲಿ ಮೇ ಅಂತ್ಯದ ವೇಳೆಗೆ ಜಿ 20 ಪೂರ್ವಭಾವಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೇ ಉನ್ನತ ಮಟ್ಟದ ಸಭೆ ನಡೆಸಿ, ಕಾಶ್ಮೀರದ ಭದ್ರತಾ ಪರಿಸ್ಥಿತಿ ಪರಿಶೀಲನೆ ಮಾಡಿದ್ದಾರೆ.
ಸೆಕ್ಟರ್ನಲ್ಲಿರುವ ಭುಟ್ಟಾ ಡುರಿಯಾನ್ ಅರಣ್ಯ ಪ್ರದೇಶದ ಬಳಿ ಲಷ್ಕರೆ ತೊಯ್ಬಾ ಸಂಘಟನೆಯ ಸುಮಾರು 7 ಉಗ್ರರು ಅಡಗಿ ಕುಳಿತು ದುಷ್ಕೃತ್ಯ ನಡೆಸಿದ್ದರು. ಈ ದಾಳಿಯಲ್ಲಿ ಐವರು ಯೋಧರು ಮೃತಪಟ್ಟಿದ್ದರು.
ಪೂಂಚ್ ಮತ್ತು ರಾಜೌರಿ ನಡುವಿನ ಈ ಪ್ರದೇಶದಲ್ಲಿ ಸೇನಾ ಬೆಂಗಾವಲು ವಾಹನಗಳ ಚಲನೆ ಸದಾ ಇರುತ್ತದೆ. ಹೀಗಾಗಿ ರಾಷ್ಟ್ರೀಯ ರೈಫಲ್ಸ್ ಸಿಬ್ಬಂದಿಯೂ ಇಲ್ಲಿ ಸಕ್ರಿಯರಾಗಿ ಉಪಸ್ಥಿತರಿರುತ್ತಾರೆ. ಇದೇ ಕಾರಣಕ್ಕೆ ತಮ್ಮ ಎಂದಿನ ಜಾಗದಲ್ಲೇ ಟ್ರಕ್ ನಿಲ್ಲಿಸಿಕೊಂಡಿದ್ದರು.
ಉಗ್ರರು ಮೊದಲು ಸೇನಾ ಸಿಬ್ಬಂದಿಯನ್ನು ಕೊಂದು ನಂತರ ವಾಹನಕ್ಕೆ ಬೆಂಕಿ ಹಚ್ಚಿದರೋ ಅಥವಾ ಇವರು ಮಾಡಿದ ಗ್ರೆನೇಡ್ ದಾಳಿಯಿಂದಲೇ ಬೆಂಕಿ ಹೊತ್ತಿಕೊಂಡಿತೋ ಸ್ಪಷ್ಟವಾಗಿಲ್ಲ.
Poonch Terror Attack: ಗುರುವಾರ ಸುಮಾರು 3 ಗಂಟೆಗೆ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನಕ್ಕೆ ಬೆಂಕಿ ತಗುಲಿತ್ತು. ಮೊದಲಿಗೆ ಇದೊಂದು ಆಕಸ್ಮಿಕ ಘಟನೆ ಎಂದು ಭಾವಿಸಲಾಗಿತ್ತು. ಆದರೆ, ಆರಂಭಿಕ ಸೇನಾ ತನಿಖೆ ವೇಳೆ ಉಗ್ರ ಕೃತ್ಯ...
ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಜ.1ರಂದು ಉಗ್ರರು ನಡೆಸಿದ ಗುಂಡಿನ ದಾಳಿಗೆ(Terror attack) ಸರೋಜಾ ಹೆಸರಿನವರು ತನ್ನ ಇಬ್ಬರೂ ಮಕ್ಕಳನ್ನು ಕಳೆದುಕೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಪತಿಯನ್ನು ಕ್ಯಾನ್ಸರ್ ರೋಗದಿಂದಾಗಿ ಕಳೆದುಕೊಂಡಿದ್ದ ಅವರು ಇದೀಗ ಅನಾಥರಾಗಿದ್ದಾರೆ.
ರಾಜೌರಿಯಲ್ಲಿ ಮರುದಿನವೂ ಅಂದರೆ ಜನವರಿ 2ರಂದು ಒಂದು ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು.
ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಮನೆಯಲ್ಲಿ ಸಾಕಿದ್ದ ನಾಯಿ ಬೊಗಳಿದ್ದರಿಂದಾಗಿ ಕುಟುಂಬವೊಂದು ಉಗ್ರರಿಂದ (Terror attack) ಬಚಾವಾಗಿದೆ.