ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ಜಿಎಸ್‌ಟಿ ಸಮಿತಿಯ ೪೯ನೇ ಸಭೆ (GST Council Meeting) ನಡೆದಿದ್ದು, ಪೆನ್ಸಿಲ್ ಶಾರ್ಪ್‌ನರ್, ದ್ರವರೂಪದ ಬೆಲ್ಲ ಸೇರಿ ಕೆಲ ವಸ್ತುಗಳ ಮೇಲಿನ ಜಿಎಸ್‌ಟಿ ಇಳಿಸುವ ದಿಸೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರಿಂದ ಎರಡೂ ಉತ್ಪನ್ನಗಳು ಅಗ್ಗವಾಗಲಿವೆ.
“ಪೆನ್ಸಿಲ್ ಶಾರ್ಪ್‌ನರ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇ.೧೮ರಿಂದ ಶೇ.೧೨ಕ್ಕೆ ಇಳಿಸಲಾಗಿದೆ. ಹಾಗೆಯೇ, ದ್ರವರೂಪದ ಬೆಲ್ಲದ ಮೇಲಿನ ಜಿಎಸ್‌ಟಿಯನ್ನು ಶೇ.೧೮ರಿಂದ ಶೇ.೫ ಅಥವಾ ಶೂನ್ಯಕ್ಕೆ ಇಳಿಸಲಾಗಿದೆ. ಮೊದಲೇ ಪ್ಯಾಕ್ ಮಾಡಿದ ಬೆಲ್ಲಕ್ಕೆ ಶೇ.೫ರಷ್ಟು ಜಿಎಸ್‌ಟಿ ಅನ್ವಯವಾದರೆ, ಪ್ಯಾಕ್ ಮಾಡಿರದ ಬೆಲ್ಲಕ್ಕೆ ಜಿಎಸ್‌ಟಿಇರುವುದಿಲ್ಲ” ಎಂದು ಸಭೆಯ ಬಳಿಕ ಸುದ್ದಿಗಾರರಿಗೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಸೀತಾರಾಮನ್ ನೇತೃತ್ವದಲ್ಲಿ ಜಿಎಸ್‌ಟಿ ಸಮಿತಿ ಸಭೆ
ರಾಜ್ಯಗಳಿಗೆ 16,982 ಕೋಟಿ ರೂ. ಪರಿಹಾರ
ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಬಾಕಿ ಇರುವ ಜಿಎಸ್‌ಟಿ ಪರಿಹಾರವನ್ನು ನೀಡಲು ಕೂಡ ಜಿಎಸ್‌ಟಿ ಸಮಿತಿ ತೀರ್ಮಾನಿಸಿದೆ. “೨೦೨೨ರ ಜೂನ್ ತಿಂಗಳ ಶೇ.೫೦ರಷ್ಟು ಜಿಎಸ್‌ಟಿ ಪರಿಹಾರವನ್ನು ರಾಜ್ಯಗಳಿಗೆ ನೀಡಲಾಗಿದೆ. ಇದೇ ತಿಂಗಳಲ್ಲಿ ಬಾಕಿ ಇರುವ ಮೊತ್ತ ಸೇರಿ ಎಲ್ಲ ಬಾಕಿಯ ಮೊತ್ತವಾದ ೧೬,೯೮೨ ಕೋಟಿ ರೂಪಾಯಿಯನ್ನು ಈಗ ನೀಡಲಾಗುತ್ತದೆ” ಎಂದು ಮಾಹಿತಿ ನೀಡಿದರು.
ಜಿಎಸ್‌ಟಿ ಸಭೆ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ
ಜಿಎಸ್‌ಟಿ ಸಭೆಯ ಪ್ರಮುಖ ತೀರ್ಮಾನಗಳು
- ವಾರ್ಷಿಕ ೫ ಕೋಟಿ ರೂ.ವರೆಗೆ ತಡವಾಗಿ ರಿಟರ್ನ್ಸ್ ಸಲ್ಲಿಸುವವರಿಗೆ ದಿನಕ್ಕೆ ೨೫ ರೂ. ಶುಲ್ಕ
- ೫-೨೦ ಕೋಟಿ ರೂ.ವರೆಗಿನ ಆದಾಯಕ್ಕೆ ತಡವಾಗಿ ರಿಟರ್ನ್ಸ್ ಸಲ್ಲಿಸುವವರಿಗೆ ದಿನಕ್ಕೆ ೫೦ ರೂ. ಶುಲ್ಕ
- ಜಿಎಸ್‌ಟಿ ನ್ಯಾಯಾಧಿಕರಣ ಕುರಿತು ಜಿಎಸ್‌ಟಿ ಸದಸ್ಯರ ವರದಿ (GoM)ಯಲ್ಲಿ ತುಸು ಮಾರ್ಪಾಡು
- ಜಿಒಎಂನ ಸ್ಪೆಷಲ್ ಕಾಂಪೊಸಿಷನ್ ಸ್ಕೀಮ್ ಹಾಗೂ ಜಿಎಸ್‌ಟಿ ನ್ಯಾಯಾಧಿಕರಣದ ಕುರಿತ ವರದಿಗಳಿಗೆ ಸಭೆ ಸಮ್ಮತಿ
ಇದನ್ನೂ ಓದಿ: GST Collection record : ಜನವರಿಯಲ್ಲಿ 6,085 ಕೋಟಿ ರೂ. ಜಿಎಸ್‌ಟಿ ಸಂಗ್ರಹ, ಹೊಸ ದಾಖಲೆ ಬರೆದ ರಾಜ್ಯ: ಬೊಮ್ಮಾಯಿ ಹರ್ಷ