Site icon Vistara News

Gopal Italia Detained | ಗುಜರಾತ್‌ ಆಪ್‌ ಮುಖ್ಯಸ್ಥ ಪೊಲೀಸ್‌ ವಶಕ್ಕೆ, 3 ತಾಸು ಬಳಿಕ ಬಿಡುಗಡೆ, ಏನಿದು ಕೇಸ್?

AAP

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರೀಯ ಮಹಿಳಾ ಆಯೋಗದ (NCW) ಕಚೇರಿ ಎದುರು ಆಮ್‌ ಆದ್ಮಿ ಪಕ್ಷದ ಗುಜರಾತ್‌ ಘಟಕದ ಅಧ್ಯಕ್ಷ ಗೋಪಾಲ್‌ ಇಟಾಲಿಯಾ ಅವರನ್ನು ಪೊಲೀಸರು ವಶಕ್ಕೆ (Gopal Italia Detained) ಪಡೆದಿದ್ದಾರೆ. ಎನ್‌ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಅವರು ಗೋಪಾಲ್‌ ಇಟಾಲಿಯಾ ಅವರಿಗೆ ಸಮನ್ಸ್‌ ಜಾರಿಗೊಳಿಸಿದ್ದರು. ಅದರಂತೆ, ಗುರುವಾರ ಇಟಾಲಿಯಾ ಅವರು ವಿಚಾರಣೆಗೆ ಹಾಜರಾದರು. ಇದಾದ ನಂತರ ಪೊಲೀಸರು ವಶಕ್ಕೆ ಪಡೆದರು. ವಶಕ್ಕೆ ಪಡೆಯುತ್ತಲೇ ಮಹಿಳಾ ಆಯೋಗದ ಕಚೇರಿ ಎದುರು ಆಪ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಗೋಪಾಲ್‌ ಇಟಾಲಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀಚ ವ್ಯಕ್ತಿ ಎಂದು ಜರಿದಿದ್ದರು. ಅಲ್ಲದೆ, ಮಹಿಳೆಯರು ದೇವಾಲಯಕ್ಕೆ ಹೋಗಬಾರದು ಎಂಬರ್ಥದಲ್ಲಿ ಮಾತನಾಡಿದ್ದರು. ಈ ವಿಡಿಯೊಗಳು ವೈರಲ್‌ ಆಗಿದ್ದವು. ಹಾಗಾಗಿ, ಸಮನ್ಸ್‌ ಜಾರಿ ಮಾಡಲಾಗಿತ್ತು. ಹಾಗಾಗಿ, ಪೊಲೀಸರು ವಶಕ್ಕೆ ಪಡೆದು, ಮೂರು ತಾಸು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ರಾಜಕೀಯ ಪ್ರೇರಿತ ಸೆರೆ ಎಂದ ಇಟಾಲಿಯಾ

ರಾಜಕೀಯ ದುರುದ್ದೇಶದಿಂದಾಗಿ ಕೇಂದ್ರ ಸರ್ಕಾರವು ಆಪ್ ‌ಶಾಸಕರು, ಮುಖಂಡರು ಹಾಗೂ ಸಚಿವರ ಮೇಲೆ ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದೆ. ನಾನೊಬ್ಬ ಪಾಟಿದಾರ ಸಮುದಾಯಕ್ಕೆ ಸೇರಿದವನಾದ ಕಾರಣ ವಶಕ್ಕೆ ಪಡೆಯಲಾಗಿದೆ ಎಂದು ಇಟಾಲಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಜರಾತ್‌ನಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆಪ್‌ ಅಬ್ಬರದ ಪ್ರಚಾರ ನಡೆಸುತ್ತಿದೆ.

ಇದನ್ನೂ ಓದಿ | Amanatullah Khan | ದಿಲ್ಲಿಯಲ್ಲಿ ಆಪ್‌ಗೆ ಮತ್ತೊಂದು ಸಂಕಷ್ಟ, ಶಾಸಕ ಅಮಾನತುಲ್ಲಾ ಖಾನ್‌ ಬಂಧನ

Exit mobile version