Site icon Vistara News

Gujarat election | ಗುಜರಾತ್‌ ವಿಧಾನಸಭೆ ಚುನಾವಣೆ ದಿನಾಂಕ ಇಂದು ಮಧ್ಯಾಹ್ನ 12ಕ್ಕೆ ಘೋಷಣೆ

election

ನವ ದೆಹಲಿ: ಚುನಾವಣಾ ಆಯೋಗವು ಗುಜರಾತ್‌ ವಿಧಾನಸಭೆ ಚುನಾವಣೆಯ (Gujarat election) ದಿನಾಂಕವನ್ನು ಇಂದು ಮಧ್ಯಾಹ್ನ 12 ಗಂಟೆಗೆ ಘೋಷಿಸಲಿದೆ. ದಿಲ್ಲಿಯಲ್ಲಿ ಆಯೋಗವು ಪತ್ರಿಕಾ ಗೋಷ್ಠಿಯನ್ನು ಕರೆದಿದೆ.

ಒಟ್ಟು 182 ಸದಸ್ಯರನ್ನು ಒಳಗೊಂಡಿರುವ ಗುಜರಾತ್‌ ವಿಧಾನಸಭೆಯ ಅವಧಿ 2023ರ ಫೆಬ್ರವರಿ 18ಕ್ಕೆ ಅಂತ್ಯವಾಗಲಿದೆ. ಈ ನಡುವೆ ಕೇಂದ್ರ ಸರ್ಕಾರವು 160 ಸಿಆರ್‌ಪಿಎಫ್‌ ತುಕಡಿಗಳನ್ನು ಗುಜರಾತ್‌ಗೆ ರವಾನಿಸಿದೆ.

ಗುಜರಾತ್‌ನಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆಯೇ ಅಥವಾ ಎರಡು ಹಂತಗಳಲ್ಲಿ ನಡೆಯಲಿದೆಯೇ ಎಂಬುದಕ್ಕೆ ಇಂದು ಉತ್ತರ ಸಿಗಲಿದೆ. ಹೀಗಿದ್ದರೂ, ಡಿಸೆಂಬರ್‌ 8ಕ್ಕೆ ಮತ ಎಣಿಕೆ ನಡೆಯುವ ಸಾಧ್ಯತೆ ಇದೆ. ಹಿಮಾಚಲ ಪ್ರದೇಶದ ಅಸೆಂಬ್ಲಿ ಚುನಾವಣೆ ಫಲಿತಾಂಶ ಕೂಡ ಅಂದೇ ಪ್ರಕಟವಾಗಲಿದೆ.

2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 182ರಲ್ಲಿ 99 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್‌ 79 ಸೀಟುಗಳಲ್ಲಿ ಜಯ ಗಳಿಸಿತ್ತು. ಕಾಂಗ್ರೆಸ್‌ ಕಳೆದ 30 ವರ್ಷಗಳಲ್ಲಿಯೇ ಗರಿಷ್ಠ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಕಾಂಗ್ರೆಸ್‌ನ ಏಳಿಗೆಯ ನಡುವೆಯೂ ಬಿಜೆಪಿ ಬಹುಮತ ಗಳಿಸುವಲ್ಲಿ ಸಫಲವಾಗಿತ್ತು.

ಅಕ್ಟೋಬರ್‌ 14ರಂದು ಚುನಾವಣಾ ಆಯೋಗವು ಹಿಮಾಚಲಪ್ರದೇಶ ಅಸೆಂಬ್ಲಿ ಚುನಾವಣೆಯ ದಿನಾಂಕವನ್ನು ಘೋಷಿಸಿತ್ತು. ಅದು ನವೆಂಬರ್‌ 12ಕ್ಕೆ ನಡೆಯಲಿದೆ.

Exit mobile version