Site icon Vistara News

Gujarat Assembly Resolution: ಮೋದಿ ಕುರಿತು ಡಾಕ್ಯುಮೆಂಟರಿ, ಬಿಬಿಸಿ ವಿರುದ್ಧ ಗುಜರಾತ್‌ ಸರ್ಕಾರ ನಿರ್ಣಯ

Gujarat Assembly passes resolution against BBC For Documentary On Narendra Modi

ಬಿಬಿಸಿ ಡಾಕ್ಯುಮೆಂಟರಿ

ಗಾಂಧಿನಗರ: ಗುಜರಾತ್‌ನ ಗೋದ್ರಾದಲ್ಲಿ 2002ರಲ್ಲಿ ನಡೆದ ಹತ್ಯಾಕಾಂಡಕ್ಕೆ ನರೇಂದ್ರ ಮೋದಿ ಅವರೇ ಕಾರಣ ಎಂಬಂತೆ ಬಿಂಬಿಸಿರುವ ಬಿಬಿಸಿ ಡಾಕ್ಯುಮೆಂಟರಿ ‘ಇಂಡಿಯಾ: ದಿ ಮೋದಿ ಕ್ವಶ್ಚನ್‌’ಗೆ ಭಾರತ ಸೇರಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ವಿರೋಧ ವ್ಯಕ್ತವಾಗಿದೆ. ಭಾರತದಲ್ಲಿ ಪ್ರಸಾರ ಮಾಡಲು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದರ ಬೆನ್ನಲ್ಲೇ, ಬಿಬಿಸಿ ವಿರುದ್ಧ ಗುಜರಾತ್‌ ವಿಧಾನಸಭೆಯಲ್ಲಿ ನಿರ್ಣಯ (Gujarat Assembly Resolution) ಮಂಡಿಸಲಾಗಿದೆ.

“ಬಿಬಿಸಿಯ ಡಾಕ್ಯುಮೆಂಟರಿಯು ಕೇವಲ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಿರ್ಮಿಸಿದ್ದಲ್ಲ, ಅದು ದೇಶದ 135 ಕೋಟಿ ಜನರ ವಿರುದ್ಧ ನಿರ್ಮಿಸಿದ ಡಾಕ್ಯುಮೆಂಟರಿಯಾಗಿದೆ. ಹಾಗಾಗಿ, ಕೇಂದ್ರ ಸರ್ಕಾರವು ಬಿಬಿಸಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

“ನರೇಂದ್ರ ಮೋದಿ ಅವರು ತಮ್ಮ ಇಡೀ ಜೀವನವನ್ನು ದೇಶದ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ದೇಶವಿರೋಧಿ ಚಟುವಟಿಕೆಗಳಿಗೆ ಅಭಿವೃದ್ಧಿಯ ಮೂಲಕವೇ ತಿರುಗೇಟು ನೀಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಹೆಸರು ಉಚ್ಛ್ರಾಯ ಸ್ಥಿತಿಗೆ ತಲುಪಲು ಶ್ರಮಿಸಿದ್ದಾರೆ” ಎಂದು ರಾಜ್ಯ ಸಚಿವ ಹರ್ಷ್‌ ಸಂಘ್ವಿ ತಿಳಿಸಿದರು. ಕಳೆದ ಜನವರಿಯಲ್ಲಿ ಬಿಬಿಸಿ ಡಾಕ್ಯುಮೆಂಟರಿ ಬಿಡುಗಡೆಯಾಗಿದ್ದು, ಇದರ ವಿರುದ್ಧ ಕೇಂದ್ರ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರೂ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: New York Times On Kashmir: ಭಾರತದ ವಿರುದ್ಧ ನ್ಯೂಯಾರ್ಕ್‌ ಟೈಮ್ಸ್‌ ಪಿತೂರಿ, ಕಾಶ್ಮೀರ ಕುರಿತ ಲೇಖನಕ್ಕೆ ಕೇಂದ್ರ ಖಂಡನೆ

Exit mobile version