Site icon Vistara News

Defamation Case: ದಿಲ್ಲಿ ಸಿಎಂಗೆ ಮತ್ತೆ ಹಿನ್ನಡೆ! ಸಮನ್ಸ್ ಪ್ರಶ್ನಿಸಿದ್ದ ಪರಿಷ್ಕರಣೆ ಅರ್ಜಿ ತಿರಸ್ಕರಿಸಿದ ಸೆಷನ್ ಕೋರ್ಟ್

ED summons to Arvind Kejriwal about Delhi Liquor scam, Conspiracy to arrest says App

ಅಹಮದಾಬಾದ್, ಗುಜರಾತ್: ಮಾನನಷ್ಟ ಮೊಕದ್ದಮೆ (Defamation Case) ಸಂಬಂಧಿ ಪ್ರಕರಣದಲ್ಲಿ ದಿಲ್ಲಿ ಸಿಎಂ ಮತ್ತೆ ಹಿನ್ನಡೆ ಅನುಭವಿಸಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಮತ್ತು ಆಮ್ ಆದ್ಮಿ (Aam Aadmi Party) ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ (Sanjay Singh) ಅವರು ತಮ್ಮ ವಿರುದ್ಧ ದಾಖಲಾದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನೀಡಿದ ಸಮನ್ಸ್ ಪ್ರಶ್ನಿಸಿ ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಯನ್ನು ಅಹಮದಾಬಾದ್‌ನ ಸೆಷನ್ಸ್ ನ್ಯಾಯಾಲಯವು (Ahmedabad Sessions Court) ಗುರುವಾರ ವಜಾಗೊಳಿಸಿದೆ. ಗುಜರಾತ್ ವಿಶ್ವವಿದ್ಯಾಲಯವು ಈ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜೆ.ಎಂ. ಬ್ರಹ್ಮಭಟ್ ಅವರು ದೂರಿನ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದಾರೆ ಮತ್ತು ಪ್ರಕರಣದ ಸತ್ಯ ಮತ್ತು ಸಂದರ್ಭಗಳು ಮತ್ತು ಡಿಜಿಟಲ್ ಆಡಿಯೊ-ವಿಡಿಯೋ ತುಣುಕನ್ನು ಕೂಲಂಕಷವಾಗಿ ಮೌಲ್ಯಮಾಪನ ಮಾಡಿದ ನಂತರ ಅವರ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆಂದು ಹೇಳಿದರು.

ಪ್ರಸ್ತುತ ಪ್ರಕರಣದ ಸತ್ಯಗಳನ್ನು ಪರಿಗಣಿಸಿರುವ ಮ್ಯಾಜಿಸ್ಟ್ರೇಟ್ ಅವರು ವಿಚಾರಣೆಯ ತೀರ್ಮಾನಕ್ಕೆ ತಲುಪಿದ್ದಾರೆ ಮತ್ತು ದಾಖಲೆಯಲ್ಲಿರುವ ವಿಷಯವನ್ನು ವಿಶ್ಲೇಷಿಸಿದ ನಂತರವೇ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಾಗಿ, ಇದು ಕಾನೂನುಬಾಹಿರ ಅಥವಾ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ, ಈ ಸಂದರ್ಭಗಳಲ್ಲಿ, ಈ ನ್ಯಾಯಾಲಯವು ಪ್ರಸ್ತುತ ಪರಿಷ್ಕರಣೆ ಅರ್ಜಿಯಲ್ಲಿ ಯಾವುದೇ ಅರ್ಹತೆಯನ್ನು ಕಾಣುತ್ತಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Delhi Liquor Policy Case: ಸಿಬಿಐನಿಂದ ಕೇಜ್ರಿವಾಲ್ ವಿಚಾರಣೆ, ಬಂಧನದ ಭೀತಿ? ಆಪ್ ತುರ್ತು ಸಭೆ

ಪ್ರಧಾನಿ ನರೇಂದ್ರ ಮೋದಿ ಶೈಕ್ಷಣಿಕ ವಿವರಗಳನ್ನು ನೀಡುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ಮಾಹಿತಿ ಹಕ್ಕು ಆಯೋಗ ಆದೇಶಿಸಿತ್ತು. ಕಳೆದ ಮಾರ್ಚ್ ತಿಂಗಳಲ್ಲಿ ಗುಜರಾತ್ ಹೈಕೋರ್ಟ್ ಈ ಆದೇಶವನ್ನು ತೆಗೆದು ಹಾಕಿತ್ತು. ಅಲ್ಲದೇ, ಮಾಹಿತಿಯನ್ನು ಕೋರಿದ್ದ ಅರವಿಂದ್ ಕೇಜ್ರಿವಾಲ್ ಹಾಗೂ ಸಿಂಗ್ ವಿರುದ್ಧ ಹೈಕೋರ್ಟ್ 25 ಸಾವಿರ ದಂಡವನ್ನು ವಿಧಿಸಿತ್ತು. ಈ ವೇಳೆ ಕೇಜ್ರಿವಾಲ್ ಹಾಗೂ ಸಿಂಗ್ ಅವರು ನೀಡಿದ ಹೇಳಿಕೆಗಳ ವಿರುದ್ಧ ಗುಜರಾತ್ ವಿಶ್ವವಿದ್ಯಾಲಯವು ಮಾನನಷ್ಟು ಮೊಕದ್ದಮ್ಮೆಯನ್ನು ದಾಖಲಿಸಿತ್ತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version