Site icon Vistara News

Gujarat Election | ಅಡುಗೆ ಅನಿಲ ಸಿಲಿಂಡರ್‌ನೊಂದಿಗೆ ಸೈಕಲ್ ಮೇಲೆ ಬಂದು ವೋಟ್ ಮಾಡಿದ ಕಾಂಗ್ರೆಸ್ ಶಾಸಕ

Congress MLA @ Gujarat Election

ನವದೆಹಲಿ: ಗುಜರಾತ್‌ ವಿಧಾನಸಭೆ ಚುನಾವಣೆಗೆ (Gujarat Election) ಗುರುವಾರ ಮೊದಲನೆ ಹಂತದ ಮತದಾನ ನಡೆಯುತ್ತಿದ್ದು, ಕಾಂಗ್ರೆಸ್ ಶಾಸಕ ಪರೇಶ್ ಧನಾನಿ ಅವರು ಮತದಾನ ಕೇಂದ್ರಕ್ಕೆ ಸೈಕಲ್ ಮೇಲೆ ಅಡುಗೆ ಅನಿಲ ಸಿಲಿಂಡರ್‌ನೊಂದಿಗೆ ಬಂದು ಗಮನ ಸೆಳೆದರು. ಈ ಮೂಲಕ ಅವರು ಸಿಲಿಂಡರ್ ಬೆಲೆ ಹೆಚ್ಚಳ ವಿರುದ್ಧ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದರು.

ಬಿಜೆಪಿ ಸರ್ಕಾರದ ದುರಾಡಳಿತದ ಫಲವಾಗಿ ಗುಜರಾತ್‌ನಲ್ಲಿ ನಿರುದ್ಯೋಗ ಮತ್ತು ಹಣದುಬ್ಬರ ಹೆಚ್ಚಳವಾಗಿದೆ. ಅಡುಗೆ ಅನಿಲ ಸಿಲಿಂಡರ್ ಮತ್ತು ಇಂಧನ ದರಗಳು ಗಗನಮುಖಿಯಾಗಿವೆ. ಶಿಕ್ಷಣವನ್ನು ಖಾಸಗಿಕರಣಗೊಳಿಸಲಾಗುತ್ತಿದೆ. ಈ ಬಾರಿ ಅಧಿಕಾರದ ಹಸ್ತಾಂತರವಾಗಲಿದ್ದು, ಕಾಂಗ್ರೆಸ್ ಸರ್ಕಾರ ಬರಲಿದೆ ಎಂದು ಅಮ್ರೇಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪರೇಶ್ ಧನಾನಿ ಅವರು ತಮ್ಮ ಮತವನ್ನು ಚಲಾಯಿಸಿ ತಿಳಿಸಿದರು.

ಗುರುವಾರ ಬೆಳಗ್ಗೆ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಅದರಲ್ಲೂ ಮೊದಲ ಬಾರಿಗೆ ಮತ ಚಲಾಯಿಸಲು ಅರ್ಹರಾಗಿರುವವರು ತಪ್ಪದೇ ಮತ ಚಲಾಯಿಸಲು ಕೋರಿದರು. ಎರಡನೇ ಹಂತದ ಮತದಾನವು ಡಿಸೆಂಬರ್ 5ರಂದು ನಡೆಯಲಿದ್ದು, ಡಿ.8ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ | Opinion Poll | ಗುಜರಾತ್‌, ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿಗೇ ಅಧಿಕಾರ? ಸಮೀಕ್ಷೆ ಹೇಳುವುದೇನು?

Exit mobile version